»   » 'ಫಿಲ್ಮ್ ಫೇರ್' ಎಡಿಟರ್ ಪಿಳ್ಳೈ ಬರ್ತ್ ಡೇಯಲ್ಲಿ ಬಾಲಿವುಡ್ ತಾರೆಯರ ರಂಗು

'ಫಿಲ್ಮ್ ಫೇರ್' ಎಡಿಟರ್ ಪಿಳ್ಳೈ ಬರ್ತ್ ಡೇಯಲ್ಲಿ ಬಾಲಿವುಡ್ ತಾರೆಯರ ರಂಗು

Posted By: ಸೋನು ಗೌಡ
Subscribe to Filmibeat Kannada

ಇತ್ತೀಚೆಗೆ ಬಿಟೌನ್ ನಲ್ಲಿ ಬರ್ತ್ ಡೇ ಪಾರ್ಟಿ ಗಳು ಹೆಚ್ಚುತ್ತಿದ್ದು, ಈ ಗ್ರ್ಯಾಂಡ್ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಒಂದಾಗುತ್ತಾರೆ. ಮೊನ್ನೆ ಮೊನ್ನೆ ನಟಿ ಕತ್ರಿನಾ ಕೈಫ್ ಮತ್ತು ನಟಿ ಪ್ರಿಯಾಂಕ ಚೋಪ್ರಾ ಅವರು ಹುಟ್ಟುಹಬ್ಬ ಆಚರಿಸಿಕೊಂಡು ತಮ್ಮ ಬಾಲಿವುಡ್ ಸ್ನೇಹಿತರಿಗೆ ಪಾರ್ಟಿ ನೀಡಿದ್ದರು.

ಇದೀಗ ಬಾಲಿವುಡ್ ನ ತಾಜಾ ಸುದ್ದಿಗಳನ್ನು ಹೊತ್ತು ತರುವ ಖ್ಯಾತ ಸಿನಿಮಾ ಮಾಗಜೀನ್ 'ಫಿಲ್ಮ್ ಫೇರ್' ನ ಮುಖ್ಯಸ್ಥ (ಎಡಿಟರ್) ಜಿತೇಶ್ ಪಿಳ್ಳೈ ಹುಟ್ಟುಹಬ್ಬ ಸಮಾರಂಭದಲ್ಲಿ ಬಾಲಿವುಡ್ ನ ದಿಗ್ಗಜರು ಸಂಭ್ರಮದಿಂದ ಪಾಲ್ಗೊಂಡಿದ್ದರು.[ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು]

ಬಾಲಿವುಡ್ ನ ಟಾಪ್ ಸೆಲೆಬ್ರಿಟಿಗಳಿಗೆ ತುಂಬಾ ಹತ್ತಿರದಿಂದ ಬಲ್ಲವರಾಗಿರುವ ಜಿತೇಶ್ ಪಿಳ್ಳೈ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದು, ಬಾಲಿವುಡ್ ನ ಗೆಳೆಯರೆಲ್ಲರಿಗೂ ಭರ್ಜರಿ ಪಾರ್ಟಿ ನೀಡಿದ್ದಾರೆ.

ಕಿಂಗ್ ಖಾನ್ ಶಾರುಖ್ ಖಾನ್, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್, ಪ್ರೀತಿ ಜಿಂಟಾ, ಸೋನಂ ಕಪೂರ್, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾ, ವಿದ್ಯಾ ಬಾಲನ್ ಸೇರಿದಂತೆ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಹುಟ್ಟುಹಬ್ಬ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]

ಬರ್ತ್ ಡೇ ಪಾರ್ಟಿಯ ಕಲರ್ ಫುಲ್ ಪೋಟೋ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ಕಿಂಗ್ ಖಾನ್ ಶಾರುಖ್

ಜಿತೇಶ್ ಪಿಳ್ಳೈ ಅವರ ಹುಟ್ಟುಹಬ್ಬದ ಸಂಭ್ರಮದ ಪಾರ್ಟಿಯಲ್ಲಿ ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಅವರು ಅಭಿಮಾನಿಗಳು ಹಾಗೂ ಬಾಲಿವುಡ್ ಸ್ನೇಹಿತರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.['ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?]

ಡಿಪ್ಪಿ-ರಣವೀರ್ ಮೋಡಿ

ಈ ಸಂಭ್ರಮದ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಹಾಟ್ ಕಪಲ್ ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿ ನೆರೆದಿದ್ದವರಿಗೆ ಮನರಂಜನೆ ನೀಡಿದರು.

ನೀಲ್ ನಿತಿನ್ ಮುಖೇಶ್-ರಣಬೀರ್ ಕಪೂರ್

ಬರ್ತ್ ಡೇ ಪಾರ್ಟಿಯಲ್ಲಿ ಬಾಲಿವುಡ್ ನಟರಾದ ನೀಲ್ ನಿತಿನ್ ಮುಖೇಶ್ ಮತ್ತು ನಟ ರಣಬೀರ್ ಕಪೂರ್ ಅವರ ಸೆಲ್ಫಿ ಸ್ಟೈಲ್.

ಸೋನಂ-ಪ್ರೀತಿ ಮಸ್ತಿ

ನಟಿ ಸೋನಂ ಕಪೂರ್, ನಟಿ ಪ್ರೀತಿ ಜಿಂಟಾ, ಪರಿಣಿತಿ ಚೋಪ್ರಾ ಅವರು ಬರ್ತ್ ಡೇ ಬಾಯ್ ಜಿತೇಶ್ ಪಿಳ್ಳೈ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪರಿ.

ಬಾಲಿವುಡ್ ರಂಗು

ಜಿತೇಶ್ ಪಿಳ್ಳೈ ಹುಟ್ಟುಹಬ್ಬದಲ್ಲಿ ಬಾಲಿವುಡ್ ತಾರೆಯರ ರಂಗು. ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುವ ಪ್ರಿತಿ ಜಿಂಟಾ ಜೊತೆ ಬಾಲಿವುಡ್ ತಾರೆಯರು.

ಆಲಿಯಾ ಭಟ್-ಕರಣ್

ನಟಿ ಆಲಿಯಾ ಭಟ್ ಮತ್ತು ನಟ ಕಮ್ ನಿರ್ದೇಶಕ ಕರಣ್ ಜೋಹರ್ ಬರ್ತ್ ಡೇ ಪಾರ್ಟಿಗೆ ಆಗಮಿಸಿ, ಪೋಸ್ ಕೊಟ್ಟಿದ್ದು ಹೀಗೆ.

ಪ್ರೀತಿ ಜಿಂಟಾ

ಬರ್ತ್ ಡೇ ಬಾಯ್ ಮಿಸ್ಟರ್ ಪಿಳ್ಳೈ ಜೊತೆ ಬಾಲಿವುಡ್ ನ ಗುಳಿಕೆನ್ನೆ ಬೆಡಗಿ ಪ್ರೀತಿ ಜಿಂಟಾ.

ದೀಪಿಕಾ-ಅನುಷ್ಕಾ ಶರ್ಮಾ

ಹುಟ್ಟುಹಬ್ಬದ ಪಾರ್ಟಿಯಲ್ಲಿ ದೀಪಿಕಾ ಮತ್ತು ಅನುಷ್ಕಾ ಶರ್ಮಾ ಝಲಕ್.

ಪತಿ ಜೊತೆ ವಿದ್ಯಾಬಾಲನ್

ಪತಿ ಜೊತೆ ನಟಿ ವಿದ್ಯಾ ಬಾಲನ್ ಆಗಮಿಸಿದ ಪರಿ.

ನಟಿ ಪರಿಣಿತಾ ಚೋಪ್ರಾ

ಚೆಂದದ ಮುಗುಳ್ನಗೆಯೊಂದಿಗೆ ಹುಟ್ಟುಹಬ್ಬ ಪಾರ್ಟಿಗೆ ಆಗಮಿಸಿದ ನಟಿ ಪರಿಣಿತಾ ಚೋಪ್ರಾ.[ಜಿತೇಶ್ ಪಿಳ್ಳೈ ಹುಟ್ಟುಹಬ್ಬದಲ್ಲಿ ಬಾಲಿವುಡ್ ತಾರೆಯರ ಝಲಕ್]

English summary
B-town came together under one roof to celebrate the birthday of the popular Filmfare editor Jitesh Pillai. From Shahrukh Khan to Ranbir Kapoor, from Deepika Padukone-Ranveer Singh to Alia Bhatt-Sidharth Malhotra, many celebs spotted at his birthday bash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada