ಹೇಮಾ ಮಾಲಿನಿ-ಧರ್ಮೇಂದ್ರ ವಿವಾದಾತ್ಮಕ ಮದುವೆ; ಮತಾಂತರದ ರಹಸ್ಯ!
ಬಾಲಿವುಡ್‌ನಲ್ಲಿ ಸ್ವರ್ಣ ಯುಗದಲ್ಲಿ ಮಿಂಚಿದ ಜೋಡಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ. ಇವರಿಬ್ಬರ ಪ್ರೇಮ ಕಥೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಸದಾ ಚರ್ಚೆಯಾಗುವ ವಿಷಯ. ತೆರೆಯ ಮೇಲೆ ಇವರ ಕೆಮಿಸ್ಟ್ರಿ ಎಷ್ಟು ಅದ್ಭುತವಾಗಿತ್ತೋ, ನಿಜ ಜೀವನದ ಪ್ರೀತಿಯ ಕಥೆಯೂ ಅಷ್ಟೇ ರೋಚಕ. 1980ರಲ್ಲಿ ವಿವಾಹವಾದ ಈ ಜೋಡಿ, ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ದೃಷ್ಟಿಸಿತ್ತು.
ಧರ್ಮೇಂದ್ರ ಹಾಗೂ ಹೇಮಾ ಮಾಲಿನಿಯ ಮದುವೆಯ ಹಿಂದೆ ಒಂದು ದೊಡ್ಡ ಕೌಟುಂಬಿಕ ಸತ್ಯ ಅಡಗಿತ್ತು. ಇದು ಇಂದಿಗೂ ಹಲವರಿಗೆ ಆಶ್ಚರ್ಯ ಮೂಡಿಸುತ್ತದೆ. ಹೇಮಾ ಮಾಲಿನಿ 'ಡ್ರೀಮ್ ಗರ್ಲ್'. ಧರ್ಮೇಂದ್ರ ಅಂದಿನ ಮಾಸ್ ಹೀರೋ. ಇವರಿಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. 'ಶೋಲೆ', 'ಸೀತಾ ಔರ್ ಗೀತಾ', 'ಜಗ್ಗು' ಮುಂತಾದ ಸಿನಿಮಾಗಳಲ್ಲಿ ಇವರ ಜೋಡಿ ಹಿಟ್ ಆಗಿತ್ತು. ಈ ಸಿನಿಮಾಗಳ ಶೂಟಿಂಗ್ ವೇಳೆ ಧರ್ಮೇಂದ್ರ ಅವರ ಸ್ವಭಾವ, ಮ್ಯಾನರಿಸಂ ಹೇಮಾ ಮಾಲಿನಿಯವರನ್ನು ಆಕರ್ಷಿಸಿತು. ಇನ್ನೊಂದು ಕಡೆ ಹೇಮಾ ಮಾಲಿನಿಯ ಸೌಂದರ್ಯಕ್ಕೆ ಧರ್ಮೇಂದ್ರ ಕೂಡ ಮನಸೋತರು. ಹಾಗಂತ ಹೇಮಾ ಮಾಲಿನಿ ಹಿಂದೆ ಬಿದ್ದಿದ್ದವರು ಧರ್ಮೇಂದ್ರ ಒಬ್ಬರೇ ಆಗಿರಲಿಲ್ಲ.

ಸಂಜೀವ್ ಕುಮಾರ್- ಜಿತೇಂದ್ರ ಪ್ರೇಮ ನಿರಾಕರಣೆ
ಡ್ರೀಮ್ ಗರ್ಲ್ ಹೇಮಾ ಮಾಲಿನಿ ಹಿಂದೆ ಬಿದ್ದವರಲ್ಲಿ ಧರ್ಮೇಂದ್ರ ಒಬ್ಬರೇ ಅಲ್ಲ ಬಾಲಿವುಡ್‌ನ ಮತ್ತಿಬ್ಬರು ಸ್ಟಾರ್ ನಟರಾದ ಸಂಜೀವ್ ಕುಮಾರ್ ಮತ್ತು ಜಿತೇಂದ್ರ ಕೂಡ ಇದ್ದರು. ಹೇಮಾ ಮಾಲಿನಿಯ ಮೇಲೆ ಇವರು ಪ್ರಾಣವನ್ನೇ ಇಟ್ಟುಕೊಂಡಿದ್ದರು. ಇಬ್ಬರೂ ಹೇಮಾ ಮಾಲಿನಿಗೆ ಮುಂದೆ ಮದುವೆಯ ಪ್ರಸ್ತಾಪ ಮಾಡಿದ್ದರು. ಆದರೆ ಹೇಮಾ ಮಾಲಿನಿ ಅದಾಗಲೇ ಧರ್ಮೇಂದ್ರಗೆ ಮನಸ್ಸು ಕೊಟ್ಟಾಗಿತ್ತು. ಹೀಗಾಗಿ, ಇವರಿಬ್ಬರ ಪ್ರೀತಿಯನ್ನು ನಿರಾಕರಿಸಿದರು.
ಜಿತೇಂದ್ರರ ಜೊತೆ ಮದುವೆ ನಿಶ್ಚಿತಾರ್ಥದ ರಹಸ್ಯ
ಧರ್ಮೇಂದ್ರಗೆ ಚಿತ್ರರಂಗಕ್ಕೆ ಬರುವ ಮೊದಲೇ ಮದುವೆಯಾಗಿತ್ತು. ಮೊದಲ ಪತ್ನಿ ಪ್ರಕಾಶ್ ಕೌರ್ ಜೊತೆ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಈ ಜೋಡಿಗೆ ನಾಲ್ಕು ಮಕ್ಕಳಿದ್ದರು. ಈ ಕಾರಣಕ್ಕೆ ಹೇಮಾ ಮಾಲಿನಿಯ ಅಮ್ಮನಿಗೆ ಧರ್ಮೇಂದ್ರ ಜೊತೆ ಮಗಳ ಮದುವೆ ಮಾಡುವುದು ಇಷ್ಟವಿರಲಿಲ್ಲ. ಹೇಮಾ ಮಾಲಿನಿ ತಾಯಿ ಜಯಾ ಚಕ್ರವರ್ತಿಗೆ ಮಗಳನ್ನು ಜಿತೇಂದ್ರ ಜೊತೆ ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದರು. ಮದ್ರಾಸಿನಲ್ಲಿ ಗುಟ್ಟಾಗಿ ನಿಶ್ಚಿತಾರ್ಥದ ಏರ್ಪಾಡು ಕೂಡ ಮಾಡಿದ್ದರೆಂದು ಈ ಹಿಂದೆ ವರದಿಯಾಗಿವೆ.

ಕುಡಿದ ಮತ್ತಿನಲ್ಲಿ ಮದ್ರಾಸ್ ಬಂದ ಧರ್ಮೇಂದ್ರ
ಹೇಮಾ ಮಾಲಿನಿ-ಜೀತೇಂದ್ರ ನಿಶ್ಚಿತಾರ್ಥ ವಿಷಯ ತಿಳಿಯುತ್ತಿದ್ದಂತೆ ಧರ್ಮೇಂದ್ರ ಮೂಡ್ ಅಪ್‌ಸೆಡ್ ಆಗಿತ್ತು. ತಕ್ಷಣ ಕುಡಿದ ಮತ್ತಿನಲ್ಲಿ ಮದ್ರಾಸಿಗೆ ಹಾರಿದರು. ಅಲ್ಲಿ ಜಿತೇಂದ್ರ ಮತ್ತು ಹೇಮಾ ಮುಂದೆ, ಫೇಸ್ ಟು ಫೇಸ್ "ನೀನು ಯಾರನ್ನು ಪ್ರೀತಿಸುತ್ತೀಯಾ? ನನ್ನನ್ನೇ, ಅಥವಾ ಬೇರೆಯವರನ್ನೇ?" ಎಂದು ನೇರವಾಗಿ ಕೇಳಿದರು. ಈ ಪ್ರಶ್ನೆ ಹೇಮಾ ಅವರ ಮನಸ್ಸನ್ನು ಬದಲಾಯಿಸಿತು. ತಕ್ಷಣವೇ ನಿಶ್ಚಿತಾರ್ಥವನ್ನು ನಿಲ್ಲಿಸಿದರು. ಧರ್ಮೇಂದ್ರ ಮತ್ತು ಹೇಮಾ ಪ್ರೀತಿಸುತ್ತಿರೋ ವಿಷಯ ಬಹಿರಂಗವಾಯಿತು.
ಮದುವೆಗೆ ಇರುವ ದೊಡ್ಡ ಅಡ್ಡಿ: ಮೊದಲ ಪತ್ನಿ
ಧರ್ಮೇಂದ್ರ ಅವರು ಹೇಮಾ ಮಾಲಿನಿ ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ ಹಿಂದೂ ಸಂಪ್ರದಾಯದ ಪ್ರಕಾರ, ಅವರಿಗೆ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಸಾಧ್ಯವಾಗಲಿಲ್ಲ. ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಗೆ ವಿಚ್ಛೇದನ ನೀಡಲು ಒಪ್ಪಲಿಲ್ಲ. ಈ ಕಾರಣದಿಂದ ಮದುವೆಗೆ ದೊಡ್ಡ ಕಾನೂನು ತೊಡಕು ಎದುರಾಯಿತು. ಧರ್ಮೇಂದ್ರ ಅವರು ಹೇಮಾ ಅವರನ್ನು ಬಿಡಲು ಸಿದ್ಧರಿರಲಿಲ್ಲ. ಇತ್ತ ಪ್ರಕಾಶ್ ಕೌರ್ ಕೂಡ ಪತಿಯನ್ನು ಬಿಡಲು ತಯಾರಿರಲಿಲ್ಲ.
ಧರ್ಮ ಬದಲಾಯಿಸಿದ ಧರ್ಮೇಂದ್ರ
ಕಾನೂನು ಅಡ್ಡಿಗಳನ್ನು ನಿವಾರಿಸಲು ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಒಂದು ದಿಟ್ಟ ನಿರ್ಧಾರ ಬಂದರು. ಹಿಂದೂ ಕಾನೂನಿನಡಿಯಲ್ಲಿ ಎರಡನೇ ಮದುವೆ ಮೊದಲ ಪತ್ನಿಯಿಂದ ವಿಶ್ಛೇದನ ಪಡೆದಿರಬೇಕು. ಅದಾಗದೇ ಇದ್ದಿದ್ದರಿಂದ ಈ ಜೋಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿತ್ತು. ಬಳಿಕ 1980ರಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಮದುವೆಯಾದರು. ಇಸ್ಲಾಂ ಧರ್ಮದ ಪ್ರಕಾರ ನಿಕಾ ಮಾಡಿಕೊಂಡರು ಎನ್ನಲಾಗಿದೆ. ಧರ್ಮ ಬದಲಾಯಿಸಿದ ನಂತರ ಅವರ ಹೆಸರು ಬದಲಾಯಿತು. ಧರ್ಮೇಂದ್ರ ಅವರ ಹೆಸರು ' ದಿಲಾವರ್ ಖಾನ್ ಕೇವಲ್ ಕೃಷ್ಣ' ಹಾಗೂ ಹೇಮಾ ಮಾಲಿನಿ ಅವರ ಹೆಸರು 'ಆಯೇಶಾ ಬೀ ಆರ್ ಚಕ್ರವರ್ತಿ' ಎಂದು ಬದಲಾಯಿತು. ಗುಪ್ತವಾಗಿ ನಿಕಾ ಮಾಡಿದ ನಂತರ, ಅವರು ಹಿಂದೂ ಸಂಪ್ರದಾಯದ ಪ್ರಕಾರ ಮತ್ತೊಮ್ಮೆ ವಿವಾಹವಾದರು. ಈ ಸುದ್ದಿ ಅಂದಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.
ಪ್ರತ್ಯೇಕ ಜೀವನದ ರಹಸ್ಯ
ಮದುವೆಯಾದರೂ, ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸಲಿಲ್ಲ. ಇದು ಇಂದಿಗೂ ಮುಂದುವರೆದಿದೆ. ಧರ್ಮೇಂದ್ರರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಮಕ್ಕಳೊಂದಿಗೆ ವಾಸ ಮಾಡಿದರು. ಹೇಮಾ ಮಾಲಿನಿ ತಮ್ಮ ಎರಡು ಹೆಣ್ಣು ಮಕ್ಕಳಾದ ಈಶಾ ಮತ್ತು ಅಹಾನಾ ಜೊತೆ ಪ್ರತ್ಯೇಕವಾಗಿ ವಾಸ ಮಾಡಿದರು. ಈ ಬಗ್ಗೆ ಹೇಮಾ ಮಾಲಿನಿ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. "ಯಾವುದೇ ಮಹಿಳೆ ತಮ್ಮ ಪತಿಯಿಂದ ದೂರವಿರಲು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳು ನಮ್ಮನ್ನು ಬೇರೆ ಮಾಡಿಸುತ್ತವೆ. ನಾವು ಆ ಸನ್ನಿವೇಶವನ್ನು ಒಪ್ಪಿಕೊಳ್ಳಬೇಕು. ನನಗೆ ಯಾವುದೇ ವಿಷಾದವಿಲ್ಲ. ನನಗೆ ಇಬ್ಬರು ಮಕ್ಕಳಿದ್ದಾರೆ. ಆ ಬಗ್ಗೆ ನನಗೆ ಸಂತೋಷವಿದೆ. ಧರ್ಮೇಂದ್ರ ಯಾವಾಗಲೂ ನನ್ನ ಮತ್ತು ಮಕ್ಕಳ ಜೊತೆ ಇದ್ದಾರೆ" ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವಿವಾಹ ಜೀವನದ ರಹಸ್ಯವನ್ನು ಬಯಲು ಮಾಡಿದ್ದಾರೆ.
ಇಂದಿಗೂ ಗಟ್ಟಿಯಾದ ಬಾಂಧವ್ಯ
ಎರಡೂ ಕುಟುಂಬಗಳು ವಿಭಿನ್ನವಾಗಿ ವಾಸಿಸುತ್ತಿದ್ದರೂ, ಧರ್ಮೇಂದ್ರ ಎರಡೂ ಕುಟುಂಬಗಳಿಗೂ ತಮ್ಮ ಸಮಯ ನೀಡುತ್ತಾರೆ. ಹೇಮಾ ಮಾಲಿನಿ ಮತ್ತು ಧರ್ಮೇಂದ್ರರ ಸಂಬಂಧ ಇಂದಿಗೂ ಗಟ್ಟಿಯಾಗಿದೆ. ಇಬ್ಬರೂ ಪರಸ್ಪರ ಗೌರವದಿಂದ ನೋಡಿಕೊಳ್ಳುತ್ತಾರೆ. ಹೇಮಾ ಮಾಲಿನಿ ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡುವ ಸಂದರ್ಭದಲ್ಲಿ ಧರ್ಮೇಂದ್ರ ತಂದೆಯಾಗಿ ನಿಂತಿದ್ದರು. ಭಾಗವಹಿಸಿದ್ದರು.


Click it and Unblock the Notifications











