»   » ಒಂದೇ ಒಂದು ರಾತ್ರಿಗೆ ಕೋಟಿ ಎಣಿಸುವ ನಟಿಯರು

ಒಂದೇ ಒಂದು ರಾತ್ರಿಗೆ ಕೋಟಿ ಎಣಿಸುವ ನಟಿಯರು

By: ಉದಯರವಿ
Subscribe to Filmibeat Kannada

ಕೆಲವರೇನೋ ಪ್ರಳಯ ಗ್ಯಾರಂಟಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಪ್ರಳಯವೂ ಇಲ್ಲ ಪ್ರಣಯವೂ ಇಲ್ಲ ಎಂಬಂತಿದ್ದಾರೆ. ಈ ಎರಡೂ ಕ್ಯಾಟಗರಿಗೆ ಸೇರದವರ ಪಾಡಂತೂ ಅಯೋಮಯವಾಗಿದೆ. ಇನ್ನೂ ಕೆಲವರಂತೂ 2013ರ ಹೊಸವರ್ಷವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಹೊಸ ವರ್ಷದ ಸಂಭ್ರಮ ಅಷ್ಟಿಷ್ಟಲ್ಲ ಬಿಡಿ. ಸ್ಟಾರ್ ಹೋಟೆಲುಗಳು, ಕ್ಲಬ್ಬುಗಳು ತಮ್ಮ ಗ್ರಾಹಕರಿಗೆ ಭರ್ಜರಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಾಟು ಮಾಡುತ್ತಿವೆ. ಈ ವರ್ಣರಂಜಿತ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ರಸಿಕರು ಮುಗಿಬೀಳುತ್ತಿದ್ದಾರೆ.

ಕೇವಲ 30 ನಿಮಿಷಕ್ಕೆ ಕತ್ರಿನಾ ರೇಟು ಅಬ್ಬಬ್ಬಾ

ಕೇವಲ ಅರ್ಧ ಗಂಟೆ ತಮ್ಮ ಸೊಂಟವನ್ನು ಕುಣಿಸಲು ಬಾಲಿವುಡ್ ತಾರೆ ಕತ್ರಿನಾ ಕೈಫ್ ಎಷ್ಟು ಚಾರ್ಜ್ ಮಾಡುತ್ತಾರೆ ಗೊತ್ತೇ? ಕೇವಲ ರು.3 ಕೋಟಿ ಅಷ್ಟೇ. ಹಾಗೆ ಬಂದು ಹೀಗೆ ತಮ್ಮ ವೈಯಾರ ತೋರಿ ಮೂರು ಕೋಟಿ ಎಣಿಸಿಕೊಂಡು ಹೋಗುತ್ತಾರೆ.

ಪ್ರಿಯಾಂಕಾ ಚೋಪ್ರಾ ರೇಟು ಒಸಿ ಜಾಸ್ತಿನೇ

ಸದ್ಯಕ್ಕೆ ಟಾಪ್ 5 ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಕುಣಿಯಲು ರು.2 ಕೋಟಿ ಡಿಮ್ಯಾಂಡ್ ಮಾಡುತ್ತಾರೆ ಅಷ್ಟೇ. ಪ್ರಿಯಾಂಕಾಗೆ ಏನು ಅಷ್ಟಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಬರದಿದ್ದರೂ ಮಾಜಿ ಭುವನ ಸುಂದರಿ ಎಂಬ ಕಾರಣಕ್ಕೆ ಸ್ವಲ್ಪ ಕ್ರೇಜ್ ಇದೆ.

ಬಿಪಾಶಾ ಬಸು ಕೂಡ ಏನು ಕಮ್ಮಿ ಇಲ್ಲ

ಅಬ್ಬಬ್ಬಾ ಬಿಪಾಶಾ ಬಸು ಸಿಕ್ಕಾಪಟ್ಟೆ ಫಾಸ್ಟ್. ಈಗಾಗಲೆ ಅವರು ಪಂಚತಾರಾ ಹೋಟೆಲ್ ಒಂದಕ್ಕೆ ಕಮಿಟ್ ಆಗಿದ್ದಾರೆ. ಕೇವಲ ಅರ್ಧ ಗಂಟೆ ಕುಣಿಯಲು ರು.1 ಕೋಟಿ ತೆಗೆದುಕೊಂಡಿದ್ದಾರೆ. ಕೇವಲ ಒಂದೇ ಹೋಟೆಲ್ ನಲ್ಲಿ ಕುಣಿಯುತ್ತಾರೋ ಇನ್ನೂ ನಾಲ್ಕೈದು ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ.

ಕಂಗನಾ ರನೌತ್ ಗೂ ಒಂದು ಕೋಟಿ

ತಾನು ಸಹ ಬಿಪಾಶಾ ಬಸುಗಿಂತ ಏನೇನು ಕಮ್ಮಿ ಇಲ್ಲ ಎನ್ನುತ್ತಿದ್ದಾರೆ ಬಾಲಿವುಡ್ ತಾರೆ ಕಂಗನಾ ರನೌತ್. ಆಕೆಯೂ ಅಷ್ಟೇ ರು.1 ಕೋಟಿ ತೆಗೆದುಕೊಳ್ಳುತ್ತಾರೆ. ಐಟಂ ಡಾನ್ಸ್ ಗೆ ಹೆಜ್ಜೆ ಹಾಕುತ್ತಾ, ತಮ್ಮ ಮೈ ಬಳುಕಿಸುತ್ತಾ ಮೊದಲೇ ಗುಂಡಿನ ಮತ್ತಿನಲ್ಲಿರುವವರಿಗೆ ಇನ್ನೊಂದಿಷ್ಟು ಕಿಕ್ ಕೊಡುತ್ತಾರೆ.

ಲಾಸ್ಟ್ ಬಟ್ ನಾಟ್ ಲೀಸ್ಟ್ ಸನ್ನಿ ಲಿಯೋನ್

ಈ ವರ್ಷ ಬಾಲಿವುಡ್ ಗೆ ಅಡಿಯಿಟ್ಟ ನೀಲಿ ತಾರೆ ಸನ್ನಿ ಲಿಯೋನ್ ಡಿಸೆಂಬರ್ 31ರ ರಾತ್ರಿಗೆ ಈಗಾಗಲೆ ಸಿದ್ಧವಾಗಿದ್ದಾರೆ. ಅರ್ಧಗಂಟೆ ಕುಣಿಯಲು ಸನ್ನಿ ಲಿಯೋನ್ ಗೆ ಕೇವಲ ರು.26 ಲಕ್ಷ ಕೊಟ್ಟರಾಯ್ತು. ಇವರಿಷ್ಟೇ ಅಲ್ಲದೆ ಇನ್ನೂ ಕೆಲವು ತಾರೆಗಳು ರು.10 ರಿಂದ 20 ಲಕ್ಷಗಳ ನಡುವೆ ವ್ಯವಹಾರ ಕುದುರಿಸಿಕೊಳ್ಳುತ್ತಾರೆ.


ಹತ್ತು ವರ್ಷಗಳ ಹಿಂದೆ ನ್ಯೂ ಇಯರ್ ಕ್ರೇಜ್ ಅಷ್ಟಾಗಿ ಇರಲಿಲ್ಲ. ಈಗ ನ್ಯೂ ಇಯರ್ ಪಾರ್ಟಿ ಇಲ್ಲದೆ ನಡೆಯಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬರಿಗಿಂತಲೂ ಒಬ್ಬರು ಸ್ಪರ್ಧೆಗೆ ಬಿದ್ದಂತೆ ಪಂಚತಾರಾ ಹೋಟೆಲ್ ಗಳು ಜೀರೋ ಡೇ ಸಂಭ್ರಮಕ್ಕೆ ಮುಂದಾಗಿವೆ.

ಸ್ಟಾರ್ ನಟಿಯರನ್ನು ಕರೆತಂದು ತಮ್ಮ ಹೋಟೆಲ್ ಗಳಲ್ಲಿ ಕುಣಿಸುವುದು ಸರ್ವೇ ಸಾಮಾನ್ಯವಾಗಿದೆ. ವರ್ಷ ಪೂರ್ತಿ ಚಿತ್ರೀಕರಣದಲ್ಲಿ ಕಳೆಯುವ ಈ ನಟಿಯರೂ ವರ್ಷಾಂತ್ಯಕ್ಕೆ ಪಂಚತಾರಾ ಹೋಟೆಲ್ ಗಳಲ್ಲಿ ಕುಣಿದು ಎರಡು ಮೂರು ತಿಂಗಳಲ್ಲಿ ಸಂಪಾದಿಸುವಷ್ಟು ಹಣವನ್ನು ಒಂದೇ ರಾತ್ರಿ ಸಂಪಾದಿಸುತ್ತಿದ್ದಾರೆ.

ಆ ನಟ್ಟಿರುಳಿನಲ್ಲಿ ಒಂದೇ ಒಂದು ಗಂಟೆ ಕಾಲ ಕುಣಿದರೆ ಸಾಕು. ಅವರವರ ಸಾಮರ್ಥ್ಯಕ್ಕೆ, ಅಂದಚೆಂದ, ವೈಯಾರಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ಹೋಟೆಲ್ ಗ್ರಾಹಕರಿಗೂ ಕಾಸಿಗೆ ತಕ್ಕ ಕಜ್ಜಾಯ. ಒಟ್ಟಿನಲ್ಲಿ ಜನಮರುಳೋ ಜಾತ್ರ ಮರುಳೋ.

ಕೆಲವು ತಾರೆಗಳಂತೂ ಇಂತಿಷ್ಟು ಕೊಟ್ಟರೆ ಮಾತ್ರ ಕುಣಿಯುವುದಾಗಿ ಡಿಮ್ಯಾಂಡ್ ಮಾಡುತ್ತಾರೆ. ಕೆಲವು ತಾರೆಗಳ ಆ ರಾತ್ರಿ ರೇಟ್ ಹೇಗಿದೆ ಎಂದು ಒಮ್ಮೆ ನೋಡೋಣ ಬನ್ನಿ.

English summary
Event organizers are chasing Bollywood stars- especially the heroines- for New Year's Eve performances. Katrina Kaif has been the top draw for stage shows and this New Year's Eve is no different. Trade insiders reveal that hottie Kat is being offered a cool Rs.3 crore package for a half-hour performance.
Please Wait while comments are loading...