'ಲಾಕ್ ಆಪ್' ಸಕ್ಸಸ್ ಪಾರ್ಟಿ ಮಾಡಿದ ಬಾಲಿವುಡ್ ತಾರೆಯರು

70 ದಿನಗಳ ಕಾಲ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಿದ್ದ 'ಲಾಕ್‌ ಆಪ್‌' ರಿಯಾಲಿಟಿ ಶೋ ಇದೀಗ ಅಂತ್ಯಗೊಂಡಿದೆ. ಶನಿವಾರ 'ಲಾಕ್‌ ಆಪ್' ಶೋನ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ನೇರವೇರಿದೆ. ಬಾಲಿವುಡ್ ನಟಿ ಕಂಗನಾ ರನೌತ್ ನಿರೂಪಕಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಸದ್ಯ ಮೊದಲ ಸೀಸನ್‌ನಲ್ಲಿ ವಿನ್ನರ್‌ ಆಗಿ ಸ್ಟ್ಯಾಂಡಪ್ ಕಾಮೆಡಿಯನ್ ಮುನಾವರ್ ಫಾರೂಕಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೆಬ್ರವರಿ 27 ರಂದು ಆರಂಭವಾದ 'ಲಾಕ್‌ ಆಪ್‌' ರಿಯಾಲಿಟಿ ಶೋನಲ್ಲಿ ಬಾಲಿವುಡ್‌ನ ಖ್ಯಾತ ನಟ-ನಟಿಯರು ಭಾಗಿಯಾಗಿದ್ದರು. ಈ ಶೋ ಒಂದು ರೀತಿ ಬಿಗ್‌ ಬಾಸ್‌ ರೀತಿಯಲ್ಲಿ ನಡೆದಿದ್ದು, 20 ಸ್ಪರ್ಧಿಗಳು ಈ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

ಸದ್ಯ ಎರಡೂವರೆ ತಿಂಗಳ ಕಾಲ ಒಟಿಟಿ ವೇದಿಕೆಯಲ್ಲಿ ಜನರನ್ನು ರಂಜಿಸಿದ್ದ ಶೋ ಕೊನೆಗೂ ಅಂತ್ಯಗೊಂಡಿದೆ. ಮುನಾವತ್ ಫಾರೂಕಿ 'ಲಾಕ್‌ ಅಪ್' ಸೀಸನ್‌ನ ಮೊದಲ ವಿನ್ನರ್ ಆಗಿ ಹೊರದ್ದಾರೆ. ಈ ಹಿನ್ನೆಲೆಯಲ್ಲಿ 'ಲಾಕ್‌ ಆಪ್' ಶೋನ ಸಕ್ಸಸ್ ಪಾರ್ಟಿಯನ್ನು ಎಲ್ಲಾ ಸ್ಪರ್ಧಿಗಳು ಎಂಜಾಯ್ ಮಾಡಿದ್ದಾರೆ. ಮುಂಬೈನಲ್ಲಿ ನಡೆದ 'ಲಾಕ್ ಆಪ್' ಸಕ್ಸಸ್ ಪಾರ್ಟಿಯಲ್ಲಿ ಸ್ಪರ್ಧಿಗಳೆಲ್ಲರೂ ಭಾಗಿಯಾಗಿ ಸಂಭ್ರಮಿಸಿದ್ದಾರೆ.

 ಸಕ್ಸಸ್‌ ಪಾರ್ಟಿಯಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರೆಟಿಗಳು

ಸಕ್ಸಸ್‌ ಪಾರ್ಟಿಯಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರೆಟಿಗಳು

'ಲಾಕ್‌ ಆಪ್‌' ರಿಯಾಲಿಟಿ ಶೋ ಅದ್ಧೂರಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಶೋನಲ್ಲಿ ಭಾಗವಹಿಸಿದ್ದ ನಟ ನಟಿಯರಿಗೆ ಸಕ್ಸಸ್ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವು ತಾರೆಯರು ಆಗಮಿಸಿದ್ದರು. ವಿನ್ನರ್ ಮುನಾವರ್ ಫಾರೂಕಿಗೆ ಪಾರ್ಟಿಯಲ್ಲಿ ಶುಭಾಶಯ ತಿಳಿಸಲಾಯಿತು. ಹಾಡು, ಡ್ಯಾನ್ಸ್ ಮೂಲಕ ಎಲ್ಲರೂ ಸಕ್ಸಸ್ ಪಾರ್ಟಿಯನ್ನು ಎಂಜಾಯ್ ಮಾಡಿದ್ದರು. ಪಾರ್ಟಿಯಲ್ಲಿ ಕಂಗನಾ, ಶಿವಂ ಶರ್ಮಾ, ಮಂದನಾ ಕರಿಮಿ, ಸಾರಾ ಖಾನ್, ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಪೂನಂ ಪಾಂಡೆ ಮತ್ತು ಅಜ್ಮಾ ಫಲ್ಲಾ ಭಾಗಿಯಾಗಿದ್ದರು.

 ಟಾಪ್ 3 ಸ್ಥಾನದಲ್ಲಿದ್ದವರು ಯಾರು?

ಟಾಪ್ 3 ಸ್ಥಾನದಲ್ಲಿದ್ದವರು ಯಾರು?

70 ದಿನಗಳ ಕಾಲ ನಡೆಸಿದ್ದ ಶೋನಲ್ಲಿ ಎಲ್ಲಾ ಟಾಸ್ಕ್‌ ಮಾಡಿ ಮುನಾವರ್, ಫಾರೂಕಿ, ಪಾಯಲ್ ರೋಹಟಗಿ, ಶಿವಂ ಶರ್ಮಾ , ಅಂಜಲಿ ಅರೋರಾ, ಅಜ್ಮಾ ಫಲ್ಲಾ, ಗ್ರಾಂಡ್‌ ಫಿನಾಲೆಗೆ ಆಗಮಿಸಿದ್ದರು. ಇದರಲ್ಲಿ ಟಾಪ್‌ 3 ಸ್ಥಾನದಲ್ಲಿ ಮುನಾವರ್ ಫಾರುಕಿ, ಪಾಯಲ್ ರೋಹಟಗಿ ಹಾಗೂ ಅಂಜಲಿ ಆರೋರಾ ಟಪ್ ಫೈಟ್ ಕೊಟ್ಟಿದ್ದರು. ಆದರೆ, ಅಂತಿಮವಾಗಿ ಮುನಾವರ್ ಫಾರೂಕಿ ಗೆಲುವಿನ ನಗೆ ಬೀರಿದ್ದಾರೆ. ಗೆದ್ದ ಕಾಮಿಡಿಯನ್ ಮುನಾವರ್ ಫಾರೂಕಿಗೆ ಲಾಕ್ ಆಪ್ ವಿನ್ನರ್ ಟ್ರೋಫಿ, ಜೊತೆಗೆ 20 ಲಕ್ಷ ರೂಪಾಯಿ ನಗದು ಹಾಗೂ ಒಂದು ಕಾರು ಮತ್ತು ಗಿಫ್ಟ್‌ ಹ್ಯಾಂಪರ್‌ಗಳು ಲಭಿಸಿವೆ. ಮೊದಲ ರನ್ನರ್ ಆಪ್ ಆಗಿ ನಟಿ ಪಾಯಲ್ ರೋಹಟಗಿ ನಂತರ ಅಂಜಲಿ ಆರೋರಾ ಎರಡನೇ ರನ್ನರ್ ಆಪ್ ಆಗಿದ್ದಾರೆ.

 ಗೆಲುವಿನ ನಗೆ ಬೀರದ ಪ್ರಿನ್ಸ್ ನರೂಲಾ

ಗೆಲುವಿನ ನಗೆ ಬೀರದ ಪ್ರಿನ್ಸ್ ನರೂಲಾ

'ರೋಡಿಸ್‌ x2', 'ಸ್ಪ್ಲಿಟ್ಸ್‌ವಿಲ್ಲಾ 8', 'ನಚ್‌ ಬಲಿಯೇ 9', 'ಬಿಗ್ ಬಾಸ್ 9' ರಿಯಾಲಿಟಿ ಶೋಗಳಲ್ಲಿ ವಿಜೇತರಾಗಿದ್ದ ಪ್ರಿನ್ಸ್ ನರೂಲಾ ಈ ಶೋನಲ್ಲಿ ಗೆಲ್ಲಬಹುದು ಎಂದು ವೀಕ್ಷಕರು ನಿರೀಕ್ಷಿಸಿದ್ದರು. ಆದರೆ, ವೀಕ್ಷಕರ ನಿರೀಕ್ಷೆ ಹುಸಿಯಾಯಿತು. ಮೂರ್ನಾಲ್ಕು ರಿಯಾಲಿಟಿ ಶೋನಲ್ಲಿ ವಿನ್ನರ್ ಆಗುತ್ತಿದ್ದ ಪ್ರಿನ್ಸ್ ನರೂಲಾ ಈ ಶೋನಲ್ಲಿ ಟ್ರಬಲ್ ಮೇಕರ್ ಆಗಿ ಕಾಣಿಸಿಕೊಂಡಿದ್ದರು. ಆದರೂ ಸಹ ಅವರನ್ನು ಹಿಂದಿಕ್ಕಿ ಮುನಾವರ್ ಟ್ರೋಫಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

 ಕಾಮಿಡಿ ಟೈಮಿಂಗ್ ಮೂಲಕ ಜನರ ಮನ ಗೆದ್ದ ಫಾರೂಕಿ

ಕಾಮಿಡಿ ಟೈಮಿಂಗ್ ಮೂಲಕ ಜನರ ಮನ ಗೆದ್ದ ಫಾರೂಕಿ

ಸ್ಟ್ಯಾಂಡಪ್ ಕಾಮೆಡಿಯನ್ ಆಗಿದ್ದ ಮುನಾವರ್ ಫಾರೂಕಿ ಲಾಕ್‌ ಆಪ್ ರಿಯಾಲಿಟಿ ಶೋ ಗೆಲ್ಲುವ ಮೂಲಕ ಎಲ್ಲರನ್ನುನ ಅಚ್ಚರಿಗೊಳಿದ್ದಾರೆ. ಬಿಜೆಪಿ-ಮೋದಿ ವಿರೋಧಿ ಹೇಳಿಕೆಗಳನ್ನು ನೀಡಿ ಜೈಲುವಾಸ ಅನುಭವಿಸಿದ್ದಲ್ಲದೆ ಹಲವು ಕೇಸ್‌ಗಳನ್ನುನ ಎದುರಿದ್ದ ಮುನಾವರ್‌, ಬಳಿಕ ಈ 'ಲಾಕ್‌ ಆಪ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ತಮ್ಮ ಕಾಮಿಡಿ ಟೈಮಿಂಗ್ ಹಾಗೂ ಶೋನಲ್ಲಿ ಅವರ ಅತ್ಯುತ್ತಮ ವ್ಯಕ್ತಿತ್ವ ಜನರ ಮನಸನ್ನು ಗೆದ್ದಿತ್ತು. ಪರಿಣಾಮ ಅಷ್ಟು ಜನ ಬಾಲಿವುಡ್‌ ತಾರೆಯರ ಸ್ಪರ್ಧೆ ನಡುವೆಯೂ ಎಲ್ಲರನ್ನು ಹಿಂದಿಕ್ಕಿ ಮುನಾವರ್‌ ಲಾಕ್ ಆಪ್ ಶೋನ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

More from Filmibeat

English summary
Bollywood celebrities like Karan Kundrra, Tejasswi Prakash, Munawar Faruqui And More Attend Kangana Ranaut's Lock Upp Success party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X