twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಸಿನಿಮಾ ತಾರೆಯರ ಪ್ರತಿಕ್ರಿಯೆ ಹೀಗಿದೆ

    |

    2012ರ ಡಿಸೆಂಬರ್ 16 ರಾತ್ರಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ಈ ಸಂಬಂಧ ನಾಲ್ವರಿಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿತ್ತು. 7 ವರ್ಷಗಳ ಬಳಿಕ ಈ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ.

    Recommended Video

    ಕೊಟ್ಟ ಮಾತು ಉಳಿಸಿಕೊಂಡ ನವರಸನಾಯಕ | Jaggesh donates 1 Lakh for Nirbhaya hangman

    ಅಪರಾಧಿಗಳಾದ ಅಕ್ಷಯ್ ಠಾಕೂರ್, ಪವನ್ ಗುಪ್ತ, ವಿನಯ್ ಶರ್ಮ, ಮುಖೇಶ್ ಸಿಂಗ್ ಈ ನಾಲ್ವರನ್ನು ಇಂದು ಮುಂಜಾನೆ ತಿಹಾರ್ ಜೈಲ್ ನಲ್ಲಿ ಗಲ್ಲಿಗೇರಿಸಲಾಗಿದೆ. ಬೆಳಗ್ಗೆ ಎದ್ದು ಅತ್ಯಾಚಾರಿಗಳ ಗಲ್ಲಿನ ಸುದ್ದಿ ಕೇಳಿ ಪ್ರತಿಯೊಬ್ಬ ಭಾರತೀಯನು ಸಂತಸ ವ್ಯಕ್ತಪಡಿಸಿದ್ದಾರೆ. 7 ವರ್ಷಗಳ ಬಳಿಕ ಈ ಪ್ರಕರಣಕ್ಕೆ ನ್ಯಾಯ ಸಿಕ್ಕ ಖುಷಿಯನ್ನು ಎಲ್ಲರು ಹಂಚಿಕೊಳ್ಳುತ್ತಿದ್ದಾರೆ. 7 ವರ್ಷಗಳ ಬಳಿಕ ಸಿಕ್ಕ ನ್ಯಾಯದ ಬಗ್ಗೆ ಸಿನಿಮಾ ತಾರೆಯರು ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

    ನಟಿ ಪ್ರೀತಿ ಜಿಂಟಾ

    "ಅಂತಿಮವಾಗಿ ನಿರ್ಭಯಾ ಪ್ರಕರಣ ಕೊನೆಗೊಂಡಿದೆ. ವೇಗವಾಗಿ ಆಗಬಹುದೆಂದು ಬಯಸಿದ್ದೆ. ಆದರೆ ಇದು ಮುಗಿಯಿತು ಎಂದು ನನಗೆ ಸಂತೋಷವಾಗಿದೆ. ಅಂತಿಮವಾಗಿ ಆಕೆ ಮತ್ತು ಅವಳ ಪೋಷಕರು ನೆಮ್ಮದಿ ಸಿಕ್ಕಿದೆ. ಆತ್ಮಕ್ಕೆ ಶಾಂತಿ ಸಿಗಲಿ ನಿರ್ಭಯ" ಎಂದು ನಟಿ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

    ನಟಿ ತಾಪ್ಸಿ ಪನ್ನು

    "ಕೊನೆಗೂ ಮುಗಿಯಿತು. ಅಂತಿಮವಾಗಿ ಅನೇಕ ವರ್ಷಗಳ ಬಳಿಕ ಆಕೆಯ ಪೋಷಕರು ಇಂದು ರಾತ್ರಿ ನೆಮ್ಮದಿಯ ನಿದ್ರೆ ಮಾಡಬಹುದೆಂದು ನಾನು ಭಾವಿಸುತ್ತೇನೆ. ಇದು ನಿರ್ಭಯ ಪೋಷಕರ ದೀರ್ಘಕಾಲದ ಹೋರಾಟವಾಗಿದೆ" ಎಂದು ನಟಿ ತಾಪ್ಸಿ ಪನ್ನು ಟ್ವೀಟ್ ಮಾಡಿದ್ದಾರೆ.

    ನಟಿ ಸುಷ್ಮಿತಾ ಸೇನ್

    "ತಾಯಿಯ ಸ್ಥಿತಿಸ್ಥಾಪಕತ್ವ. ಆಶಾ ದೇವಿ ಅದನ್ನು ನೋಡುತ್ತಾರೆ. ಕೊನೆಗೂ ಸ್ವಲ್ಪ ನ್ಯಾಯ ಸಿಕ್ಕಿದೆ" ಎಂದು ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಪ್ರತಿಕ್ರಿಯೆ ನೀಡಿದ್ದಾರೆ.

    ಖ್ಯಾತ ನಿರ್ದೇಶಕ ಮಾಧುರ್ ಭಂಡಾರ್ಕರ್

    "ಅಂತಿಮವಾಗಿ ನಿರ್ಭಯಾಗೆ ನ್ಯಾ ಒದಗಿಸಲಾಗಿದೆ. ಈಗ ಅವಳ ಹೆತ್ತವರಿಗೆ ಅಗತ್ಯವಾದ ಮಾನಸಿಕ ಶಾಂತಿಗಾಗಿ ಪ್ರಾರ್ಥಿಸುತ್ತೇನೆ" ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ಮಾಧುರ್ ಭಂಡಾರ್ಕರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಿರ್ಭಯ ತಾಯಿ ಕಣ್ಣೀರಿಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ನಟಿ ಇಶಾ ಕೋಪಿಕರ್

    "ನ್ಯಾಯ ವಿಳಂಬವಾದರೂ ನ್ಯಾಯವನ್ನು ನಿರಾಕರಿಸಲಾಗುವುದಿಲ್ಲ. ಬೆಳಗ್ಗೆ ಉತ್ತಮವಾದ ಸುದ್ದಿ ಕೇಳುತ್ತ ಎದ್ದೆ. ಅಂತಿಮವಾಗಿ ನಿರ್ಭಯ ಅಪರಾಧಿಗಳಿಗೆ ಗಲ್ಲಿ ಶಿಕ್ಷೆಯಾಯಿತು. ನಿಭರ್ಯಾ ಹೆತ್ತವರಿಗೆ ಮತ್ತು ನಿರ್ಭಯಾಗೆ ನ್ಯಾಯ ಒದಗಿಸಲು ತಮ್ಮದೆಯಾದ ರೀತಿಯಲ್ಲಿ ಹೋರಾಡಿದ ಪ್ರತಿಯೊಬ್ಬ ಭಾರತೀಯರಿಗೂ ಸಿಕ್ಕ ಜಯ ವಿದು" ಎಂದು ನಟಿ ಇಶಾ ಕೋಪಿಕರ್ ಟ್ವೀಟ್ ಮಾಡಿದ್ದಾರೆ.

    ನಟಿ ತಮ್ಮನ್ನಾ

    "ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗಿದೆ ಎಂಬ ನಂಬಲಾಗದ ಸುದ್ದಿಯೊಂದಿಗೆ ದಿನವನ್ನು ಪ್ರಾರಂಭಿಸಿ. ಕೊನೆಗೂ ನ್ಯಾಯ ಒದಗಿಸಲಾಗಿದೆ" ಎಂದು ನಟಿ ತಮ್ಮನ್ನಾ ಭಾಟಿಯ ಪ್ರತ್ರಿಕ್ರಿಯೆ ನೀಡಿದ್ದಾರೆ.

    ತಮಿಳು ನಟ ಕಾರ್ತಿ

    "ನಟಿ ಕಾರ್ತಿ ಕೂಡ ಪ್ರಕ್ರಿಯೆ ನೀಡಿದ್ದಾರೆ. ಅಂತಿಮವಾಗಿ 7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ. ಪೊಲ್ಲಾಚಿ ಪ್ರಕರಣಕ್ಕೆ ನ್ಯಾಯ ದೊರಕಿಸಲು ಇನ್ನು ಎಷಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಅಶ್ಚರ್ಯವಾಗುತ್ತೆ. ಈಗಾಗಲೆ ಒಂದು ವರ್ಷ ಕಳೆಯಿತು. ನಾವು ಕಲಿತ ಪಾಠವನ್ನು ನಾವು ಮರೆಯುವುದಿಲ್ಲ ಎಂದು ಭಾವಿಸುತ್ತೇವೆ. ಯಾವಾಗಲು ಸುರಕ್ಷಿತರಾಗಿರಿ" ಎಂದು ನಟ ಕಾರ್ತಿ ಟ್ವೀಟ್ ಮಾಡಿದ್ದಾರೆ.

    English summary
    Bollywood celebrities react about as 4 convicts are hanged to death after 7 years.
    Saturday, May 30, 2020, 14:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X