'ಟಾಕ್ಸಿಕ್' ಸಿನಿಮಾ ಮೇಲೆ ಬಾಲಿವುಡ್ ತಾರೆಯರಿಗೆ ದಿಢೀರನೆ ಲವ್ವಾಗೋಯ್ತಾ?

ಕಿಚ್ಚ ಸುದೀಪ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಖ್ಯಾತನಾಮರು 'ಟಾಕ್ಸಿಕ್' ಟೀಸರ್ ನೋಡಿ ಹಾಕಿ ಹೊಗಳಿದ್ದಾರೆ. ಇದೀಗ ನಿಧಾನವಾಗಿ ಬಾಲಿವುಡ್ ಮಂದಿ ಯಶ್ ಆರ್ಭಟದ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಆಲಿಯಾ ಭಟ್, ನಿರ್ದೇಶಕ ಕರನ್ ಜೋಹರ್ ಹಾಗೂ ನಟ ವಿವೇಕ್ ಒಬೆರಾಯ್ ಸೇರಿದಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

ದಿಢೀರನೆ ಬಿಟೌನ್ ಮಂದಿ 'ಟಾಕ್ಸಿಕ್' ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಯಾಕೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಧುರಂಧರ್' ಗೆಲುವು ಕೆಲವರಿಗೆ ಇಷ್ಟವಾಗಿಲ್ಲ. ಅದಕ್ಕೆ ಇದೀಗ 'ಟಾಕ್ಸಿಕ್' ಬಗ್ಗೆ ಮಾತನಾಡುತ್ತಿದ್ದಾರೆ. ಮಾರ್ಚ್ 19ರಂದು 'ಟಾಕ್ಸಿಕ್' ಹಾಗೂ 'ಧುರಂಧರ್-2' ಒಟ್ಟಿಗೆ ತೆರೆಗೆ ಬರುತ್ತಿರುವುದು ಇದಕ್ಕೆ ಕಾರಣ ಎನ್ನುವ ವಾದ ಕೆಲವರದ್ದು. ಆದರೆ ಬಾಲಿವುಡ್ ಮಂದಿ ಹೀಗೆ 'ಟಾಕ್ಸಿಕ್' ಟೀಸರ್ ಮೆಚ್ಚಿ ಪೋಸ್ಟ್ ಮಾಡಲು ಬೇರೆಯದ್ದೇ ಕಾರಣವಿದೆ.

Bollywood Cheers Yash s Toxic Teaser as It Crosses 75 Million Views Sparks Massive Buzz

'ಟಾಕ್ಸಿಕ್' ಟೀಸರ್ ಬಗ್ಗೆ ನಟಿ ಆಲಿಯಾ ಭಟ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಡೈನಮೈಟ್' ಎಂದು ಬರೆದು ಬೆಂಕಿ ಎಮೋಜಿ ಹಾಕಿದ್ದಾರೆ. ಯಶ್ ಸದ್ಯ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆ. ಆಲಿಯಾ ಪತಿ ರಣ್‌ಬೀರ್ ಕಪೂರ್ ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಯಶ್ ಜೊತೆ ಆಲಿಯಾಗೆ ಒಳ್ಳೆ ಒಡನಾಟ ಇದೆ. ಅದೇ ಕಾರಣಕ್ಕೆ ಆಕೆ 'ಟಾಕ್ಸಿಕ್' ಟೀಸರ್ ನೋಡಿ ಪೋಸ್ಟ್ ಮಾಡಿರುವ ಸಾಧ್ಯತೆಯಿದೆ.

'KGF' ಸರಣಿ ಸಿನಿಮಾಗಳ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಮೆಚ್ಚುಗೆ ಸೂಚಿಸುತ್ತಾ ಬಂದಿದ್ದರು. 'KGF'-2 ಟ್ರೈಲರ್ ಲಾಂಚ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಹಾಗಾಗಿ ಕರ್ ಈಗ 'ಟಾಕ್ಸಿಕ್' ಟೀಸರ್ ನೋಡಿ ಪೋಸ್ಟ್ ಮಾಡಿದ್ದಾರೆ. "ವಾಹ್.. ಎಂಥಹ ಬರ್ತ್‌ಡೇ ಅನೌನ್ಸ್‌ಮೆಂಟ್.. ನಿಜಕ್ಕೂ ರಾಕಿಂಗ್ ಯಶ್.. ಹುಟ್ಟುಹಬ್ಬದ ಶುಭಾಶಯ" ಎಂದು ಕರಣ್ ಬರೆದುಕೊಂಡಿದ್ದಾರೆ.

Bollywood Cheers Yash s Toxic Teaser as It Crosses 75 Million Views Sparks Massive Buzz

ನಟ ವಿವೇಕ್ ಒಬೆರಾಯ್ ಟ್ವೀಟ್ ಮಾಡಿ "ಈ ಟೀಸರ್ ಕೇವಲ ಕುತೂಹಲಕಾರಿಯಲ್ಲ, ಇದು ಟಾಕ್ಸಿಕ್ ಆಗಿದೆ, ಟಿಪಿಕಲ್ ಯಶ್ ಬಾಸ್ ಶೈಲಿಯಲ್ಲಿದೆ. ಹುಟ್ಟುಹಬ್ಬದ ಶುಭಾಶಯಗಳು, ನನ್ನ ತಮ್ಮ ರಾಯ. ನಿಮ್ಮ ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಎಲ್ಲಾ ಪ್ರೀತಿಗೆ ನೀವು ಅರ್ಹರು. ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ ಮತ್ತು ಲುಕ್ ಸಕ್ಕತ್ ಆಗಿದೆ" ಬರೆದುಕೊಂಡಿದ್ದಾರೆ. ರಾಮಾಯಣ ಚಿತ್ರದಲ್ಲಿ ಶೂರ್ಪನಖಿ ಪತಿ ವಿದ್ಯುತ್ಜೀವನ ಪಾತ್ರದಲ್ಲಿ ವಿವೇಕ್ ನಟಿಸುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಬರೀ ಟೀಸರ್‌ ಕ್ವಾಲಿಟಿ ನೋಡಿ ಕೆಲವರು ಫಿದಾ ಆಗಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲ ಫಿಲ್ಮ್ ಮೇಕರ್ಸ್ ಕುಡ ಹುಬ್ಬೇರಿಸಿದ್ದಾರೆ. ಸಿನಿಮಾ ಯಾವ ಮಟ್ಟಕ್ಕೆ ತೆರೆಗೆ ಬರಲಿದೆ ಎಂದು ಕಾಯುವಂತಾಗಿದೆ.

More from Filmibeat

Read more about: toxic alia bhatt yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X