ಸಲ್ಲೂ ಮನೆಯಲ್ಲಿ ಗಣಪತಿ ಜೊತೆ ಬಾಲಿವುಡ್ ಸಂಭ್ರಮ

By ಜೇಮ್ಸ್ ಮಾರ್ಟಿನ್

ಹಬ್ಬ ಹರಿದಿನಗಳಲ್ಲಿ ಸಂಭ್ರಮ ಕಾಣಬೇಕಾದರೆ ಇಡೀ ಬಾಲಿವುಡ್ ಸಲ್ಮಾನ್ ಖಾನ್ ಮನೆಯತ್ತ ನೋಡುತ್ತದೆ. ರಂಜಾನ್ ಇರಲಿ ಗಣೇಶ ಚತುರ್ಥಿ ಬರಲಿ ಸಲ್ಲೂ ಮನೆ ಅತಿಥ್ಯಕ್ಕೆ ಫೇಮಸ್. ಭಾವೈಕ್ಯತೆಯ ಸಂಕೇತವಾಗಿ ಗಣೇಶ ಪೂಜೆಯನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಸಲ್ಮಾನ್ ಈ ವರ್ಷ ಕೂಡಾ ಕುಟುಂಬದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಹಲವಾರು ಸೆಲೆಬ್ರಿಟಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಸಲ್ಲೂ ಮಿಯಾ ಅವರ ತಾಯಿ ದೊಂಗ್ರಾ ಹಿಂದೂವಾಗಿದ್ದು, ಇಸ್ಲಾಂ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಮಾನ ಮಹತ್ವ ನೀಡುತ್ತಾ ಬಂದಿದ್ದಾರೆ. ಮಹಾ ಶಿವರಾತ್ರಿ, ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ ಸಲ್ಮಾನ್ ಮನೆಯಲ್ಲಿ ಸಾಮಾನ್ಯವಾಗಿ ಆಚರಿಸುವ ಹಬ್ಬಗಳಾಗಿವೆ.[ಮುರುಗದಾಸ್ ಜೊತೆ ಸಲ್ಮಾನ್ ಖಾನ್]

ಇತ್ತೀಚೆಗೆ ಮದುವೆಯಾದ ಪ್ರೀತಿಯ ತಂಗಿ ಅರ್ಪಿತಾ (ದತ್ತು ಪಡೆದ) ಮನೆಯಲ್ಲಿ ಕಳೆದ ವರ್ಷ ಗಣೇಶ ಹಬ್ಬ ಆಚರಿಸಲಾಗಿತ್ತು. ಈ ಬಾರಿ ಎಂದಿನಂತೆ ತಮ್ಮ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ 'ಗಣಪತಿ ಬಪ್ಪಾ ಮೋರಿಯಾ' ಎಂದಿದ್ದಾರೆ. ತಂಗಿ ಇಷ್ಟದಂತೆ 2001ರಿಂದ ಸಲ್ಲೂ ಮನೆಯಲ್ಲಿ ಗಣೇಶ ಭಜನೆ ಸಾಂಗವಾಗಿ ನಡೆಯುತ್ತಲೇ ಇದೆ.

ಸಲ್ಮಾನ್ ಖಾನ್ ಮನೆಗೆ ಈ ಬಾರಿ ಎಮಿ ಜಾಕ್ಸನ್, ಅಥಿಯಾ ಶೆಟ್ಟಿ, ಸೂರಜ್ ಪಾಂಚೋಲಿ, ಸೋಹಾ ಅಲಿಖಾನ್, ಎಲ್ಲಿ ಅವ್ರಾಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಯಾರು ಯಾರು ಬಂದಿದ್ದರು ಎಂಬುದನ್ನು ಮುಂದೆ ನೋಡಿ...

ಸಲ್ಲೂ ಕುಟುಂಬ ಪರಿಚಯ

ಸಲ್ಲೂ ಕುಟುಂಬ ಪರಿಚಯ

ಸಲ್ಲೂ ಕುಟುಂಬ ಪರಿಚಯ ಎಡ ತುದಿಯಲ್ಲಿ ಅಲ್ವೀರಾ(ಸಲ್ಮಾನ್ ತಂಗಿ) ಪಕ್ಕದಲ್ಲಿ ಹೆಲೆನ್, ಸಲೀಂ ಖಾನ್ (ಸಲ್ಮಾನ್ ಅಪ್ಪ). ಸಲ್ಮಾನ್ ಬಲಕ್ಕೆ ತಾಯಿ ಸುಶೀಲಾ ಚರಕ್, ಎಡಭಾಗದಲ್ಲಿ ಅರ್ಪಿತಾ. ಪುಟ್ಟ ಹುಡುಗ ಅರ್ಬಾಜ್ ಖಾನ್ ಮಗ

ನಮ್ಮ ಮನೆ ಸುಂದರ ಗಣಪ

ನಮ್ಮ ಮನೆ ಸುಂದರ ಗಣಪ ಎಂದು ಟ್ವೀಟ್ ಮಾಡಿದ ಅರ್ಪಿತಾ

ಗಣೇಶ ಹಬ್ಬದ ಸಂಭ್ರಮದಲ್ಲಿ ಅರ್ಪಿತಾ

ಗೆಳತಿಯರ ಜೊತೆಗೆ ಗಣೇಶ ಹಬ್ಬದ ಸಂಭ್ರಮದಲ್ಲಿ ಅರ್ಪಿತಾ

ಬಾಗಿಲಲ್ಲಿ ನಿಂತು ಎಲ್ಲರನ್ನು ಸ್ವಾಗತಿಸಿದ ಸಲ್ಲೂ

ಬಾಗಿಲಲ್ಲಿ ನಿಂತು ಎಲ್ಲರನ್ನು ಸ್ವಾಗತಿಸಿದ ಸಲ್ಲೂ

ಬಾಗಿಲಲ್ಲಿ ನಿಂತು ಅತಿಥಿಗಳನ್ನು ಸ್ವಾಗತಿಸಿದ ಸಲ್ಮಾನ್ ಖಾನ್

ಏಮಿ ಜಾಕ್ಸನ್ ಗೆ ಮೊದಲ ಗಣೇಶ ಪೂಜೆ

ಏಮಿ ಜಾಕ್ಸನ್ ಗೆ ಮೊದಲ ಗಣೇಶ ಪೂಜೆ

ಸಿಂಗ್ ಇಸ್ ಬ್ಲಿಂಗ್ ಚಿತ್ರದ ನಟಿ ಏಮಿ ಜಾಕ್ಸನ್ ಗೆ ಸಲ್ಲೂ ಮನೆಯಲ್ಲಿ ಮೊದಲ ಗಣೇಶ ಪೂಜೆ

ಸಲ್ಲೂ ಆಪ್ತ ಗೆಳತಿ ಎಲ್ಲಿ ಅವ್ರಾಮ್

ಸಲ್ಲೂ ಆಪ್ತ ಗೆಳತಿ ಎಲ್ಲಿ ಅವ್ರಾಮ್

ಸಲ್ಲೂ ಆಪ್ತ ಗೆಳತಿ ಎಲ್ಲಿ ಅವ್ರಾಮ್ ಅವರು ಗ್ಯಾಲಕ್ಸಿ ಅಪಾರ್ಟ್ಮೆಂಟ್ ಕಡೆ ಬರುತ್ತಿರುವ ಚಿತ್ರ

ಸುನಿಲ್ ಶೆಟ್ಟಿ ಪುತ್ರಿ ಅಥಿಯಾ

ಸುನಿಲ್ ಶೆಟ್ಟಿ ಪುತ್ರಿ ಅಥಿಯಾ

ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರು ಸಲ್ಮಾನ್ ಖಾನ್ ಮನೆಗೆ ಬಂದಿದ್ದರು.

ಸಲ್ಮಾನ್ ಖಾನ್ ಅವರ ಮಲ ತಾಯಿ ಹೆಲನ್

ಸಲ್ಮಾನ್ ಖಾನ್ ಅವರ ಮಲ ತಾಯಿ ಹೆಲನ್

ಸಲ್ಮಾನ್ ಖಾನ್ ಅವರ ಮಲ ತಾಯಿ ಹೆಲನ್ ಅವರು ಪತಿ ಸಲಿಂ ಖಾನ್ ಬಿಟ್ಟು ಗೆಳತಿಯರ ಜೊತೆ ಬಂದಿದ್ದು ವಿಶೇಷ.

ನಟಿ ಸೋಹಾ ಅಲಿ ಖಾನ್

ನಟಿ ಸೋಹಾ ಅಲಿ ಖಾನ್

ಸೈಫ್ ಅಲಿಖಾನ್ ಸೋದರಿ ನಟಿ ಸೋಹಾ ಅಲಿ ಖಾನ್ ಅವರು ಪತಿ ಕುನಾಲ್ ಖೆಮು ಜೊತೆಗೆ ಬಂದಿದ್ದರು.

ರಾಜ್ ಬಬ್ಬರ್ ಪುತ್ರ ಪ್ರತೀಕ್

ರಾಜ್ ಬಬ್ಬರ್ ಪುತ್ರ ಪ್ರತೀಕ್

ರಾಜ್ ಬಬ್ಬರ್ ಪುತ್ರ ಪ್ರತೀಕ್ ತನ್ನ ಕಸಿನ್ ಜೊತೆ ಬಂದಿದ್ದರು

ಪಂಚೋಲಿ ಫ್ಯಾಮಿಲಿ ಆಗಮನ

ಪಂಚೋಲಿ ಫ್ಯಾಮಿಲಿ ಆಗಮನ

ಸಲ್ಮಾನ್ ಖಾನ್ ಮನೆಗೆ ಸೂರಜ್, ಆದಿತ್ಯಾ ಪಂಚೋಲಿ ಕುಟುಂಬ ಆಗಮನ.

More from Filmibeat

English summary
Salman Khan has been celebrating Ganesh Chaturthi religiously from 2001! Ever since his sister Arpita insisted on getting the idol home, the khan family has been celebrating the festival diligently year after year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X