twitter
    For Quick Alerts
    ALLOW NOTIFICATIONS  
    For Daily Alerts

    ಐಪಿಸಿ ಸೆಕ್ಷನ್ 377 ರದ್ದು, ಸುಪ್ರೀಂ ತೀರ್ಪಿಗೆ ಬಾಲಿವುಡ್ ನಲ್ಲಿ ಸಂಭ್ರಮ!

    By ಜೇಮ್ಸ್ ಮಾರ್ಟಿನ್
    |

    ಭಾರತೀಯ ದಂಡ ಸಂಹಿತೆ(ಐಪಿಸಿ)ಸೆಕ್ಷನ್ 377 ರದ್ದುಗೊಂಡಿದೆ. ಲೆಸ್ಬಿಯನ್ಸ್, ಗೇಗಳು ತೃತೀಯಲಿಂಗಿಗಳ ಸೆಕ್ಸ್ ಕುರಿತಾದ ಗೊಂದಲವನ್ನು ಸುಪ್ರೀಂಕೋರ್ಟ್ ಬಗೆಹರಿಸಿದೆ.

    ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಐದು ಜಡ್ಜ್ ಗಳ ನ್ಯಾಯಪೀಠ ನೀಡಿರುವ ತೀರ್ಪನ್ನು ಹಿಂದಿ ಚಿತ್ರರಂಗ ಸ್ವಾಗತಿಸಿದೆ.

    ನ್ಯಾ. ದೀಪಕ್ ಮಿಶ್ರಾ, ಜಸ್ಟೀಸ್ ಫಾಲಿ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರಾ ಅವರು ನೀಡಿರುವ ಆದೇಶವನ್ನು 'ಐತಿಹಾಸಿಕ ತೀರ್ಪ'ಎಂದು ಬಾಲಿವುಡ್ ನ ಜನಪ್ರಿಯ ನಟ, ನಿರ್ದೇಶಕ ಕರಣ್ ಜೋಹರ್ ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ.

    ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

    ಐಪಿಸಿಯ ಸೆಕ್ಷನ್ 377ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಲ್‌ಜಿಬಿಟಿ ಸಂಘವು (ಸಲಿಂಗಿಗಳ ಸಂಘಟನೆ) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಅಂತಿಮ ತೀರ್ಪು ನೀಡಿದೆ.

    2013ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಸೆಕ್ಷನ್ 377ರ ಅನ್ವಯ,ಒಂದೇ ಲಿಂಗದ ವ್ಯಕ್ತಿಗಳ ನಡುವೆ ಒಪ್ಪಿತ ಲೈಂಗಿಕ ಸಂಬಂಧವನ್ನು ಅಸ್ವಾಭಾವಿಕ ಅಪರಾಧವಲ್ಲ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಾಲಿವುಡ್ ಗಣ್ಯಾತಿಗಣ್ಯರು ಈ ತೀರ್ಪಿನ ಬಗ್ಗೆ ಮಾಡಿರುವ ಟ್ವೀಟ್ ಪ್ರತಿಕ್ರಿಯೆಗಳು ಇಲ್ಲಿವೆ...

    ಸುಪ್ರೀಂ ತೀರ್ಪಿನ ಬಗ್ಗೆ ಕರಣ್ ಜೋಹರ್ ಟ್ವೀಟ್

    ಸುಪ್ರೀಂಕೋರ್ಟಿನ ತೀರ್ಪಿನ ಬಗ್ಗೆ ಕರಣ್ ಜೋಹರ್ ಟ್ವೀಟ್ ಮಾಡಿ, ಐತಿಹಾಸಿಕ ತೀರ್ಪು ಸೆಕ್ಷನ್ 377ರದ್ದಾಗಿದ್ದು, ಸಲಿಂಗಕಾಮ ಅಪರಾಧವಲ್ಲ, ಮಾನವತಾವಾದ, ಸಮಾನ ಹಕ್ಕು ಎಲ್ಲರಿಗೂ ಸಿಗಲಿದೆ, ದೇಶಕ್ಕೆ ಆಮ್ಲಜನಕ ಮತ್ತೆ ಸಿಕ್ಕಿದೆ ಎಂದಿದ್ದಾರೆ.

    ನಟ ಆಯುಷ್ಮಾನ್ ಖುರಾನಾ ಟ್ವೀಟ್

    ನಟ ಆಯುಷ್ಮಾನ್ ಖುರಾನಾ ಟ್ವೀಟ್ ಮಾಡಿ, ಪ್ರಗತಿಪರ ಭಾರತಕ್ಕೆ ಹೊಸ ಸೂರ್ಯೋದಯ ಎಂದಿದ್ದಾರೆ.

    ನಟಿ ಸ್ವರ ಭಾಸ್ಕರ್

    ನಟಿ ಸ್ವರ ಭಾಸ್ಕರ್ ಟ್ವೀಟ್ ಮಾಡಿ ಕಾರ್ಯಕರ್ತರಿಗೆ, ಅರ್ಜಿದಾರರಿಗೆ ಹೋರಾಟಗಾರರಿಗೆ ಸಂದ ಜಯ ಎಂದಿದ್ದಾರೆ.

    ನಟಿ ಕೊಂಕನಾ ಸೇನ್ ಶರ್ಮ

    ನಟಿ ಕೊಂಕನಾ ಸೇನ್ ಶರ್ಮ ಟ್ವೀಟ್ ಮಾಡಿ, ನಮಗೆ ಗೆಲುವು, ಸುಪ್ರೀಂಕೋರ್ಟಿಗೆ ಧನ್ಯವಾದ ಎಂದಿದ್ದಾರೆ.

    ನಟ ಕಾರ್ತಿಕ್ ಆರ್ಯನ್

    ಯುವ ನಟ ಕಾರ್ತಿಕ್ ಆರ್ಯನ್ ಟ್ವೀಟ್ ಮಾಡಿ, ಪ್ರೀತಿಗೆ ಜಯ, ಇದು ಐತಿಹಾಸಿಕ ನಿರ್ಣಯ, ಸುಪ್ರೀಂಕೋರ್ಟ್ ಬಗ್ಗೆ ಹೆಮ್ಮೆ ಎಂದಿದ್ದಾರೆ.

    ನಟ ಜಾನ್ ಅಬ್ರಹಾಂ

    ನಟ ಜಾನ್ ಅಬ್ರಹಾಂ ಟ್ವೀಟ್ ಮಾಡಿ, ಹೆಮ್ಮೆಯಿಂದ ಇಂದು ಸಂಚರಿಸಿ, ನ್ಯಾಯ ಸಿಕ್ಕಿದೆ ಎಂದು ಎಲ್ ಜಿಬಿಟಿಗಳಿಗೆ ಹೇಳಿದ್ದಾರೆ.

    ನಟಿ ಅಮೃತ ಖಾನ್ವಿಲ್ಕರ್

    ನಟಿ, ಕಾರ್ಯಕರ್ತೆ ಅಮೃತ ಖಾನ್ವಿಲ್ಕರ್ ಅವರು ಟ್ವೀಟ್ ಮಾಡಿ ಲವ್ ಇಸ್ ಲವ್ ಎಂದಿದ್ದಾರೆ.

    English summary
    The Supreme Court (SC) will pronounce its verdict on pleas challenging the validity of section 377 of the Indian Penal Code (IPC) on Thursday(September 05).
    Thursday, September 6, 2018, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X