ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಹಾಸ್ಯ ನಟ ಮೋಹಿತ್ ಬಾಗೆಲ್ ನಿಧನ
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಖ್ಯಾತ ಹಾಸ್ಯ ನಟ ಮೋಹಿತ್ ಬಾಗೆಲ್ ನಿಧರಾಗಿದ್ದಾರೆ. ಬಾಲಕಲಾವಿದನಾಗಿ, ಸ್ಟ್ಯಾಂಡ್ ಅಪ್ ಕಾಮಿಡಿ ಮತ್ತು ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕದ ಗೀಳು ಬೆಳೆಸಿಕೊಂಡಿದ್ದ ಮೋಹಿತ್ ಬಾಗೆಲ್, ಸಲ್ಮಾನ್ ಖಾನ್ ಅಭಿನಯದ ರೆಡಿ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರಾವೇಶ ಮಾಡಿದ್ದರು.
Recommended Video
27 ವರ್ಷದ ಮೋಹಿತ್ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ನೋಯ್ಡಾದಲ್ಲಿ ಕೊನೆಯುಸಿರೆಳಿದ್ದಾರೆ. ಮೋಹಿತ್ ಉತ್ತರ ಪ್ರದೇಶದ ಮಥುರಾ ಮೂಲದವರು. ನೋಯ್ಡಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೇ 14ರಂದು ಕೀಮೋಥೆರಪಿ ಮಾಡಿಸಿಕೊಂಡಿದ್ದರು. ಕೀಮೋಥೆರಪಿ ಮಾಡಿ ಕೆವಲೇ ದಿನಗಳಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೋಹಿತ್ ನಿಧನಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಲ್ಮಾನ್ ಖಾನ್ ಸೇರಿದಂತೆ ಸಿದ್ಧಾರ್ಥ್ ಮಲ್ಹೋತ್ರ, ಪರಿಣೀತಿ ಚೋಪ್ರ ಹಾಗೂ ಬಾಲಿವುಡ್ ನ ಸಾಕಷ್ಟು ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಪರಿಣೀತಿ ಮತ್ತು ಸಿದ್ದಾರ್ಥ್ ಅಭಿನಯದ ಜಬಾರಿಯ ಜೋಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮೋಹಿತ್ ನಿಧನದ ಸುದ್ದಿ ಕೇಳಿ ನಟಿ ಪರಿಣೀತಿ ಚೋಪ್ರಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. "ನಾನು ಕೆಲಸ ಮಾಡಿದ ಉತ್ತಮ ಜನರಲ್ಲಿ ಒಬ್ಬರು. ಯಾವಾಗಲು ಸಂತೋಷ ಮತ್ತು ಪಾಸಿಟಿವ್ ಆಗಿರುವ ವ್ಯಕ್ತಿಯಾಗಿದ್ದರು. ಲವ್ ಯೂ ಮೋಹಿತ್" ಎಂದು ಬರೆದುಕೊಂಡಿದ್ದಾರೆ.
ಮೋಹಿತ್ ಸುಮಾರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಮೋಹಿತ್ ಬಂಟಿ ಔರ್ ಬಬ್ಲಿ-2 ಸಿನಿಮಾದಲ್ಲಿ ಮೋಹಿತ್ ಬ್ಯುಸಿಯಾಗಿದ್ದರು. ಇನ್ನೂ ಚಿತ್ರೀಕರಣ ಹಂತದಲ್ಲಿರುವಾಗಲೆ ಮೋಹಿತ್ ಕೊನೆಯುಸಿರೆಳೆದಿದ್ದಾರೆ. ಇನ್ನೂ ಸಾಕಷ್ಟು ಸಿನಿಮಾಗಳು ಅವರ ಕೈಯಲ್ಲಿದ್ದವು. ಆದಕೆ ಕನಸುಗಳೆಲ್ಲವು ನನಸಾಗುವ ಮೊದಲೆ ಮೋಹಿತ್ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ.


Click it and Unblock the Notifications











