ಸಲಿಂಗಕಾಮಿಯಾದ ಬಾಲಿವುಡ್ ನಟಿ ಜರೀನ್ ಖಾನ್ ಹೇಳಿದ್ದೇನು?
Recommended Video
ಬಾಲಿವುಡ್ ನಟಿ ಜರೀನ್ ಖಾನ್ ಸಲಿಂಗಕಾಮಿಯಾಗಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ವೀರ್' ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಜರೀನ್, ನಿಜಕ್ಕೂ ಸಲಿಂಗಕಾಮಿನ ಅಂತ ಅಚ್ಚರಿಪಡಬೇಡಿ, ಜರೀನ್ ಖಾನ್ ಸಲಿಂಗಕಾಮಿಯಾಗಿ ಬದಲಾಗಿದ್ದು ಸಿನಿಮಾಗಾಗಿ. ಹೌದು, ಜರೀನ್ ಸದ್ಯ 'ಹಂ ಬಿ ಅಕೇಲೆ ತುಂ ಅಕೇಲೆ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜರೀನ್ ಸಲಿಂಗಕಾಮಿಗಳ ಬಗ್ಗೆ ಹೇಳಿದ್ದಾರೆ.
ಸಿನಿಮಾದಲ್ಲಿ ಮಾತ್ರ ಸಲಿಂಗಕಾಮದ ಬಗ್ಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಲ್ಲದೆ, ನಿಜ ಜೀವನದಲ್ಲೂ ಜರೀನ್ ಸಲಿಂಗಮಾಮದ ಬಗ್ಗೆ ಪಾಠಮಾಡಿದ್ದಾರೆ. ಸಲಿಂಗಕಾಮ ಸಹಸ ಪ್ರಕ್ರಿಯೆಗಳಲ್ಲಿ ಒಂದು ಎಂದು ಹೇಳಿದ್ದಾರೆ. ಸಿನಿಮಾ ಮೂಲಕ ತಿಳಿಸಿಕೊಡಬೇಕು, ಸಮಾಜವು ಬೆಂಬಲಿಸದಿದ್ದರೆ ಸಲಿಂಗಕಾಮಿಗಳು ಹೇಗೆ ಮುಕ್ತವಾಗಿ ಬದುಕಲು ಸಾಧ್ಯ ಎಂದು ಜರೀನ್ ಪ್ರಶ್ನಿಸಿದ್ದಾರೆ.
"ಈ ಸಿನಿಮಾದ ಕಥೆ ಕೇಳಿದಾಗ ಎಷ್ಟು ಮಹತ್ವದ್ದಾಗಿದೆ ಎಂದು ಅರಿತುಕೊಂಡು ಸಿನಿಮಾ ಒಪ್ಪಿಕೊಂಡೆ. ಸುಪ್ರಿಂ ಕೋರ್ಟ್ ಸಹ ಇದಕ್ಕೆ ಸಮ್ಮತಿ ಸೂಚಿಸಿದೆ. ಸಲಿಂಗಕಾಮಿಗಳು ನಮ್ಮೆಲ್ಲರಂತೆ ಸಾಮಾನ್ಯರು. ಸಮಾಜ ಮತ್ತು ನಮ್ಮ ಪಾಲಕರು ಇದನ್ನು ಒಪ್ಪಿಕೊಳ್ಳಲು ಸಂಪ್ರದಾಯ ಅಡ್ಡಿ ಬರುತ್ತದೆ. ಆದರೆ ಅನಿವಾರ್ಯ ಎಂಬುದು ಅವರಿಗೆ ತಿಳಿದಿಲ್ಲ" ಎಂದು ಜರೀನ್ ಹೇಳಿದ್ದಾರೆ.

"ಯುವ ಈ ಬಗ್ಗೆ ಮಾತನಾಡಿಕೊಳ್ಳುತ್ತಿದೆ. ಆದರೆ ಸಮಾಜ ಬೆಂಬಲಿಸದಿದ್ದರೆ ಅವರು ಹೆಗೆ ಮುಕ್ತವಾಗಿ ಬದುಕಲು ಸಾಧ್ಯ" ಎಂದಿದ್ದಾರೆ. ಜೊತೆಗೆ ಜರೀನ್ ಸಲಿಂಗಕಾಮಿ ಸ್ನೇಹಿತನ ಬಗ್ಗೆಯೂ ಹೇಳಿದ್ದಾರೆ. "ನನ್ನ ಸ್ನೇಹಿತನೊಬ್ಬ ಸಲಿಂಗಕಾಮಿಯಾಗಿದ್ದಾನೆ. ಆತನಿಗೆ ಅವನ ಮನೆಯವರು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಆತನಿಗೆ ಇಷ್ಟವಿಲ್ಲ. ಸಂಪ್ರದಾಯಸ್ಥ ಅಪ್ಪ ಅಮ್ಮನಿಗೆ ಇದು ಇಷ್ಟವಾಗುವುದಿಲ್ಲ ಎಂಬುದು ಗೊತ್ತಿದೆ. ಹಾಗಾಗಿ ಈ ಬಗ್ಗೆ ಸಿನಿಮಾಗಳ ಮೂಲಕ ಜನರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎನ್ನುವುದು ಜರೀನ್ ಅಭಿಪ್ರಾಯ.
ಅಂದ್ಹಾಗೆ ಚಿತ್ರದಲ್ಲಿ ಜರೀನ್ ಜೊತೆ ಅನ್ಶುಮಾನ್ ಸಲಿಂಗಕಾಮಿಯಾಗಿ ಕಾಣಿಸಿಕೊಡಿದ್ದಾರೆ. ಚಿತ್ರಕ್ಕೆ ಹರೀಶ್ ವ್ಯಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ನವೆಂಬರ್ ಇಂದಿನಿಂದ ಮ್ಯಾನ್ ಹ್ಯಾಟನ್ ನಲ್ಲಿ ನಡೆಯುವ ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆಯಂತೆ.


Click it and Unblock the Notifications