ಬಾಕ್ಸ್ ಆಫೀಸಿನ ಮಾಹಾರಾಣಿ ದೀಪಿಕಾ ಪಡುಕೋಣೆ

By ಉದಯರವಿ

ಸಾಮಾನ್ಯವಾಗಿ ಚಿತ್ರವೊಂದು ಭರ್ಜರಿ ಕಲೆಕ್ಷನ್ ಮಾಡಿದರೆ ಅವರ ಸಂಪೂರ್ಣ ಗೆಲುವು ನಾಯಕ ನಟನಿಗೆ ಸಲ್ಲಿಸುತ್ತಾರೆ. ಅದೇ ಚಿತ್ರ ಮಕಾಡೆ ಮಲಗಿದರೆ ನಿರ್ದೇಶಕನ ಮುಡಿಗೆ ಅದರ ಸೋಲನ್ನು ಕಟ್ಟುತ್ತಾರೆ. ಆದರೆ ಚಿತ್ರ ಗೆಲ್ಲಲಿ, ಸೋಲಲಿ ನಾಯಕಿಯ ಕಥೆಯನ್ನು ಯಾರೂ ಕೇಳೋಲ್ಲ.

ಆದರೆ ಬಾಲಿವುಡ್ ಕಥೆನೇ ಬೇರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪೀಕು' ಚಿತ್ರ ಬಾಕ್ಸ್ ಆಫೀಸಲ್ಲಿ ಬೊಂಬಾಟ್ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗೆಲುವಿಗೆ ಯಾರು ಕಾರಣ? ಅಮಿತಾಬ್ ಗಿಂತಲೂ ಹೆಚ್ಚಾಗಿ ದೀಪಿಕಾಗೆ ಓಟುಗಳು ಬಿದ್ದಿವೆ. [ಪೀಕು ಚಿತ್ರ ವಿಮರ್ಶೆ]

ಮೊದಲ ದಿನವೇ ಚಿತ್ರ ರು.5.32 ಕೋಟಿ ಬಾಚಿದೆ. ಶನಿವಾರ ಮತ್ತು ಭಾನುವಾರಗಳಂದು ಕಲೆಕ್ಷನ್ ನಲ್ಲಿ ಶೇ.60 ರಷ್ಟು ಹೆಚ್ಚಳವಾಗಿದೆ. ಚಿತ್ರದ ಉತ್ತಮ ವಿಮರ್ಶೆಗೆ ಪಾತ್ರವಾಗಿದ್ದು, ಬಾಯಿಂದ ಬಾಯಿಗೆ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದದ್ದು ಬಾಕ್ಸ್ ಆಫೀಸ್ ಗಳಿಕೆಗೆ ವರವಾಗಿದೆ.

ಕೌಟುಂಬಿಕ ಚಿತ್ರವಾದ ಕಾರಣ ರಜಾದಿನಗಳಲ್ಲಿ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಚಿತ್ರಮಂದಿರಕ್ಕೆ ಬಂದರು. ಹಾಗಾಗಿ ಶನಿವಾರ ಮತ್ತು ಭಾನುವಾರದ ಕಲೆಕ್ಷನ್ಸ್ ಕ್ರಮವಾಗಿ ರು.8.70 ಕೋಟಿ ಹಾಗೂ ರು. 8.50 ಕೋಟಿ.

ಈ ಮೂಲಕ ಬಾಕ್ಸ್ ಆಫೀಸ್ ರಾಣಿಯಾಗಿ ಹೊರಹೊಮ್ಮಿದ್ದಾರೆ ದೀಪಿಕಾ ಪಡುಕೋಣೆ. ಬಾಕ್ಸ್ ಆಫೀದಲ್ಲಿ ಭರ್ಜರಿ ಸದ್ದು ಮಾಡಿದ ದೀಪಿಕಾ ಚಿತ್ರಗಳ ಒಂದು ಝಲಕ್ ಇಲ್ಲಿದೆ ನೋಡಿ. ಬಾಕ್ಸ್ ಆಫೀಸ್ ನಲ್ಲಿ ದೀಪಿಕಾ ಮಹಾರಾಣಿಯಂತೆ ಮೆರೆಯುತ್ತಿದ್ದಾರೆ.

ಹ್ಯಾಪಿ ನ್ಯೂ ಈಯರ್

ಹ್ಯಾಪಿ ನ್ಯೂ ಈಯರ್

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಮೊದಲ ಮೂರು ದಿನಗಳಲ್ಲಿ ರು.9.70 ಕೋಟಿ ಕಲೆಕ್ಷನ್ ಮಾಡಿತ್ತು.

ಚೆನ್ನೈ ಎಕ್ಸ್ ಪ್ರೆಸ್

ಚೆನ್ನೈ ಎಕ್ಸ್ ಪ್ರೆಸ್

ಶಾರುಖ್ ಮತ್ತು ದೀಪಿಕಾ ಅಭಿನಯದ ಮತ್ತೊಂದು ಚಿತ್ರ ಇದಾಗಿದ್ದು, ಮೊದಲ ವಾರಾಂತ್ಯದಲ್ಲೇ ರು.8.70 ಕೋಟಿ ಬಾಚಿತ್ತು.

ಯೇ ಜವಾನಿ ಹೈ ದಿವಾನಿ

ಯೇ ಜವಾನಿ ಹೈ ದಿವಾನಿ

ರಣಬೀರ್ ಕಪೂರ್ ಹಾಗೂ ದೀಪಿಕಾ ಜೋಡಿಯ ಈ ಚಿತ್ರ ಮೊದಲ ಶುಕ್ರವಾರದಿಂದ ಭಾನುವಾರವರೆಗೆ ರು.6.30 ಕೋಟಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು.

ಓಂ ಶಾಂತಿ ಓಂ

ಓಂ ಶಾಂತಿ ಓಂ

ಶಾರುಖ್ ಮತ್ತು ದೀಪಿಕಾ ಜೋಡಿಯ ಓಂ ಶಾಂತಿ ಓಂ ಚಿತ್ರ ರು.149 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸಲ್ಲಿ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದ ಚಿತ್ರ ಅನ್ನಿಸಿಕೊಂಡಿತು.

ಬಚ್ ನಾ ಏ ಹಸೀನೋ

ಬಚ್ ನಾ ಏ ಹಸೀನೋ

ರಣಬೀರ್, ದೀಪಿಕಾ ಜೋಡಿಯ ಬಹುತಾರಾಗಣದ ಈ ಚಿತ್ರವೂ 2008ರ ಅತ್ಯಧಿಕ ಗಳಿಕೆಯ ಚಿತ್ರ ಎನ್ನಿಸಿಕೊಂಡಿದೆ.

ರಾಮ್ ಲೀಲಾ

ರಾಮ್ ಲೀಲಾ

ರಣವೀರ್ ಸಿಂಗ್ ಹಾಗೂ ದೀಪಿಕಾ ಅಭಿನಯದ ರಿಲೀಸ್ ಆದ ಮೊದಲ ಮೂರು ದಿನಗಳಲ್ಲೇ ರು.50 ಕೋಟಿ ಬಾಚುವ ಮೂಲಕ ಎಲ್ಲರ ಗಮನಸೆಳೆದ ಚಿತ್ರ.

ಕಾಕ್ ಟೈಲ್

ಕಾಕ್ ಟೈಲ್

ಸೈಫ್ ಆಲಿ ಖಾನ್, ದೀಪಿಕಾ ಹಾಗೂ ಡಯಾನಾ ಪೆಂಟಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲೇ ರು.30 ಕೋಟಿ ಬಾಚಿತು.

ಲವ್ ಆಜ್ ಕಲ್

ಲವ್ ಆಜ್ ಕಲ್

ಸೈಫ್ ಹಾಗೂ ದೀಪಿಕಾ ಜೋಡಿಯ ಈ ಚಿತ್ರ ಮೊದಲ ವಾರದಲ್ಲೇ ರು. 4.28 ಕೋಟಿ ಬಾಚುವ ಮೂಲಕ ಬಾಕ್ಸ್ ಆಫೀಸಲ್ಲಿ ಗೆಲ್ಲುವ ಕುದುರೆ ಎನ್ನಿಸಿಕೊಂಡಿದ್ದಾರೆ ದೀಪಿಕಾ.

More from Filmibeat

English summary
The movie Piku starring Deepika Padukone, Amitabh Bachchan and Irrfan Khan had a superb Box Office collection over the first weekend, that is Saturday and Sunday. Deepika Padukone's highest grossing films of all time in the slider and their Box Office revenue...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X