Dunki: ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಫ್ಯಾನ್ಸ್!
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ನಟಿಸಿರುವ 'ಡಂಕಿ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಶಾರುಖ್ ಖಾನ್ ಈಗಾಗಲೇ ಈ ವರ್ಷದಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ಭರ್ಜರಿ ಹಿಟ್ ನೀಡಲು ಸಿದ್ಧರಾಗಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ.
ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಸಂಭ್ರಮಿಸಲು ಪ್ರಪಂಚದಾದ್ಯಂತದ ಶಾರುಖ್ ಖಾನ್ ಅಭಿಮಾನಿಗಳು ಈ ಡಿಸೆಂಬರ್‌ನಲ್ಲಿ ಭಾರತದಲ್ಲಿ 'ಡಂಕಿ' ಸಿನಿಮಾ ವೀಕ್ಷಿಸಲು ಬರಲಿದ್ದಾರೆ. ಪಕ್ಕದ ನೇಪಾಳ, ಕೆನಡಾ, ಯುಎಸಸ್‌ಎ, ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100 ಕ್ಕೂ ಹೆಚ್ಚು ಅಭಿಮಾನಿಗಳು ಭಾರತಕ್ಕೆ ಬರುತ್ತಿದ್ದಾರೆ.

'ಡಂಕಿ'ಗಾಗಿ ಭಾರತಕ್ಕೆ ಬರುತ್ತಿದ್ದಾರೆ ಎಸ್‌ಆರ್‌ಕೆ ಫ್ಯಾನ್ಸ್!
ನಟ ಶಾರುಖ್ ಖಾನ್ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಪಠಾಣ್' ಸಿನಿಮಾ ಸೂಪರ್ ಹಿಟ್ ಆಗಿದೆ. ಅದರ ಬಳಿಕ ಬಿಡುಗಡೆ ಆದ ಅಟ್ಲಿ ನಿರ್ದೇಶನದ 'ಜವಾನ್' ಸಹ ಬ್ಲಾಕ್ ಬಸ್ಟರ್ ಆಗಿದೆ. ಇವುಗಳ ಬಳಿಕ ಮೂರನೇ ಹಿಟ್ ನೀಡಲು ಶಾರುಖ್ ನಟನೆಯ 'ಡಂಕಿ' ರೆಡಿಯಾಗಿದೆ.
ಪ್ರತಿ ಬಾರಿ ನೆಚ್ಚಿನ ನಟನ ಸಿನಿಮಾ ಬಿಡುಗಡೆಗೆ ಹಲವು ಕಾರ್ಯಕ್ರಮಗಳು, ಪ್ಲ್ಯಾನ್‌ಗಳ ಮೂಲಕ ಶಾರುಖ್ ಖಾನ್ ಅಭಿಮಾನಿಗಳು ಸಮಭ್ರಮಿಸುತ್ತಾರೆ. ಸಿನಿಮಾಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾರೆ. ಶಾರುಖ್ ಖಾನ್ ಅವರ ಅಭಿಮಾನಿ ಸಂಘಗಳು ಮತ್ತೊಮ್ಮೆ 'ಡಂಕಿ' ಸಿನಿಮಾಗಾಗಿ ಹೊಸ ಪ್ರಯತ್ನ ಮಾಡಿದ್ದಾರೆ.
'ಡಂಕಿ' ಸಿನಿಮಾದ ಡ್ರಾಪ್ 1 ಹಾಗೂ ಡ್ರಾಪ್ 2 ಹಿಟ್ ಆಗಿದೆ. ಇನ್ನೇನೂ ಚಿತ್ರ ತೆರೆಗೆ ಬರಲು ಕೆಲ ದಿನಗಳು ಮಾತ್ರ ಬಾಕಿ ಉಳಿದ್ದು, ಡಂಕಿ ಸಿನಿಮಾ ನೋಡಲು ವಿದೇಶಗಳಿಂದ ಭಾರತಕ್ಕೆ ಕಿಂಗ್ ಖಾನ್ ಶಾರುಖ್ ಖಾನ್ ಫ್ಯಾನ್ಸ್ ಆಗಮಿಸುತ್ತಿದ್ದಾರೆ. ನೇಪಾಳ, ಕೆನಡಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100 ಕ್ಕೂ ಹೆಚ್ಚು ಅಭಿಮಾನಿಗಳು ಬರುತ್ತಿದ್ದಾರೆ.

ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆಗೆ ಡಂಕಿ ನೋಡುವ ಸಂಭ್ರಮದಲ್ಲಿ ಫ್ಯಾನ್ಸ್!
ಮೂಲವೊಂದರ ಪ್ರಕಾರ, "ಈ ಅಭಿಮಾನಿಗಳು ವಾಸಿಸುವ ದೇಶಗಳಲ್ಲಿಯೂ 'ಡಂಕಿ' ಬಿಡುಗಡೆಯಾಗುತ್ತದೆ. ಆದರೆ, ಈ ಸಿನಿಮಾ ಭಾರತದಲ್ಲಿನ ಅವರ ಕುಟುಂಬಗಳು ಮತ್ತು ಸ್ನೇಹಿತರನ್ನು ನೆನಪಿಸಿವೆ. ಹೀಗಾಗಿ ಅವರು ತಮ್ಮ ಪ್ರೀತಿಪಾತ್ರರ ಜೊತೆಗೆ ಶಾರುಖ್ ಖಾನ್ ಚಿತ್ರ ಡಂಕಿಯನ್ನು ನೋಡಲು ಬಯಸುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಅಭಿಮಾನಿಗಳು ಬರುವ ನಿರೀಕ್ಷೆಯಿದೆ" ಎಂದಿದೆ.
'ಡಂಕಿ' ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಮತ್ತೊಂದು ವಿಶಿಷ್ಟ ಸಿನಿಮಾ. ಭಾರತದ ಪಂಜಾಬ್ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಾಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತೆಗೆಯಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ 'ಡಂಕಿ'ಗೆ ಕಥೆ ಹೆಣೆದಿದ್ದಾರೆ. ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಶಾರುಖ್ ಖಾನ್ ಹೊರತುಪಡಿಸಿ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ಸೇರಿದ್ದಾರೆ. 'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.


Click it and Unblock the Notifications











