For Quick Alerts
  ALLOW NOTIFICATIONS  
  For Daily Alerts

  ಹೆಣ್ಣಿನ ವೇಷ ಧರಿಸಿರುವ ಈ ಖ್ಯಾತ ನಟ ಯಾರು ಗೊತ್ತಾ?

  |

  ಹುಡುಗಿ ವೇಷ ಧರಿಸಿ ತೆರೆ ಮೇಲೆ ಮಿಂಚಿರುವ ಸಾಕಷ್ಟು ಕಲಾವಿದರು ಇದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶರಣ್, ರವಿಶಂಕರ್, ರಂಗಾಯಣ ರಘು ಸೇರಿದಂತೆ ಅನೇಕ ನಟರು ಸಿನಿಮಾಗಾಗಿ ಹೆಣ್ಣಿನ ವೇಷ ಧರಿಸಿ ತೆರೆಮೇಲೆ ಮಿಂಚಿದ್ದಾರೆ. ಸದ್ಯ ಮತ್ತೋರ್ವ ಸ್ಟಾರ್ ನಟ ಹುಡುಗಿಯ ವೇಷ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಈ ಫೋಟೋ ನೋಡಿದರೆ ಯಾವ ನಟ ಎಂದು ಕಂಡುಹಿಡಿಯಲು ಸಾಧ್ಯವೆ ಇಲ್ಲ. ಖ್ಯಾತ ನಟ ಹೊಸ ಲುಕ್ ನಲ್ಲಿ ಸಂಪೂರ್ಣವಾಗಿ ಬದಲಾಗಿದ್ದಾರೆ. ಥೇಟ್ ಹುಡುಗಿಯ ಹಾಗೆ ಕಾಣುತ್ತಿದ್ದಾರೆ. ಅಂದ್ಹಾಗೆ ಈ ಫೋಟೋ ಬಾಲಿವುಡ್ ನ ಬಹುನಿರೀಕ್ಷೆಯ 'ಲುಡೋ' ಸಿನಿಮಾದ ಫಸ್ಟ್ ಲುಕ್. ಈ ನಟ ಮತ್ಯಾರು ಅಲ್ಲ ಬಾಲಿವುಡ್ ನ ಖ್ಯಾತ ನಟ ರಾಜ್ ಕುಮಾರ್ ರಾವ್.

  ತನಗಿಂತ 12 ವರ್ಷ ಕಿರಿಯ ಪ್ರಿಯಕರನ ಜೊತೆ ಮಲೈಕಾ ಹೊಸ ವರ್ಷ ಸಂಭ್ರಮ.!ತನಗಿಂತ 12 ವರ್ಷ ಕಿರಿಯ ಪ್ರಿಯಕರನ ಜೊತೆ ಮಲೈಕಾ ಹೊಸ ವರ್ಷ ಸಂಭ್ರಮ.!

  ಹಸಿರು ಬಣ್ಣದ ಲೆಹಂಗ ಧರಿಸಿ, ಉದ್ದ ಕೂದಲಿನ ವಿಗ್ ಹಾಕಿ. ತುಟಿಗೆ ಲಿಪ್ ಸ್ಟಿಕ್, ಬೈತಲೆ ಬಟ್ಟು, ನೆಕ್ ಲೆಸ್ ಹಾಕಿ ಥೇಟ್ ಹುಡುಗಿ ಹಾಗೆ ಕಾಣುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಚಿತ್ರದ ಮೊದಲ ಲುಕ್ ಹಂಚಿಕೊಂಡಿರುವ, ರಾಜ್ ಕುಮಾರ್ ರಾವ್ ನೋಡಿ ಅಭಿಮಾನಿಗಳು ಒಮ್ಮೆ ಅಚ್ಚರಿ ಪಟ್ಟಿದ್ದಾರೆ.

  ಅಂದ್ಹಾಗೆ ಲುಡೋ ಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೆ ಇದೆ. ಅಭಿಷೇಕ್ ಬಚ್ಚನ್, ಫಾತೀಮಾ ಸನಾ, ಆದಿತ್ಯ ರಾವ್ ಕಪೂರ್ ಸೇರಿದಂತ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಲುಡೋ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

  English summary
  Bollywood famous actor Rajkumar Rao new look Photo viral. This is first look of Ludo movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X