For Quick Alerts
  ALLOW NOTIFICATIONS  
  For Daily Alerts

  18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ: ಕೇಂದ್ರದ ನಿರ್ಧಾರ ಸ್ವಾಗತಿಸಿದ ಸಿನಿತಾರೆಯರು

  |

  ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀಕರತೆ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಈ ನಡುವೆ 45 ವರ್ಷ ಮೇಲ್ಪಟ್ಟವಿಗೆ ನೀಡಲಾಗುತ್ತಿದ್ದ ಕೋವಿಡ್ ಲಸಿಕೆಯನ್ನು ಈಗ 18 ವರ್ಷ ಮೇಲ್ಪಟ್ಟವರಿಗೂ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  ಈ ಕುರಿತು ಸೋಮವಾರ ಆದೇಶ ಹೊರಡಿಸಲಾಗಿದೆ.. ಇನ್ಮುಂದೆ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ನೀಡಬೇಕು ಎಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

  ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

  ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಬಾಲಿವುಡ್ ಸಿನಿ ತಾರೆಯರು ಸ್ವಾಗತಿಸಿದ್ದಾರೆ. ಕರೀನಾ ಕಪೂರ್, ರಿತೇಶ್ ದೇಶ್‌ಮುಖ್, ಸ್ವರಾ ಭಾಸ್ಕರ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

  ''18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವುದು ಅದ್ಭುತ ನಿರ್ಧಾರ'' ಎಂದು ನಟ ರಿತೇಶ್ ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ. ಕರೀನಾ ಕಪೂರ್ ಟ್ವೀಟ್ ಮಾಡಿ ''ಲೆಟ್ಸ್ ಡು ದಿ ಇಂಡಿಯಾ'' ಎಂದಿದ್ದಾರೆ.

  ಸೋನಾ ಮೋಹಪತ್ರ ಟ್ವೀಟ್ ಮಾಡಿ ''18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂಬ ಸುದ್ದಿ ಓದಿದೆ. ಇದು ಉತ್ತಮ ಸುದ್ದಿ'' ಎಂದಿದ್ದಾರೆ.

  ಸ್ವರ ಭಾಸ್ಕರ್ ಟ್ವೀಟ್ ಮಾಡಿ ''ಕೊನೆಗೂ ಒಳ್ಳೆಯ ನಿರ್ಧಾರ, ಧನ್ಯವಾದ'' ಎಂದಿದ್ದಾರೆ.

  ಇನ್ನು ನಿರ್ಮಾಪಕ ರೋನಿ ಸ್ಕ್ರೂವಾಲಾ ಟ್ವೀಟ್ ಮಾಡಿ ''18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ಅತ್ಯುತ್ತಮ ಸುದ್ದಿ. ಆದರೆ, ನಮ್ಮ ಯುವ ಭಾರತೀಯರು ಒಂದನ್ನು ನೆನಪಿನಲ್ಲಿಡಬೇಕು. ಈ ಲಸಿಕೆ ನಮ್ಮನ್ನು ಸೂಪರ್ ಮ್ಯಾನ್ ಅಥವಾ ಐರನ್ ಮ್ಯಾನ್ ಆಗಿ ಮಾಡುವುದಿಲ್ಲ. ಸುರಕ್ಷಿತೆಗೆ ಸಹಾಯ ಮಾಡುತ್ತದೆ ಅಷ್ಟೇ. ಮಾಸ್ಕ್ ಧರಿಸುವುದು, ಮುಂಜಾಗ್ರತೆ ವಹಿಸುವುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಇನ್ನು ತುಂಬಾ ಸಮಯ ನಾವು ಸಾಗಬೇಕಿದೆ'' ಎಂದು ಮನವಿ ಮಾಡಿದ್ದಾರೆ.

  ಇನ್ನುಳಿದಂತೆ ಬಾಲಿವುಡ್ ಇಂಡಸ್ಟ್ರಿ ಹಲವು ಕಲಾವಿದರಿಗೆ ಸೋಂಕು ತಗುಲಿದೆ. ವಿಶೇಷವಾಗಿ 45 ವರ್ಷದಿಂದ ಕಡಿಮೆ ವಯಸ್ಸಿನವರು ಈ ಪಟ್ಟಿಯಲ್ಲಿ ಹೆಚ್ಚಿದ್ದಾರೆ. ವರುಣ್ ಧವನ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್, ಭೂಮಿ ಪೆಡ್ನೇಕರ್, ಕತ್ರಿನಾ ಕೈಫ್, ಕಾರ್ತಿಕ್ ಆರ್ಯನ್‌ಗೆ ಸೋಂಕು ತಗುಲಿತ್ತು.

  ಹಿರಿಯ ನಟರಾದ ಅಕ್ಷಯ್ ಕುಮಾರ್, ಗೋವಿಂದ ಹಾಗೂ ಅಮೀರ್ ಖಾನ್‌ಗೂ ಕೋವಿಡ್ ಸೋಂಕು ತಗುಲಿತ್ತು.

  ಪವರ್ ಸ್ಟಾರ್ ಗೆ ಕರೆ ಮಾಡಿದ ಎಂಎಸ್ ಧೋನಿ ಹೇಳಿದ್ದೇನು? | Filmibeat Kannada

  ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಸಂಜಯ್ ದತ್, ಕಮಲ್ ಹಾಸನ್, ನಾಗಾರ್ಜುನ, ಪರೇಶ್ ರಾವಲ್ ಮುಂತಾದವರು ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದರು.

  English summary
  Kareena Kapoor, Ritesh Deshmukh and other Bollywood Celebrities React About COVID-19 Vaccine For All Above 18.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X