ಬಾಲಿವುಡ್ ಅನ್ನು ಮೋಸದ ಲೋಕ ಎಂದ ಸಲ್ಮಾನ್ ಖಾನ್ ಗೆಳತಿ
ಸಲ್ಮಾನ್ ಖಾನ್ ಆಪ್ತ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್ ಅನ್ನು ಸುಂದರವಾದ ಮೋಸ ಎಂದು ಕರೆದಿದ್ದಾರೆ.
Recommended Video
ಜಾಕ್ವೆಲಿನ್ ಫರ್ನಾಂಡಿಸ್ ಈ ವರೆಗೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. 11 ವರ್ಷದಿಂದ ಬಾಲಿವುಡ್‌ನಲ್ಲಿರುವ ಜಾಕ್ವೆಲಿನ್ ಬಾಲಿವುಡ್ ಅನ್ನು ಮೋಸದ ಲೋಕ ಎಂದು ಕರೆದಿರುವುದು ಕುತೂಹಲ ಕೆರಳಿಸಿದೆ.
ಬಾಲಿವುಡ್ ಎಂಬುದು 'ಸುಂದರವಾದ ಮೋಸ' ಎಂದು ಕರೆದಿರುವ ಜಾಕ್ವೆಲಿನ್, ಇಲ್ಲಿನ ನಟ-ನಟಿಯರು ಪ್ರತಿದಿನ ನಟಿಸುತ್ತಿದ್ದಾರೆ. ನಟ-ನಟಿಯರು ಮಾಡುತ್ತಿರುವುದೆಲ್ಲಾ ಪ್ರದರ್ಶನ ಅಷ್ಟೆ, ಅದೆಲ್ಲವೂ ನಿಜವಲ್ಲ ಎಂದು ಬಾಲಿವುಡ್ ಮೇಲೆ, ಬಾಲಿವುಡ್ ಮಂದಿಯ ಮೇಲೆ ಉರಿನಾಲಗೆ ಹರಿಸಿದ್ದಾರೆ.

ಸ್ವಜನಪಕ್ಷಪಾತದ ಬಗ್ಗೆ ಜಾಕ್ವೆಲಿನ್ ಮಾತು
ನೆಪೊಟಿಸಮ್ ಬಗ್ಗೆ ತುಸು ಮೃದುವಾಗಿ ಮಾತನಾಡಿರುವ ಈ ಸಲ್ಮಾನ್ ಆಪ್ತೆ, 'ಸ್ವಜನಪಕ್ಷಪಾತದಿಂದ ನನಗೆ ಹೆಚ್ಚಿನ ಸಮಸ್ಯೆಯೇನೂ ಆಗಿಲ್ಲ. ಏಕೆಂದರೆ ನನಗೆ ಸಿನಿಮಾಗಳು ಸಿಗುತ್ತಲೇ ಇವೆ. ನಾನಂದುಕೊಂಡಂತಹಾ ಸಿನಿಮಾಗಳು ಸಿಗದೇ ಇದ್ದರೂ ಸಹ ಒಟ್ಟಿನಲ್ಲಿ ಸಿನಿಮಾಗಳು ಸಿಗುವುದು ನಿಂತಿಲ್ಲ' ಎಂದಿದ್ದಾರೆ ಜಾಕ್ವೆಲಿನ್.

ಎಲ್ಲರೂ ಇಲ್ಲಿ ಸುಳ್ಳೆ, ಎಲ್ಲರದ್ದೂ ನಾಟಕ: ಜಾಕ್ವೆಲಿನ್
'ಬಾಲಿವುಡ್‌ನಲ್ಲಿ ನಟ-ನಟಿಯರು ಮಾಡುತ್ತಿರುವದೆಲ್ಲಾ ನಿಜವಲ್ಲ, ಎಲ್ಲರೂ ಇಲ್ಲಿ ಸುಳ್ಳೆ. ನಾನು ತಿಳಿದುಕೊಂಡಿರುವುದೇನೆಂದರೆ ಇಲ್ಲಿಗೆ ಬರುವಾಗ ನಿಜವಾದ ಪ್ರತಿಭೆ ಇಟ್ಟುಕೊಂಡು ಬನ್ನಿ. ಅವಕಾಶ ಸಿಕ್ಕ ಬಳಿಕೆ ಬಹಳ ಕಷ್ಟಪಟ್ಟು ಕೆಲಸ ಮಾಡಿ' ಎಂದು ಹೇಳಿದ್ದಾರೆ ಶ್ರೀಲಂಕಾದಿಂದ ಬಂದು ಬಾಲಿವುಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಜಾಕ್ವೆಲಿನ್.

ಪಾರದರ್ಶಕವಾದ ಕಾಸ್ಟಿಂಗ್ ವ್ಯವಸ್ಥೆ ಇಲ್ಲ: ಜಾಕ್ವೆಲಿನ್
ಕಾಸ್ಟಿಂಗ್ ಬಗ್ಗೆಯೂ ಮಾತನಾಡಿರುವ ಜಾಕ್ವೆಲಿನ್, ಬೇರೆ ವಿದೇಶಿ ಸಿನಿಮಾ ಉದ್ಯಮಗಳಲ್ಲಿ ಇರುವಂತೆ ಕಠಿಣವಾದ ಕಾಸ್ಟಿಂಗ್ ಅಥವಾ ನಟ-ನಟಿಯರ ಆಯ್ಕೆ ಪ್ರಕ್ರಿಯೆ ಕಠಿಣವಾಗಿ ಹಾಗೂ ಪಾರದರ್ಶಕವಾಗಿಲ್ಲ. ವಿದೇಶಗಳಲ್ಲಿ ಬಹಳ ಕಠಿಣವಾದ ಹಾಗೂ ಪಾರದರ್ಶಕ ವ್ಯವಸ್ಥೆ ಇದೆ ಎಂದಿದ್ದಾರೆ.

ಡ್ರೈವ್ ಸಿನಿಮಾದಲ್ಲಿ ಸುಶಾಂತ್ ಜೊತೆ ನಟನೆ
ಡ್ರೈವ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ಜೊತೆಗೆ ನಟಿಸಿರುವ ಜಾಕ್ವೆಲಿನ್, 'ಸುಶಾಂತ್ ಜೊತೆಗೆ ಹಲವಾರು ನೆನಪುಗಳಿವೆ. ಒಟ್ಟಿಗೆ ನಟಿಸಿದ್ದೇವೆ, ಒಟ್ಟಿಗೆ ಸ್ಟೇಜ್ ಶೋ ನೀಡಿದ್ದೇವೆ, ಒಟ್ಟಿಗೆ ಪ್ರವಾಸ ಮಾಡಿದ್ದೇವೆ, ಮೊಬೈಲ್ ಕೈಗೆತ್ತಿಕೊಂಡರೆ ನಬ್ಬಿರದ್ದು ಹಲವಾರು ಚಿತ್ರಗಳು, ವಿಡಿಯೋಗಳು ಇವೆ' ಎಂದಿದ್ದಾರೆ ಅವರು.


Click it and Unblock the Notifications











