Allu Arjun: ಬಾಲಿವುಡ್‌ನಿಂದ ಅಲ್ಲು ಅರ್ಜುನ್‌ಗೆ ಬಂತು ದೊಡ್ಡ ಸಿನಿಮಾ: ಸ್ಟಾರ್ ನಿರ್ದೇಶಕ ಆ್ಯಕ್ಷನ್ ಕಟ್!
ತೆಲುಗು ನಟ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ನಂತರ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಎಂಥಹ ಸಿನಿಮಾ ಮಾಡಬಹುದು ಎನ್ನುವ ಕುತೂಹಲ ಎಲ್ಲರೂ ಇದ್ದೇ ಇದೆ. ಅಷ್ಟರ ಮಟ್ಟಿಗೆ ಪುಷ್ಪ ಸಿನಿಮಾ ಪ್ರಭಾವ ಬೀರಿದೆ. ಪುಷ್ಪ ಸಿನಿಮಾ ಅಲ್ಲು ಅರ್ಜುನ್‌ಗೂ ಕೂಡ ಹೆಚ್ಚಿನ ಜವಾಬ್ದಾರಿ ವಹಿಸಿದೆ. ಈ ಚಿತ್ರದ ಸಕ್ಸಸ್ ಅಲ್ಲು ಅರ್ಜುನ್‌ರನ್ನು ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ.
ಪುಷ್ಪ ಸಿನಮಾದ ಮೂಲಕ ಅಲ್ಲು ಅರ್ಜುನ್ ಬಾಲಿವುಡ್‌ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಬಿ ಟೌನ್ ಮಂದಿಗೆ ಪುಷ್ಪ ದೊಡ್ಡ ಮಟ್ಟದ ಶಾಕ್ ಕೊಟ್ಟಿದೆ. ಅದ್ಧೂರಿ ಯಶಸ್ಸಿನ ಮೂಲಕ ಹಿಂದಿ ಚಿತ್ರಗಳನ್ನೇ ಹಿಂದಿಕ್ಕಿದೆ ಪುಷ್ಪ. ಹಾಗಾಗಿ ಬಾಲಿವುಡ್‌ನಲ್ಲೂ ಕೂಡ ಅಲ್ಲು ಅರ್ಜುನ್‌ಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅಲ್ಲು ಅರ್ಜುನ್ ಬಾಲಿವುಡ್‌ಗಾಗಿ ಸಿನಿಮಾ ಮಾಡಲಿದ್ದಾರೆ.
ಸದ್ಯ ಅಲ್ಲು ಅರ್ಜುನ್ ಬಾಲಿವುಡ್ ಚಿತ್ರದ ಬಗ್ಗೆ ಒಂದಷ್ಟು ಸುದ್ದಿಗಳು ಹಬ್ಬಿವೆ. ಸುದ್ದಿ ಹಬ್ಬಿರುವುದ ಮಾತ್ರ ಅಲ್ಲ, ಅಲ್ಲು ಅರ್ಜುನ್ ಬಾಲಿವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೊತೆಗೆ ಸಿನಿಮಾ ಮಾತು ಕಥೆಯನ್ನೂ ಮುಗಿಸಿದ್ದಾರಂತೆ. ಯಾವುದು ಆ ಸಿನಿಮಾ? ಅ ನಿರ್ದೇಶಕ ಯಾರು? ಎನ್ನುವ ಬಗ್ಗೆ ಮುಂದೆ ಓದಿ..

ಮುಂಬೈನಲ್ಲಿ ಪ್ರತ್ಯಕ್ಷವಾದ ನಟ ಅಲ್ಲು ಅರ್ಜುನ್!
ನಟ ಅಲ್ಲು ಅರ್ಜುನ್ ಇದ್ದಕ್ಕಿದ್ದ ಹಾಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಮುಂಬೈಗೆ ಭೇಟಿ ನೀಡಿದ್ದು ಅಚ್ಚರಿಗೆ ಕಾರಣ ಆಗಿದೆ. ಯಾಕೆಂದರೆ ಅವರು ಪ್ರವಾಸ ಅಥವಾ ಯಾವುದೋ ಸಿನಿಮಾ ಶೂಟಿಂಗ್‌ಗಾಗಿ ಹೋಗಿಲ್ಲ. ಹಾಗಾಗಿ ಈ ಧಿಡೀರ್ ಭೇಟಿ ಯಾಕೆ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಬಿ ಟೌನ್‌ನಲ್ಲಿ ಬೇರೆಯದ್ದೇ ಗುಸು, ಗುಸು ಹಬ್ಬಿದೆ. ಅಲ್ಲು ಅರ್ಜುನ್ ಹೊಸ ಸಿನಿಮಾದ ಮಾತುಕಥೆಗಾಗಿ ಮುಂಬೈಗೆ ಬಂದಿದ್ದಾರೆ ಎನ್ನಲಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ!
ಬಾಲಿವುಡ್‌ನ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಯಲ್ಲಿ ಅಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್, ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಗುಸು-ಗುಸು ಹಬ್ಬಿದೆ. 'ಪುಷ್ಪ 2' ಚಿತ್ರದ ಬಳಿಕ ಅಲ್ಲು ಅರ್ಜುನ್‌ಗೆ ಆ್ಯಕ್ಷನ್ ಕಟ್ ಹೇಳಲು ಬಾಲಿವುಡ್ ನಿರ್ದೇಶಕ ಬನ್ಸಾಲಿ ಬರಲಿದ್ದಾರಂತೆ.

'ಪುಷ್ಪ' ಚಿತ್ರಕ್ಕಿಂತಲೂ ದೊಡ್ಡ ಪ್ರಾಜೆಕ್ಟ್!
ಕೇವಲ ಅಲ್ಲು ಅರ್ಜುನ್ ಮತ್ತು ಬನ್ಸಾಲಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಮಾತ್ರ ಹಬ್ಬಿಲ್ಲ. ಈ ಸಿನಿಮಾ ಯಾವ ಮಟ್ಟದಲ್ಲಿ ಇರಲಿದೆ ಎನ್ನುವ ಸುದ್ದಿ ಕೂಡ ಇದೆ. ಈ ಚಿತ್ರಕ್ಕೆ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆಯಂತೆ. ಅಷ್ಟೇ ಅಲ್ಲ ಈ ಚಿತ್ರ ಪುಷ್ಪ ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ತಯಾರಾಗಲಿದೆಯಂತೆ. ಈ ಮೂಲಕ ನಟ ಅಲ್ಲು ಅರ್ಜುನ್ ಬಾಲಿವುಡ್‌ನಲ್ಲೂ ಗಟ್ಟಿಯಾಗಿ ನಿಲ್ಲಲಿದ್ದಾರೆಯೇ ಕಾದು ನೋಡಬೇಕಿದೆ.

ಬಾಲಿವುಡ್‌ನಲ್ಲಿ ರೆಕಾರ್ಡ್ ಬರೆದ ಪುಷ್ಪ!
ದೊಟ್ಟ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡ ಪುಷ್ಪ ಸಿನಿಮಾ, ಬಾಲಿವುಡ್‌ನಲ್ಲಿ ಕಮಾಲ್ ಮಾಡಿದೆ. ಹಿಂದಿ ಅವತರಣಿಕೆಯಲ್ಲಿ ಪುಷ್ಪ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದೆ. ಹಿಂದಿ ಅವತರಣಿಕೆಯಲ್ಲಿ ಒಟ್ಟಾರೆ ಪುಷ್ಪ ಗಳಿಸಿದ ಮೊತ್ತ 108 ಕೋಟಿ ಎಂದು ವರದಿ ಆಗಿದೆ. ನಂತರ ಓಟಿಟಿಯಲ್ಲಿ ರಿಲೀಸ್ ಆಗಿ ಪುಷ್ಪ ದಾಖಲೆ ಮಾಡಿದೆ. ಈಗ ಬಾಲಿವುಡ್ ನಿರ್ದೇಶಕನ ಜೊತೆಗೆ ಅಲ್ಲು ಅರ್ಜುನ್ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











