ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಎಂದ ನಿರ್ದೇಶಕನಿಗೆ ಈ ನಟಿ ಹೇಳಿದ್ದೇನು?
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೊಸದರಲ್ಲಿ ನಟಿಮಣಿಯರ ಜೊತೆ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೇಗೆ ವರ್ತನೆ ಮಾಡುತ್ತಾರೆ ಎನ್ನುವ ಬಗ್ಗೆ ಬಾಲಿವುಡ್ ನಟಿ ಜರೀನ್ ಖಾನ್ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನ ವೊಂದರಲ್ಲಿ ಮಾತನಾಡಿದ ಜರೀನ್ ತನಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಖ್ಯಾತ ನಟಿಯರಾದ ರಾಧಿಕಾ ಆಪ್ಟೆ, ಕಲ್ಕಿ ಕೊಚ್ಚಿನ್, ಟಿಸ್ಕಾ ಚೋಪ್ರಾ ಸೇರಿದಂತೆ ಅನೇಕರು ಕಾಸ್ಟಿಂಗ್ ಕೌಚ್ ಅನುಭವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗ ನಟಿ ಜರೀನ್ ಖಾನ್ ನಿರ್ದೇಶಕರೊಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಿರ್ದೇಶಕರೊಬ್ಬರು ಕಿಸ್ಸಿಂಗ್ ದೃಶ್ಯಗಳನ್ನು ರಿಹರ್ಸಲ್ ಮಾಡೋಣ ಬಾ ಎಂದು ಜರೀನ್ ಖಾನ್ ಕರೆದಿದ್ದರಂತೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೊಸದರಲ್ಲಿ ಅನುಭವಿಸಿದ ಈ ಕಹಿ ಘಟನೆಯನ್ನು ತಡವಾಗಿ ಹೇಳಿಕೊಂಡಿದ್ದಾರೆ.

ಕಿಸ್ಸಿಂಗ್ ದೃಶ್ಯ ರಿಹರ್ಸಲ್ ಮಾಡೋಣ ಎಂದು ನಿರ್ದೇಶಕರೊಬ್ಬರು ಕರೆದಿದ್ದರಂತೆ. ನಿರ್ದೇಶಕರು ಹೇಳಿದ ತಕ್ಷಣ ಒಮ್ಮೆ ಶಾಕ್ ಆದ ಜರೀನ್ ಖಾನ್ ನಂತರ "ನಾನು ಯಾವುದೆ ಕಿಸ್ಸಿಂಗ್ ದೃಶ್ಯವನ್ನು ರಿಹರ್ಸಲ್ ಮಾಡುವುದಿಲ್ಲ" ಎಂದು ಖಡಕ್ ಆಗಿ ಹೇಳಿದ್ರಂತೆ.
ಅಲ್ಲದೆ ಮತ್ತೊಂದು ಘಟನೆಯನ್ನು ಹಂಚಿಕೊಂಡಿದ್ದಾರೆ. "ಸ್ನೇಹಿತೆಗಿಂತ ಹೆಚ್ಚಿನ ಸಂಬಂಧ ನನ್ನ ಜೊತೆ ಹೊಂದಿರಬೇಕು" ಎಂದು ಕೇಳಿದ್ದರಂತೆ. ಆದ್ರೆ ಜರೀನ್ ಖಾನ್ ಯಾವುದಕ್ಕು ಒಪ್ಪಿಗೆ ನೀಡಿಲ್ಲವಂತೆ. ಇಂದು ಜರೀನ್ ಬಾಲಿವುಡ್ ನ ಖ್ಯಾತ ನಟಿಯಾಗಿ ಬೆಳೆದುನಿಂತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಜರೀನ್ ಖಾನ್ ನಂತರ ರೆಡಿ, ಹೌಸ್ ಫುಲ್-2 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications