ಯಾರಿಗೂ ಹೇಳ್ಬೇಡಿ ; ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ ಎಂದ ಪ್ರೀತಿ ಜಿಂಟಾ..!

ಹೆಣ್ಣ್ ಮಕ್ಕಳ‌ ಪಾಲಿಗೆ ಸಿನಿಮಾ ಅಂದರೆ ಕೇವಲ ಥಳುಕು ಬಳುಕಷ್ಟೇ ಅಲ್ಲ, ಅದು ಕೊಳಕು ಮತ್ತು ಹುಳುಕಿನ ಪ್ರಪಂಚವೂ ಹೌದು. ಇದಕ್ಕೆ ಸಾಕ್ಷಿ ಅನ್ನುವಂತೆ ಅದೆಷ್ಟೋ ನಾಯಕಿಯರು ಇಲ್ಲಿಯವರೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‌ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಮಾಡಲಾದ ಒತ್ತಾಯ ಮತ್ತು ಒತ್ತಡದ ಕಥೆಯನ್ನು ಹೇಳಿದ್ದಾರೆ.ಇದೀಗ ಈ ಸಾಲಿಗೆ ಬಾಲಿವುಡ್ ನ Pretty ನಟಿ ಪ್ರೀತಿ ಜಿಂಟಾ ಕೂಡ ಸೇರಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದಕ್ಕೋಗಿ ಬಾಲಿವುಡ್ ಯಾರೆಂದರೆ ಯಾರಿಗೂ ಸುರಕ್ಷಿತ ವಾದ ಸ್ಥಳ ಅಲ್ಲ ಅಂದಿದ್ದಾರೆ

ಹೌದು. ಐಪಿಎಲ್ ನೆಪದಲ್ಲಿ, ಸದ್ಯಕ್ಕೆ ಭಾರತದ ಪ್ರದಕ್ಷಿಣೆ ಹಾಕ್ತಿರುವ ಪ್ರೀತಿ ಜಿಂಟಾ, ಗತಕಾಲದಲ್ಲಿ ಒಂದು ಸಂದರ್ಶನ ನೀಡಿದ್ದರು. ಬದುಕಿನ ಕಥೆ-ವ್ಯಥೆ- ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಮತ್ತೊಂದು ಮುಖ ಕಳಚಿಡುವ ಪ್ರಯತ್ನ ಮಾಡಿದ್ದರು

bollywood-is-not-safe-for-any-one-says-preity-zinta

''ಪ್ರೀತಿ'' ಮಾಡಿದ್ದ ಈ ''ಪ್ರಯತ್ನ''ಕ್ಕೆ.. ಆ ಕಾಲಕ್ಕೆ ಸಿಕ್ಕ ''ಬೆಂಬಲ ಬೆಲೆ'' ಗೊತ್ತಿಲ್ಲವಾದರೂ, ಸದ್ಯಕ್ಕೆ ಯಾವತ್ತೋ ಪ್ರೀತಿ ಜಿಂಟಾ ಮಾತನಾಡಿದ ‌ಮಾತು ಈಗ ವೈರಲ್ ಆಗಿದೆ. ''ಸಭ್ಯತೆ-ಅಸಭ್ಯತೆ''.. ''ಪ್ರೀತಿ-ಮೋಸ''..''ನಂಬಿಕೆ-ಅಪನಂಬಿಕೆ'' ಸುತ್ತ ಮುತ್ತ ''ಪ್ರೀತಿ ಜಿಂಟಾ'' ಮಾತನಾಡಿದ ಮಾತು ಚರ್ಚೆಯನ್ನ ಹುಟ್ಟು ಹಾಕಿದೆ.

ಯಾಕೆಂದರೆ ಬಾಲಿವುಡ್‌ ಬಗ್ಗೆ, ಬಗೆ ಬಗೆಯ ಜನರ ಅಭಿರುಚಿಯ ಬಗ್ಗೆ ಮಾತನಾಡಿರುವ ಪ್ರೀತಿ ಜಿಂಟಾ, Love Relation ಬಗ್ಗೆ ಅವತ್ತು ಮಾತನಾಡಿದ್ದರು. ಬಾಲಿವುಡ್‌ನಲ್ಲಿ ನೆಲೆಯೂರಬೇಕು ಅಂದರೆ, ಭದ್ರ ಬುನಾದಿ ಬೇಕು ಅಂದಿದ್ದರು. ಸಿನಿಮಾದ ಹಿನ್ನೆಲೆ ಇಲ್ಲದ ಹುಡುಗ ಅಥವಾ ಹುಡುಗಿ ಯಾರಿಗೂ ಕೂಡ ಈ ಬಣ್ಣದ ಪ್ರಪಂಚ ಸುರಕ್ಷಿತ ಅಲ್ಲ ಎಂದು ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು

ಚಿತ್ರರಂಗದಲ್ಲಿ ಬೆಳೆಯಬೇಕು ಎಂದರೆ ಸಂಪರ್ಕ.. ಪರಿಚಯ..ಸ್ನೇಹ..ನಂಬಿಕೆ ಮತ್ತು ನಂಬಿಕೆ ದ್ರೋಹ.. ಹೀಗೆ ನಾನಾ ತರಹದ ಮುಖವಾಡ ಹಾಕಿಕೊಂಡು ಬದುಕು ಮುನ್ನಡೆಸುವ ಅನೇಕ ಜನ ಇಲ್ಲಿ ಇದ್ದಾರೆ ಎಂದಿದ್ದ ಪ್ರೀತಿ ಜಿಂಟಾ, ಪ್ರತಿಭೆ ನಮ್ಮಲ್ಲಿ ಇದ್ದರೆ ಪ್ರಭಾವಕ್ಕೆ ನಾವು ಮಣಿಯಬಾರದು ಎಂದು ಕೂಡ ಹೇಳಿದ್ದರು. ಎಲ್ಲ ತರಹದ ಪಾತ್ರ ಮಾಡಲು ಬಹುತೇಕರು ಸಿದ್ಧರಿರುತ್ತಾರೆ, ಆದರೆ.. ಈ ಅಡೆ ತಡೆ ದಾಟಿ, ನಮ್ಮ ಅಸ್ತಿತ್ವ ಕಂಡುಕೊಳ್ಳುವುದೇ ನಿಜವಾದ ಸವಾಲು ಎಂದಿದ್ದರು ಪ್ರೀತಿ ಜಿಂಟಾ.

ಇಷ್ಟೇ ಅಲ್ಲ ನಮ್ಮ ಗಮನ ನಮ್ಮ ಗಮ್ಯದ ಕಡೆ ಇದ್ದಾಗ ಮಾತ್ರ ಗೆಲುವು ಸಾಧ್ಯ ಎಂದು ಕೂಡ ಪ್ರೀತಿ ಜಿಂಟಾ ಹೇಳಿದ್ದರು. ಪ್ರೀತಿ ಮಾತನಾಡಿರುವ ಈ ಮಾತುಗಳು ಈಗ ಹೊಸದೊಂದು ಚರ್ಚೆಯನ್ನ ಬಾಲಿವುಡ್‌ನಲ್ಲಿ ಹುಟ್ಟು ಹಾಕಿದೆ. ಸರಿ-ತಪ್ಪು ಕುರಿತು ಇನ್ನೊಮ್ಮೆ ಚರ್ಚೆ ಆರಂಭವಾಗಿದೆ. ಕೆಲವರಿಗೆ ಪ್ರೀತಿ ಜಿಂಟಾ ಮಾತು ಸರಿ ಅನಿಸಿದರೆ, ಇನ್ನೂ ಕೆಲವರಿಗೆ ಪ್ರೀತಿ ಮಾತು ಸೆಲೆಬ್ರೀಟಿಗಳ ಕೃತಕ ಬುದ್ದಿಮತ್ತೆಯಂತೆ ಕಾಣ್ತಿದೆ.

ಒಟ್ನಲ್ಲಿ ಸದ್ಯಕ್ಕೆ ಪುರಾತನ ಕಾಲವೊಂದರಲ್ಲಿ ಮಾತನಾಡಿದ ಮಾತು, ಈಗ ಪ್ರೀತಿ ಜಿಂಟಾ ಅವರನ್ನೇ ಆವರಿಸಿಕೊಂಡಿದೆ. ಐಪಿಎಲ್ ನಡುವೆ ಪ್ರೀತಿ ಜಿಂಟಾ ಅವರ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗ್ತಿದೆ. ಪ್ರೀತಿ-ಪ್ರೇಮ-ಪ್ರಣಯದ ನಡುವೆ ಸ್ವಜನಪಕ್ಷಪಾತದ ಚರ್ಚೆಗೂ ಇದೇ ವಿಡಿಯೋ ಮತ್ತೊಮ್ಮೆ ನಾಂದಿಯನ್ನ ಹಾಡಿದೆ.

More from Filmibeat

English summary
During An Interview Preity Zinta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X