ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತದಾನ ಮಾಡಿದ ಬಾಲಿವುಡ್ ಸ್ಟಾರ್ಸ್

ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಇಂದು (ಸೋಮವಾರ) ಆರಂಭವಾಗಿದೆ. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಈಗಾಗಲೆ ಮತದಾನ ಪ್ರಾರಂಭವಾಗಿದ್ದು ಬಿರುಸಿನಿಂದ ಮತದಾನ ನಡೆಯುತ್ತಿದೆ.

ಇಂದು ನಡೆಯುವ ಚುನಾವಣೆಯಲ್ಲಿ ಅನೇಕ ಬಾಲಿವುಡ್ ಸ್ಟಾರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೆಲೆಬ್ರಿಟಿಗಳು ಬೆಳಂಬೆಳಗ್ಗೆಯೆ ಮತಗಟ್ಟೆಗೆ ಆಗಮಿಸಿ ಕ್ಯೂ ನಲ್ಲಿ ನಿಂತು ತಮ್ಮ ಹಕ್ಕು ಚಾಲಾಯಿಸುತ್ತಿದ್ದಾರೆ.

4ನೇ ಹಂತದ ಲೋಕಸಮರ: ಎಲ್ಲೆಲ್ಲಿ ಘಟಾನುಘಟಿಗಳ ಕದನ

ಮತದಾನ ಮಾಡುವ ಜೊತೆಗೆ ಅಭಿಮಾನಿಗಳಿಗೂ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಟ ಆಮೀರ್ ಖಾನ್, ಪ್ರಿಯಾಂಕ ಚೋಪ್ರ, ಅಜಯ್ ದೇವಗನ್, ಮಾಧುರಿ ಧೀಕ್ಷಿತ್, ಟೈಗರ್ ಶ್ರಾಫ್, ಸೊನಾಲಿ ಬೇಂದ್ರೆ ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮುಂದೆ ಓದಿ..

ಕ್ಯೂನಲ್ಲಿ ನಿಂತು ಮತದಾನ ಮಾಡಿದ ಆಮೀರ್ ಖಾನ್

ಕ್ಯೂನಲ್ಲಿ ನಿಂತು ಮತದಾನ ಮಾಡಿದ ಆಮೀರ್ ಖಾನ್

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಬೆಳಗ್ಗೆಯೆ ಮತದಾನ ಮಾಡಿದ್ದಾರೆ. ಪತ್ನಿ ಕಿರಣ್ ರಾವ್ ಜೊತೆ ಮತಗಟ್ಟೆಗೆ ಆಗಮಿಸಿದ ಆಮೀರ ಮುಂಬೈನ ಬಾಂದ್ರ ಮತಗಟ್ಟೆಯಲ್ಲಿ ತನ್ನ ಹಕ್ಕು ಚಲಾಯಿಸಿದ್ದಾರೆ. ಜೊತೆಗೆ ಅಭಿಮಾನಿಗಳಿಗೂ ಮತದಾನ ಮಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಮತದಾನ ಮಾಡಿದ ಸೊನಾಲಿ ಬೇಂದ್ರೆ, ಮಾಧುರಿ ದೀಕ್ಷಿತ್

ಮತದಾನ ಮಾಡಿದ ಸೊನಾಲಿ ಬೇಂದ್ರೆ, ಮಾಧುರಿ ದೀಕ್ಷಿತ್

ನಟಿ ಸೊನಾಲಿ ಬೇಂದ್ರೆ ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಕ್ಯೂ ನಲ್ಲಿ ನಿಂತು ಮತದಾನ ಮಾಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸೊನಾಲಿ ಸದ್ಯ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತದಾನ ಮಾಡಲು ಮುಂಬೈಗೆ ಆಗಮಿಸಿ ಸೊನಾಲಿ ತನ್ನ ಹಕ್ಕು ಚಲಾಯಿಸಿದ್ದಾರೆ. ಜೊತೆಗೆ ಬೆಳಗ್ಗೆಯೆ ನಟಿ ಮದುರಿ ದೀಕ್ಷಿತ್ ಕೂಡ ವೋಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯ, 71 ಕ್ಷೇತ್ರದಲ್ಲಿ ಮತದಾನ

ಇದು ಬಹುಮುಖ್ಯವಾದ ಸಮಯ ಪ್ರಿಯಾಂಕಾ

ಇದು ಬಹುಮುಖ್ಯವಾದ ಸಮಯ ಪ್ರಿಯಾಂಕಾ

ಅಮೇರಿಕದ ಗಾಯಕ ನಿಕ್ ಜೋನಸ್ ಜೊತೆ ಮದುವೆಯಾದ ನಂತರ ಯು ಎಸ್ ನಲ್ಲಿ ನೆಲೆಸಿರುವ ಪ್ರಿಯಾಂಕ ಮತದಾನ ಮಾಡಲು ಮುಂಬೈ ಆಗಮಿಸಿದ್ದಾರೆ. ಬೆಳಗ್ಗೆಯೆ ತನ್ನ ಹಕ್ಕು ಚಲಾಯಿಸಿ, ಶಾಯಿ ಹಾಕಿದ ಬೆರಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪ್ರಿಯಾಂಕ 'ಇದು ಮುಖ್ಯವಾದ ಸಮಯ. ಪ್ರತಿಯೊಂದು ವೋಟ್ ಕೂಡ ಕೌಂಟ್ ಆಗುತ್ತೆ' ಎಂದು ಬರೆದುಕೊಂಡಿದ್ದಾರೆ.

ಅಜಯ್-ಕಾಜೋಲ್ ದಂಪತಿ ವೋಟ್ ಮಾಡಿದ್ರು

ಅಜಯ್-ಕಾಜೋಲ್ ದಂಪತಿ ವೋಟ್ ಮಾಡಿದ್ರು

ಬೆಳಗ್ಗೆಯೆ ಮತಗಟ್ಟೆಗೆ ಆಗಮಿಸಿದ ಅಜಯ್ ದೇವಗನ್ ದಂಪತಿ ತನ್ನ ಹಕ್ಕು ಚಲಾಯಿಸಿದ್ದಾರೆ. ಪತ್ನಿ ಕಾಜೋಲ್ ಜೊತೆ ಮುಂಬೈನಲ್ಲಿ ವೋಟ್ ಮಾಡಿ ಅಭಿಮಾನಿಗಳಿಗೂ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

4ನೇ ಹಂತದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಆಸ್ತಿ ಮೌಲ್ಯ ಕೇವಲ 500 ರು

ಮತದಾನ ಮಾಡಿದ ಟೈಗರ್ ಶ್ರಾಫ್, ದಿಯಾ ಮಿರ್ಜಾ

ಮತದಾನ ಮಾಡಿದ ಟೈಗರ್ ಶ್ರಾಫ್, ದಿಯಾ ಮಿರ್ಜಾ

ವೋಟ್ ಮಾಡಲು ಬೆಳಗ್ಗೆಯೆ ಮತಗಟ್ಟೆಗೆ ಆಗಮಿಸಿರುವ ಟೈಗರ್ ಶ್ರಾಫ್ ಕ್ಯೂ ನಲ್ಲಿ ನಿಂತು ಮತದಾನ ಮಾಡಿದ್ದಾರೆ. ಇನ್ನು ನಟಿ ದಿಯಾ ಮಿರ್ಜಾ ಕೂಡ ತನ್ನ ಹಕ್ಕು ಚಲಾಯಿಸಿದ್ದಾರೆ. ನಟಿ ಊರ್ಮಿಳಾ, ಪ್ರಿಯಾ ದತ್ ಸೇರಿದಂತೆ ಅನೇಕ ಬಾಲಿವುಡ್ ಲೆಸೆಬ್ರಿಟಿಗಳು ಬೆಳಂಬೆಳಗ್ಗೆಯೆ ಮತದಾನ ಮಾಡಿ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ.

More from Filmibeat

English summary
Voting for the fourth phase of Lok Sabha polls has started and number of celebrities like Priyanka Chopra,Tiger Shroff and Urmila Matondkar, came out to vote.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X