twitter
    For Quick Alerts
    ALLOW NOTIFICATIONS  
    For Daily Alerts

    ಅರ್ಧ ವರ್ಷ ಬಾಲಿವುಡ್ ಬಾಕ್ಸಾಫೀಸ್ ಕಥೆಯೇನು? KGF 2, RRR, ದಿ ಕಾಶ್ಮೀರ್ ಫೈಲ್ಸ್‌ನದ್ದೇ ಸದ್ದು!

    |

    ಕೋವಿಡ್ 19 ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿಂದ ಬಾಲಿವುಡ್ ಬಾಕ್ಸಾಫೀಸ್ ಚೇತರಿಸಿಕೊಳ್ಳುವುದಕ್ಕೆ ತುಂಬಾನೇ ಕಷ್ಟ ಪಡುತ್ತಿದೆ. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಇನ್ನೇನು ಬಾಲಿವುಡ್ ಕಥೆ ಮುಗಿದೇ ಹೋಯ್ತು ಅನ್ನುವಾಗಲೇ ಚಿಕ್ಕದೊಂದು ಚೇತರಿಕೆ ಕಂಡಿದೆ.

    ಕೊರೊನಾ ಕಾಲದಲ್ಲಿ ಬಾಲಿವುಡ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಸದ್ದು ಮಾಡಲೇ ಇಲ್ಲ. ಆದರೆ, ಒಟಿಟಿಯಲ್ಲಿ ತೆರೆಕಂಡ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಥಿಯೇಟರ್‌ನಲ್ಲಿ ಬಾಲಿವುಡ್ ಸಿನಿಮಾಗಳು ರಿಲೀಸ್ ಆಗುವುದು ಅನುಮಾನ ಎಂದೇ ನಂಬಲಾಗಿತ್ತು.

    ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!

    2022 ಬಾಲಿವುಡ್ ಮಂದಿಗೆ ಹೊಸ ಹುರುಪು ನೀಡಿದೆ. ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು, ದಕ್ಷಿಣದ ಫ್ಯಾನ್ ಇಂಡಿಯಾ ಸಿನಿಮಾಗಳೂ ಕೂಡ ಸಾಥ್ ನೀಡಿವೆ. ಹಾಗಿದ್ದಂತೆ ಜನವರಿಯಿಂದ ಜೂನ್‌ವರೆಗೆ ಮೊದಲ ಆರು ತಿಂಗಳು ಬಾಲಿವುಡ್ ಬಾಕ್ಸಾಫೀಸ್ ಹೇಗಿತ್ತು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    ಆಲಿಯಾ ಭಟ್- 'ಗಂಗೂಬಾಯಿ ಕಾಠಿಯಾವಾಡಿ'

    ಆಲಿಯಾ ಭಟ್- 'ಗಂಗೂಬಾಯಿ ಕಾಠಿಯಾವಾಡಿ'

    ಬಾಲಿವುಡ್ ಲಕ್ಕಿ ಗರ್ಲ್ ಆಲಿಯಾ ಭಟ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಗಂಗೂಬಾಯಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 129.10ಸ ಕೋಟಿ ರೂ. ಗಳಿಕೆ ಕಂಡಿತ್ತು. ಇದು ಈ ವರ್ಷದ ಆರಂಭದಲ್ಲಿ ಬಾಲಿವುಡ್‌ಗೆ ಸಿಕ್ಕ ಮೊದಲ ದೊಡ್ಡ ಯಶಸ್ಸು.

    ಕರಣ್ ಜೋಹರ್‌ಗೆ ಸಿನಿಮಾ ಮಾಡುವುದಕ್ಕೆ ಬರಲ್ವಾ? ಸಮಂತಾ ಮಾತಿನ ಅರ್ಥವೇನು?ಕರಣ್ ಜೋಹರ್‌ಗೆ ಸಿನಿಮಾ ಮಾಡುವುದಕ್ಕೆ ಬರಲ್ವಾ? ಸಮಂತಾ ಮಾತಿನ ಅರ್ಥವೇನು?

    ದಕ್ಷಿಣ ಭಾರತದ ಸಿನಿಮಾಗಳದ್ದೇ ದರ್ಬಾರ್

    ದಕ್ಷಿಣ ಭಾರತದ ಸಿನಿಮಾಗಳದ್ದೇ ದರ್ಬಾರ್

    ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 2022ರ ಮೊದಲ ಆರು ತಿಂಗಳು ಅದ್ಭುತ ಗಳಿಕೆ ಕಂಡಿದ್ದರೂ ಅದರ ಕಲೆಕ್ಷನ್‌ನ ಬಹುಪಾಲು ದಕ್ಷಿಣದ ಸಿನಿಮಾದಿಂದಲೇ ಬಂದಿವೆ. 'ಕೆಜಿಎಫ್ 2' ಹಾಗೂ RRR ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಲು ಒರಿಜಿನಲ್ ಬಾಲಿವುಡ್‌ ಸಿನಿಮಾಗಳಿಂದಲೇ ಸಾಧ್ಯವಾಗಿಲ್ಲ. 'ಕೆಜಿಎಫ್ 2' 434.70 ಕೋಟಿ ರೂ. ಗಳಿಕೆ ಕಂಡಿದೆ. ಇದೂವರೆಗೂ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ. ಇನ್ನು RRR ಸಿನಿಮಾ 274.31 ಕೋಟಿ ರೂ. ಗಳಿಸಿದೆ.

    ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ ಸಿನಿಮಾಗಳಿವು

    ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ ಸಿನಿಮಾಗಳಿವು

    ಈ ವರ್ಷ ಎಲ್ಲಾ ಚಿತ್ರರಂಗದ ಕಣ್ಣು ಬಾಲಿವುಡ್‌ ಮೇಲೆ ಇಟ್ಟಿತ್ತು. ಈ ವರ್ಷ ಬಾಲಿವುಡ್‌ ಬಾಕ್ಸಾಫೀಸ್‌ ಚೇತರಿಕೆ ಕಂಡಿದ್ದರಿಂದ ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ. ದಕ್ಷಿಣದ ಸಿನಿಮಾಗಳು ಸೇರಿದಂತೆ ಬಾಲಿವುಡ್‌ನ ನಾಲ್ಕೈದು ಸಿನಿಮಾಗಳು ಬಾಕ್ಸಾಫೀಸ್ ದೋಚಿವೆ.

    ಗಂಗೂಬಾಯಿ ಕಾಠಿಯಾವಾಡಿ 129.10 ಕೋಟಿ ರೂ.
    ದಿ ಕಾಶ್ಮೀರ್ ಫೈಲ್ಸ್ 252.90 ಕೋಟಿ ರೂ.
    ಭೂಲ್‌ ಭುಲಯ್ಯ 2 184.32 ಕೋಟಿ ರೂ.
    RRR 274.31 ಕೋಟಿ ರೂ.
    ಕೆಜಿಎಫ್ 2 434.70 ಕೋಟಿ ರೂ.

    3 ಬಾರಿ ಮದುವೆ ಆಗೋ ಅವಕಾಶವಿದ್ದರೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮದುವೆ ಆಗಿಲ್ಲವೇಕೆ?3 ಬಾರಿ ಮದುವೆ ಆಗೋ ಅವಕಾಶವಿದ್ದರೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮದುವೆ ಆಗಿಲ್ಲವೇಕೆ?

    ಅರ್ಧ ವರ್ಷದ ಬ್ಯುಸಿನೆಸ್ ಎಷ್ಟು?

    ಅರ್ಧ ವರ್ಷದ ಬ್ಯುಸಿನೆಸ್ ಎಷ್ಟು?

    ಬಾಲಿವುಡ್ ಅರ್ಧ ವರ್ಷದಲ್ಲಿ ಸುಮಾರು ಸುಮಾರು ಎರಡು ಸಾವಿರ ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂಬುದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ. ಕೋವಿಡ್‌ಗಿಂತ ಮುನ್ನ ಬಾಲಿವುಡ್ ಸಿನಿಮಾಗಳು 2300 ರಿಂದ 2500 ಕೋಟಿ ರೂ. ಬ್ಯುಸಿನೆಸ್ ಮಾಡಿದ್ದು ಇದೆ. ಆದರೆ, ಕೋವಿಡ್ ಬಳಿಕ ನಷ್ಟದಲ್ಲಿದ್ದ ಚಿತ್ರರಂಗ ಚೇತರಿಸಿಕೊಂಡಿದ್ದಕ್ಕೆ ಸಮಾಧಾನಗೊಂಡಿದ್ದಾರೆ. ಆದರೂ ಈ ಗಳಿಕೆಯಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಪಾಲು ಹೆಚ್ಚಿದೆ ಎನ್ನುವುದನ್ನು ಮರೆಯುವಂತಿಲ್ಲ.

    English summary
    Bollywood box office report 2022: KGF 2, RRR, The Kashmir Files, Gangubai Kathiawadi, Know More.
    Tuesday, July 5, 2022, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X