For Quick Alerts
  ALLOW NOTIFICATIONS  
  For Daily Alerts

  ಗಂಗೂಬಾಯಿ ಟೀಸರ್ ಔಟ್: ಅಲಿಯಾ ಭಟ್ ಹೊಸ ಅವತಾರಕ್ಕೆ ಬಾಲಿವುಡ್ ಫಿದಾ

  |

  ಬಾಲಿವುಡ್ ಬ್ಯೂಟಿ ಅಲಿಯಾ ಭಟ್ ನಟನೆಯ ಬಹುನಿರೀಕ್ಷೆಯ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಮೂಡಿಬಂದಿರುವ ಗಂಗೂಬಾಯಿ ಸಿನಿಮಾದ ಟೀಸರ್ ಬಾಲಿವುಡ್ ಮಂದಿಯ ನಿದ್ದೆಗೆಡಿಸಿದೆ.

  ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ಗಣ್ಯರು ಸಹ ಟೀಸರ್ ಮತ್ತು ಅಲಿಯಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಮುಂಬೈನ ಕಾಮಾಟಿಪುರದ ಪ್ರೆಸಿಡೆಂಟ್ ಗಂಗೂಬಾಯಿ ಆಗಿ ಅಲಿಯಾ ಎಲ್ಲರ ಮನ ಗೆದ್ದಿದ್ದಾರೆ. ಸದ್ಯ ರಿಲೀಸ್ ಆಗಿರುವ ಪುಟ್ಟ ಟೀಸರ್ ನಿಂದನೇ ಅಲಿಯಾ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಇದುವರೆಗೂ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅಲಿಯಾ ಗಂಗೂಬಾಯಿ ಅಂತ ಪಾತ್ರಕ್ಕೆ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ.

  ಏಪ್ರಿಲ್‌ನಲ್ಲಿ RRR ಹಾಡಿನ ಚಿತ್ರೀಕರಣ ಆರಂಭಿಸಲಿದ್ದಾರೆ ಆಲಿಯಾ ಭಟ್

  ಗಂಗೂಬಾಯಿ ಟೀಸರ್ ನೋಡಿ ಬಾಲಿವುಡ್ ಸ್ಟಾರ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಷಯ್ ಕುಮಾರ್, ಪ್ರಿಯಾಂಕಾ ಚೋಪ್ರಾ, ಶಾರುಖ್ ಖಾನ್ ಸೇರಿದಂತೆ ಅನೇಕರು ಗಂಗೂಬಾಯಿ ಅಲಿಯಾ ಭಟ್ ಅವರನ್ನು ಹಾಡಿ ಹೊಗಳಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿ, ತುಂಬಾ ಹೆಮ್ಮೆಯಾಗುತ್ತೆ ಅಲಿಯಾ ಎಂದು ಹೇಳಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಮೊದಲಿನಿಂದಲೂ ಚಿತ್ರದ ಟೈಟಲ್ ಗಮನ ಸೆಳೆಯುತ್ತಿತ್ತು. ಇದೀಗ ಟೀಸರ್ ಸೇರ್ಪಡೆಯಾಗಿದೆ. ಸಿನಿಮಾಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

  ಇನ್ನು ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿ, ನಾನು ಒಬ್ಬ ಚಿಕ್ಕ ನಟನಾಗಿ ನಿಮ್ಮ ನಟನೆಯನ್ನು ನೋಡುತ್ತಿರುತ್ತೇನೆ. ಇದು ಅತ್ಯಂತ ವಿಶೇಷವಾಗಿದೆ. ಚಿತ್ರಕ್ಕೆ ನನ್ನ ಪ್ರೀತಿ ಮತ್ತ ಶುಭಹಾರೈಕೆ ಎಂದು ಹೇಳಿದ್ದಾರೆ. ಇನ್ನೂ ಸಾಕಷ್ಟು ಮಂದಿ ಬಾಲಿವುಡ್ ಗಣ್ಯರು ಪ್ರತಿಕ್ರಿಯೆ ನೀಡಿ, ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಬಹುನಿರೀಕ್ಷೆಯ ಗಂಗೂಬಾಯಿ ಸಿನಿಮಾ ಜುಲೈನಲ್ಲಿ ತೆರೆಗೆ ಬರುತ್ತಿದೆ. ಹೌದು ಜುಲೈ 30ಕ್ಕೆ ಅಲಿಯಾ ಭಟ್ ಗಂಗೂಬಾಯಿ ಅವತಾರವನ್ನು ನೋಡಬಹುದು. ಅಂದಹಾಗೆ ಅಲಿಯಾ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ಸಿನಿಮಾದ ಎರಡು ಹಾಡಿನ ಚಿತ್ರೀಕರಣದಲ್ಲಿ ಅಲಿಯಾ ಭಾಗಿಯಾಗುತ್ತಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಬ್ರಹ್ಮಾಸ್ತ್ರ್ ಸಿನಿಮಾದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.

  ನೆಟ್ಟಿಗರಿಗೆ ಪ್ರಿಯಾಂಕ ಚೋಪ್ರಾ ಏನ್ ಹೇಳಿದ್ದಾರೆ ಗೊತ್ತಾ? | Priyanka Chopra | Filmibeat Kannada
  English summary
  Alia Bhatt starrer Gangubai Kathiawadi teaser release. Bollywood celebrities react to gangubai kathiawadi teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X