ವಿದ್ಯಾ ಬಾಲನ್ ಮೊದಲ ಬಾಯ್‌ಫ್ರೆಂಡ್ ಯಾರು ; ಪ್ರೀತಿ ಹೆಸರಿನಲ್ಲಿ ಮೋಸ ಹೋಗಿದ್ದೇ ಎಂದ ನಟಿ..!
ಮರ ಸುತ್ತುವ ಪಾತ್ರಗಳಿಗೆ ಮಣೆ ಹಾಕದ ನಟಿಯರಲ್ಲಿ ವಿದ್ಯಾ ಬಾಲನ್ ಕೂಡ ಒಬ್ಬರು ಹಾಗೂ ಪ್ರಮುಖರು. ಸದಾ ಕಾಲ ಅಭಿನಯಕ್ಕೆ ಪ್ರಾಶಸ್ತ್ಯ ಇರುವಂತಹ ಪಾತ್ರಗಳನ್ನೇ ಹುಡುಕುವ ವಿದ್ಯಾ ಬಾಲನ್ ಸದ್ಯಕ್ಕೆ ಸುಖಿ ಸಂಸಾರಿ.
ಸಿದ್ದಾರ್ಥ್ ರಾಯ್ ಕಪೂರ್ ಜೊತೆ ಕಳೆದೊಂದು ಹನ್ನೆರಡು ವರ್ಷಗಳಿಂದ ನೆಮ್ಮದಿಯ ಜೀವನ ನಡೆಸುತ್ತಿರುವ ವಿದ್ಯಾ, ಹುಡುಗನೊಬ್ಬನಿಂದ ತಮ್ಮ ನೆಮ್ಮದಿಯನ್ನ ಕೆಡಿಸಿಕೊಂಡಿದ್ದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಆಗಿದ್ದೆಲ್ಲ ಒಳ್ಳೇಯದಕ್ಕೆ.. ಆಗ್ತಿರುವುದೆಲ್ಲವೂ ಒಳ್ಳೇಯದಕ್ಕೆ ಎಂದು ನಸು ನಕ್ಕಿದ್ದಾರೆ.

ಹೌದು, ಆಗಿನ್ನೂ ವಿದ್ಯಾ ಚಿತ್ರರಂಗಕ್ಕೆ ಬಂದಿರಲಿಲ್ಲ. ಕಾಲೇಜ್ ನ ಕ್ಯಾಂಪಸ್‌ನಲ್ಲಿನ ಸುಂದರ ದಿನಗಳವು. ವಯೋಸಹಜ ಆಕರ್ಷಣೆಗೆ ಒಳಗಾಗಿದ್ದ ವಿದ್ಯಾ ಬಾಲನ್ ಒಬ್ಬ ಯುವಕನಿಗೆ ಮನಸನ್ನ ಕೊಟ್ಟಿದ್ದರು. ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಆದರೆ ಅದೊಂದು ದಿನ ಪ್ರೇಮಿಗಳ ದಿನದಂದು ನಡೆದ ಚಿಕ್ಕ ಜಗಳ ಪ್ರೀತಿಯ ಬಗ್ಗೆ ವಿದ್ಯಾ ಅವರಲ್ಲಿದ್ದ ಪರಿಕಲ್ಪನೆಯನ್ನೇ ಬದಲಿಸಿತು. ಯಾಕೆಂದರೆ ವಿದ್ಯಾ ಜೊತೆ ಕಿತ್ತಾಡಿಕೊಂಡ ಆ ಯುವಕ, ಮರು ಕ್ಷಣವೇ ವಿದ್ಯಾ ಅವರತ್ತ ತಿರುಗಿ ನಾನು ನನ್ನ ಹಳೆಯ ಪ್ರೇಯಸಿಯನ್ನ ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿ ಬಿಟ್ಟಿದ್ದ. ಆ ಕ್ಷಣ ವಿದ್ಯಾಗೆ ಆಕಾಶವೇ ತಲೆಯ ಮೇಲೆ ಕುಸಿದು ಬಿದ್ದಂತೆ ಆಗಿತ್ತು.
ಪ್ರೀತಿಯೆಂಬ ಮೋಹದ ಈ ಸುಳಿಯಿಂದ ಹೊರ ಬರಲು, ವಿದ್ಯಾ ಬಾಲನ್ ಗೆ ಅನೇಕ ದಿನಗಳೇ ಹಿಡಿದವು. ಅಲ್ಲಿಂದಾಚೆ.. ವಿದ್ಯಾ ಇನ್ಯಾವತ್ತು ಪ್ರೀತಿ ಪ್ರೇಮ ಎಂದು ಸುತ್ತಾಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ ತಮ್ಮ ಗಮ್ಯದತ್ತ ಗಮನ ಕೊಟ್ಟರು. ಬೆವರು ಸುರಿಸಿ ಚಿತ್ರರಂಗದಲ್ಲಿ ಬೆಳೆದು ನಿಂತರು. ಚಿತ್ರರಂಗದಲ್ಲಿ ಒಂದು ಸ್ಥಾನ ಮಾನವನ್ನ ಸಂಪಾದಿಸಿ ಒಂದು ಹಂತಕ್ಕೆ ತಲುಪಿದ ಮೇಲೆ ಸಿದ್ಧಾರ್ಥ್ ರಾಯ್ ಕಪೂರ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇನ್ನೂ ನಾವು ನಿಮಗೆ ಆಗ್ಲೇ ಹೇಳಿದಂತೆ, ವಿದ್ಯಾ ಬಾಲನ್ ಮಹಿಳಾ ಪ್ರಧಾನ ಸಿನಿಮಾಗಳಿಗೆ ಮೊದಲ ಪ್ರಾಶಸ್ಯ್ತವನ್ನ ನೀಡುತ್ತಾ ಬಂದವರು. ಆದರೆ ವಿದ್ಯಾ ಅವರ ಈ ನಡೆ ಅನೇಕ ನಾಯಕರಿಗೆ ಇಷ್ಟ ಇಲ್ಲ. ಖುದ್ದು ವಿದ್ಯಾ ಈ ಮಾತನ್ನ ಹೇಳಿದ್ದಾರೆ ಕೂಡ.
ನಮ್ಮಲ್ಲಿ ಅನೇಕ ನಾಯಕರು ಸಿದ್ಧ ಸೂತ್ರಕ್ಕೆ ಜೋತು ಬಿದ್ದು ಕೆಲಸವನ್ನ ಮಾಡುತ್ತಿದ್ದಾರೆ. ಆದರೆ ನಾವು ಮಹಿಳೆಯರು ಅವರಿಗಿಂತ ಉತ್ತಮಾವದ ಚಿತ್ರಗಳನ್ನ ಮಾಡುತ್ತಿದ್ದೇವೆ. ನಾವು ಮಾಡ್ತಿರುವ ಈ ಪ್ರಯತ್ನಗಳನ್ನ ಜನ ಮೆಚ್ಚಿಕೊಂಡರಾ ಇಲ್ಲವಾ ಅನ್ನುವುದು ಬೇರೆ ವಿಚಾರವಾದರೂ, ಮಹಿಳೆಯರು ಹೆಚ್ಚು ಹೈಲೆಟ್ ಆಗುತ್ತಿರುವುದು ಕೆಲ ಹೀರೋಗಳಿಗೆ ಖುಷಿಯನ್ನಂತೂ ಕೊಡ್ತಿಲ್ಲ ಅಂದಿದ್ದಾರೆ.

ಇಂಥ ವಿದ್ಯಾ ಸದ್ಯಕ್ಕೆ ದೊ ಔರ್ ದೋ ಪ್ಯಾರ್' ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಕ್ಯಾಮ್ ಚಿತ್ರದ ಮೂಲಕ ಖ್ಯಾತಿಯ ಶಿಖರಕ್ಕೇರಿದ ಪ್ರತೀಕ್ ಗಾಂಧಿ ಇಲ್ಲಿ ವಿದ್ಯಾಗೆ ನಾಯಕ. ಇನ್ನೂ ಇಲಿಯಾನ ಕೂಡ ಈ ಚಿತ್ರದಲ್ಲಿದ್ದಾರೆ
ಒಟ್ನಲ್ಲಿ ವಿದ್ಯಾ, ಪ್ರೇಮದ ಹೆಸರಿನಲ್ಲಿ ತಾನು ಹೇಗೆ ಮೋಸ ಹೋದೆ ಅನ್ನುವ ಕಥೆಯನ್ನ ಹಂಚಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ವಿದ್ಯಾ ಬಾಲನ್ ಅವರ ಈ ಮಾತುಗಳ ಬಗ್ಗೆ ಬಾಲಿವುಡ್ ನಲ್ಲಿ ಸದ್ಯಕ್ಕೆ ವ್ಯಾಪಕ ಚರ್ಚೆ ನಡೆಯುತ್ತಿದೆ


Click it and Unblock the Notifications











