twitter
    For Quick Alerts
    ALLOW NOTIFICATIONS  
    For Daily Alerts

    ಗೂಗಲ್ ಸಿಇಓ ಸುಂದರ್ ಪಿಚೈ ವಿರುದ್ಧ FIR: ಬಾಲಿವುಡ್ ನಿರ್ದೇಶಕನಿಂದ ದೂರು

    |

    ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಿದೆ. ಸುಮಾರು 128 ಸಾಧಕರಿಗೆ ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು ತಂತ್ರಜ್ಞಾನ ವಲಯದಲ್ಲಿ ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೂ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಈ ಖುಷಿಯಲ್ಲಿರುವಾಗಲೇ ಬಾಲಿವುಡ್ ನಿರ್ದೇಶಕರೊಬ್ಬರು ಸುಂದರ್ ಪಿಚೈ ವಿರುದ್ಧ ದೂರು ದಾಖಲಿಸಿದ್ದಾರೆ.

    ಹಾಗಂತ ಸುಂದರ್ ಪಿಚೈಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಿದ್ದಕ್ಕೆ ಈ ದೂರನ್ನು ದಾಖಲಿಸಿಲ್ಲ. ಗೂಗಲ್ ಸಿಇಓ ಸುಂದರ್ ಪಿಚೈ ಹಾಗೂ ಅವರ ಸಿಬ್ಬಂದಿ ಜೊತೆ ಯೂಟ್ಯೂಬ್ ಸಿಬ್ಬಂದಿ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಹೊರಿಸಿ ಎಫ್‌ಐಆರ್ ಸಲ್ಲಿಸಿದ್ದಾರೆ. ಅಸಲಿಗೆ ಸುಂದರ್ ಪಿಚೈ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಿರ್ದೇಶಕ ಯಾರು? ಅವರ ಆರೋಪವೇನು ಅಂತ ತಿಳಿಯಲು ಮುಂದೆ ಓದಿ.

    ಗೂಗಲ್ ಸಿಇಓ ಸುಂದರ್ ಪಿಚೈ ವಿರುದ್ಧ ದೂರು

    ಅಷ್ಟಕ್ಕೂ ಗೂಗಲ್ ಸಿಇಓ ಸುಂದರ್ ಪಿಚೈ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಿರ್ದೇಶಕ ಸುನೀಲ್ ದರ್ಶನ್. ಬಾಲಿವುಡ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೆಶನ ಮಾಡಿದ್ದಾರೆ. ಜಾನ್ವರ್, ಇಂತಕಾಮ್, ಏಕ್ ರಿಶ್ತಾ, ಅಂದಾಜ್, ಬರ್ಸಾತ್ ಅಂತ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ಜನವರಿ 25 ರಂದು ಹಕ್ಕುಸ್ವಾಮ್ಯಾ ಉಲ್ಲಂಘನೆ ಆರೋಪದ ಮೇರೆಗೆ ಸುಂದರ್ ಪಿಚೈ ಸೇರಿದಂತೆ ಅವರ ಸಿಬ್ಬಂದಿ ಹಾಗೂ ಯೂಟ್ಯೂಬ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

    Bollywood Director Suneel Darshan Files Fir Against Google CEO Sundar Pichai

    ಸುನೀಲ್ ದರ್ಶನ್ 2017ರಲ್ಲಿ 'ಏಕ್ ಹಸೀನಾ ಥಿ ಏಕ್ ದಿವಾನಾ ಥಾ' ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಈ ಸಿನಿಮಾ ಸಿಕ್ಕಾ ವೀವ್ಸ್ ಬಂದಿತ್ತು. ಬಿಲಿಯನ್‌ನಷ್ಟು ಮಂದಿ ವೀವ್ಸ್ ಸಿಕ್ಕಿತ್ತು. ಈ ಸಿನಿಮಾದ ವೀವ್ಸ್ ವಿಚಾರದಲ್ಲಿ ಹಕ್ಕುಸ್ವಾಮ್ಯಾ ಉಲ್ಲಂಘನೆ ಆಗಿದೆ ಎಂದು ಗೂಗಲ್‌ಗೆ ಸಾಕಷ್ಟು ಬಾರಿ ಮೇಲ್ ಮಾಡಿದ್ದರು. ಆದರೆ, ಗೂಗಲ್ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಮೊದಲ ಹೆಜ್ಜೆ ಎಂಬಂತೆ ಸುಂದರ್ ಪಿಚೈ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ಈ ಮೂಲಕ ಗೂಗಲ್ ಗಮನ ಸೆಳೆಯಬಹುದೆಂಬ ನಂಬಿಕೆಯಲ್ಲಿ ಸುನೀಲ್ ದರ್ಶನ್ ಇದ್ದಾರೆ.

    Bollywood Director Suneel Darshan Files Fir Against Google CEO Sundar Pichai

    ಸುನೀನ್ ದರ್ಶನ್ ಮಾಡುತ್ತಿರುವುದು ಬರೀ ಗಿಮಿಕ್

    ಬಾಲಿವುಡ್ ನಿರ್ದೇಶಕ ಸುನೀಲ್ ದರ್ಶನ್ ಗೂಗಲ್ ಸಿಇಓ ಸುನೀಲ್ ದರ್ಶನ್ ವಿರುದ್ಧ ದೂರು ದಾಖಲಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ನಿರ್ದೇಶಕ ಸುನೀಲ್ ದರ್ಶನ್ ಗೂಗಲ್ ಸಿಇಓ ವಿರುದ್ಧ ಎಫ್‌ಐಆರ್ ಸಲ್ಲಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆನೂ ಸುನೀಲ್ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಗೊಳ್ಳುತ್ತಿದ್ದಂತೆ ಈ ದೂರು ದಾಖಲಿಸಿರುವುದು ಕೇವಲ ಪ್ರಚಾರಕ್ಕೆ ಎಂದು ಟೀಕಿಸುತ್ತಿದ್ದಾರೆ.

    ಆದರೆ, ಸುನೀಲ್ ದರ್ಶನ್ ಮಾತ್ರ ದೂರು ದಾಖಲಿಸಿದ್ದು ಪ್ರಚಾರಕ್ಕೊಸ್ಕರ ಅಲ್ಲ. "ನಾನು ವಾಸ್ತವ ಅಂಶಗಳನ್ನು ದಾಖಲೆ ಮಾಡಲು ಈ ದೂರನ್ನು ದಾಖಲಿಸಿದ್ದೇನೆ. ಅದನ್ನು ಬೇರೆ ಏನೂ ದುರುದ್ಧೇಶವಿಲ್ಲ. ಒಬ್ಬ ಸಿನಿಮಾ ನಿರ್ದೇಶಕನಾಗಿ ಹಾಗೀ ಕಾಪಿರೈಟ್ ಮಾಲೀಕನಾಗಿ, ನನಗೆ ಕೆಲವು ಹಕ್ಕುಗಳು ಇವೆ. ಅದು ನಿರಂತರವಾಗಿ ಉಲ್ಲಂಘನೆಯಾದಾಗ, ನಾನೇನು ಮಾಡಲಿ. ನಾನು ಅಸಹಾಯಕ ಅಷ್ಟೇ." ಬಾಲಿವುಡ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

    English summary
    Bollywood Director Suneel Darshan files FIR against Google CEO Sundar Pichai. Copyright infringement FIR and it was filed on 25th January 2022.
    Wednesday, January 26, 2022, 22:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X