ಮೊಟ್ಟೆ..ಬ್ರೆಡ್.. ಒಂದು ಮನೆಯಲ್ಲಿ 09 ಜನ ; ಮುಂಬೈನಲ್ಲಿ ನೋರಾ ಫತೇಹಿ ಅನುಭವಿಸಿದ ನರಕಯಾತನೆ ಹೇಗಿತ್ತು.?

ನಿಜಾ.. ಸೆಲೆಬ್ರಿಟಿ ಗಳ ಬದುಕು ''ಕಲರ್ ಫುಲ್'' ಆಗಿರುತ್ತೆ. ಆದರೆ ನೆನಪಿರಲಿ ಆ ''ಕಲರ್'' ಹಿಂದೆ ಪ್ರತಿಯೊಬ್ಬರ ಬದುಕಿನಲ್ಲಿ ಒಂದಿಲ್ಲೊಂದು ''ಬ್ಲ್ಯಾಕ್ & ವೈಟ್'' ಕಥೆ ಇದ್ದೇ ಇರುತ್ತೆ. ಆ ''ಕಥೆ'' ಹಾಗೂ ''ವ್ಯಥೆ'' ಹೊರ ಬರಲು ಸರಿಯಾದ '''ಸಮಯ'' ಹಾಗೂ ''ಸಂದರ್ಭ'' ಬರಬೇಕಷ್ಟೇ. ''ಕಾಲ ಕೂಡಿ ಬಂದಾಗ'', '''ಕಾಲಗರ್ಭ''ದಲ್ಲಿ ಅಡಗಿರುವ ''ಕರಾಳ ಸತ್ಯ'' ಹೊರ ಬರುತ್ತೆ. ಇದಕ್ಕೆ ಉದಾಹರಣೆ ಅನ್ನುವಂತೆ ''ನೋರಾ ಫತೇಹಿ'' ತಮ್ಮ ಬದುಕಿನ '''ಸತ್ಯಕಥೆ''ಯೊಂದನ್ನ ಈಗ ಹೇಳಿದ್ದಾರೆ.

''ನೋರಾ ಫತೇಹಿ'' .. ಯಾರಿಗೆ ತಾನೇ ಗೊತ್ತ್ ಇಲ್ಲ. ಬಾಲಿವುಡ್ ನ ''ರಾಣಿ ಜೇನು''. ವಯ್ಯಾರದಿಂದ ನೋರಾ ಕುಣಿಯುತ್ತಿದ್ದರೆ, ಅನೇಕರು ಕುಂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಚಡಪಡಿಸುತ್ತಾರೆ. ಇವತ್ತು ನೊರಾ ಹೆಸರಿಗೆ ಒಂದು ''ಬೆಲೆ'' ಇದೆ. ಆದರೆ ನಿಮಗೆ ಗೊತ್ತಾ, ಒಂದು ಕಾಲದಲ್ಲಿ ನೋರಾ ''ನೂರು ರೂಪಾಯಿ''ಗಳಿಗೆ ಒದ್ದಾಡಿದ್ದು ಇದೆ.

Bollywood Diva Noora Fatehi Recalls Her Traumatic Days In Mumbai

ಹೌದು, FYI ಬೆಸಿಕಲಿ.. ನೋರಾ ''ಕೆನಡಾ''ದ ಕನ್ಯೆ. ಭಾರತಕ್ಕೆ ಈ ಹಕ್ಕಿ ''ವಲಸೆ'' ಬಂದಾಗ ಇವರ ಬಳಿ ಇದ್ದಿದ್ದು ಕೇವಲ ''ಐದು ಸಾವಿರ'' ಮಾತ್ರ. ಆ ''ಐದು ಸಾವಿರ' ರೂಪಾಯಿಯಲ್ಲಿ ''ತಿನ್ನುವುದು.. ಉಣ್ಣುವುದು.. ಮಲಗುವುದು'' ಎಲ್ಲಿ ಎಂಬ ಪ್ರಶ್ನೆ ನೊರಾ ಅವರಲ್ಲಿತ್ತು.

ಇನ್ನೂ ''ಬಾಲಿವುಡ್'' ನ ''ಬಾಗಿಲು'' ಯಾವ ಕಡೆ ಇದೆ ಅನ್ನುವುದು ಕೂಡ ಗೊತ್ತಿರದ ದಿನಗಳವು. ಇಂತಹ ದಿನಗಳಲ್ಲಿ ''ನೋರಾ'' ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸಕ್ಕಿದ್ದರು. ''ಕುರಿಮಂದೆ ತುಂಬಿದಂತೆ'' ಆ ಮನೆಯಲ್ಲಿ ''ಒಂಬತ್ತು ಜನ'' ಇದ್ದರು. ಕೇವಲ ಒಂದು ''ಮೊಟ್ಟೆ'' ಹಾಗೂ ''ಬ್ರೆಡ್'' ತಿಂದು ''ಬದುಕಿನ ಬಂಡಿ''ನ್ನ ನೋರಾ ಎಳೆಯುವ ಪ್ರಯತ್ನವನ್ನೂ ಮಾಡಿದರು. ನೋರಾಗೆ ಬದುಕಿನ ''ಸತ್ಯ ದರ್ಶನ''ವಾಗಿದ್ದು ಇಲ್ಲಿಯೇ.

Bollywood Diva Noora Fatehi Recalls Her Traumatic Days In Mumbai

ಅಲ್ಲಿಂದ ''ಹೋರಾಟ''ದ ಹಾದಿಯನ್ನ ಹಿಡಿದ ''ನೋರಾ'' ಇವತ್ತು ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಇನ್ನೂ ''ನೋರಾ''ಫತೇಹಿ ಕೇವಲ ;;ಕುಣಿಯೋಕಷ್ಟೇ ಲಾಯಕ್ಕು'' ಎನ್ನುವ ಮಾತನ್ನ ಮೊನ್ನೆಯಷ್ಟೇ ತೆರೆಗೆ ಬಂದ ''ಮಡ್ಗಾಂವ್ ಎಕ್ಸ್‌ಪ್ರೆಸ್'' ಸುಳ್ಳಾಗಿಸಿದೆ.

''ಕುನಾಲ್ ಖೇಮು'' ನಿರ್ದೇಶನದ ಈ ಚೊಚ್ಚಲ ಚಿತ್ರದಲ್ಲಿ ನೋರಾ ತಮ್ಮ ಅಭಿನಯದಿಂದ ಎಲ್ಲರನ್ನ ಬೆಕ್ಕಸ ಬೆರಗಾಗಿಸಿದ್ದಾರೆ. ಈ ಮೂಲಕ ನನಗೆ'' ಕುಣಿಯೋದು ಗೊತ್ತು.. ಪಾತ್ರಕ್ಕೆ ಜೀವ ತುಂಬುವುದು ಗೊತ್ತು'' ಅನ್ನುವುದನ್ನ ಸಾಬೀತು ಮಾಡಿದ್ದಾರೆ ನೋರಾ. ಆದರೂ .. ಈ ''ಬಣ್ಣದ ಲೋಕ' ಹೇಗಿದೆ ಅಂದರೆ ನೋರಾ ಅವರ ಈ ''ಸಾಧನೆ'' ಮೇಲೆ ಕೆಲವರಿಗೆ ''ಡೌಟು''.

ಅಂದ್ಹಾಗೇ ಮಡ್ಗಾಂವ್ ಎಕ್ಸ್‌ಪ್ರೆಸ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ನೊರಾ, ಇದೇ ಖುಷಿಯಲ್ಲಿ ತಾವು ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದ್ದಾರೆ. ತಮ್ಮ ಬದುಕಿನ ಒಂದು ಕರಾಳ ಪುಟವನ್ನ ತೆರೆದಿಟ್ಟಿದ್ದಾರೆ. ಸದ್ಯಕ್ಕೆ ನೊರಾ ಹಂಚಿಕೊಂಡ ಬದುಕಿನ ಕಥೆ, ಬಾಲಿವುಡ್ ನಲ್ಲಿ ಚರ್ಚೆಗೀಡಾಗುತ್ತಿದೆ. ನೊರಾ ಫತೇಹಿ ಬಗ್ಗೆ ಅಭಿಮಾನದ ಮಾತು ಕೇಳಿ ಬರುತ್ತಿವೆ.

More from Filmibeat

English summary
Beautiful Bollywood Actress Noora Fatehi, Who Is Best Known For Her Dance Recalls Her Traumatic Days In Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X