ಮೈದಾನದಲ್ಲಿ ಶಾರುಖ್ ಖಾನ್ ಧಮ್ ಮಾರೋ ಧಮ್ ; ಇದೇನಾ ಸಭ್ಯತೆ..ಇದೇನಾ ಸಂಸ್ಕ್ರತಿ..?
ಏನೇ ಕಿಂಗ್ ಖಾನ್ ಆದ್ರೂ ಅದು ಬಾಲಿವುಡ್ ಗೆ ಮಾತ್ರ. ಸೌತ್ ಇಂಡಿಯಾಗೆ ಯಾವ ಕಿಂಗೂ ಇಲ್ಲ ಅನ್ನುವ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆ. ಈ ಮಾತು ನಿಜಾನಾ, ಸುಳ್ಳಾ ಗೊತ್ತಿಲ್ಲ. ಆದರೆ ಶಾರುಖ್ ಖಾನ್ ಮಾತ್ರ ಅವತ್ತು ಚಾಲ್ತಿಯಲ್ಲಿದ್ದರು. ಇವತ್ತು ಚಾಲ್ತಿಯಲ್ಲಿದ್ದಾರೆ. ಇಂಥ ಶಾರುಖ್ ಖಾನ್ ಅವರನ್ನ ಆಗಾಗ ವಿವಾದಗಳು ಸುತ್ತಿಕೊಳ್ಳುತ್ತವೆ. ಇದಕ್ಕೆ ಉದಾಹರಣೆ ನಿನ್ನೆ ನಡೆದ ರಣ ರೋಚಕ ಮ್ಯಾಚ್.
ಹೌದು, ನಿನ್ನೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ರೋಚಕ ಪಂದ್ಯಕ್ಷೆ ಸಾಕ್ಷಿಯಾಯಿತು. ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ನ ಸೋಲಿಸುವ ಮೂಲಕ ಗೆಲುವಿನ ಶುಭಾರಂಭವನ್ನೂ ಮಾಡಿತು.

ಇನ್ನೂ ಸಹಜವಾಗಿ ಮೈದಾನದಲ್ಲಿ ಶಾರುಖ್ ಖಾನ್ ಕೂಡ ಇದ್ದರು. ತಂಡದ ಏಳು ಬೀಳನ್ನ ಗಮನಿಸುತ್ತಾ ಹುರಿದುಂಬಿಸುವ ಕೆಲಸವನ್ನೂ ಮಾಡ್ತಿದ್ದರು. ಆದರೆ ಇದೇ ಸಮಯದಲ್ಲಿ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದ ಶಾರುಖ್ ಖಾನ್ ಅವರನ್ನ ಕ್ಯಾಮರಾದ ಕಣ್ಣು ಸೆರೆ ಹಿಡಿದಿದೆ.
ಹೀಗೆ ಸೆರೆಯಾದ ವಿಡಿಯೋವನ್ನ ನೋಡಿದರೆ ಶಾರುಖ್ ಖಾನ್ ಸಿಗರೇಟ್ ಸೇದುತ್ತಿದ್ದಾರೆ ಎಂಬ ಭಾವನೆ ಮೂಡುತ್ತೆ. ಈ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಅನೇಕರು ಶಾರುಖ್ ಖಾನ್ ಮೇಲೆ ಮುಗಿ ಬಿದ್ದಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲು ಇಂಥಹವರು ಸಾಕು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ.

ನಿಜಕ್ಕೂ ಶಾರುಖ್ ಖಾನ್ ಸಿಗರೇಟ್ ಸೇದಿದ್ದಾರಾ ಗೊತ್ತಿಲ್ಲ. ಆದರೆ ಕೆಲವರು ಈ ವಾದವನ್ನ ಅಲ್ಲಗಳೆಯುತ್ತಿದ್ದಾರೆ. ಶಾರುಖ್ ನಿಟ್ಟುಸಿರು ಬಿಟ್ಟಿದ್ದಷ್ಟೇ ಸಿಗರೇಟ್ ಸೇದಿಲ್ಲ ಎಂದು ಪ್ರತಿವಾದವನ್ನ ಮಂಡಿಸುತ್ತಿದ್ದಾರೆ. ಸಿಗರೇಟ್ ಸೇದಿದ್ದೇ ಆದಲ್ಲಿ, ಹೊಗೆ ಎಲ್ಲಿ ಬಂದಿದೆ ಎನ್ನುವುದನ್ನ ಸಾಕ್ಷಿ ಸಮೇತ ತೋರಿಸಿ ಎಂದು ಸವಾಲನ್ನೂ ಹಾಕುತ್ತಿದ್ದಾರೆ'
ಅಂದ್ಹಾಗೇ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ 2012ರ ಸೀಸನ್‌ನಲ್ಲಿಯೂ ಅವರು ಸ್ಟೇಡಿಯಂನಲ್ಲಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಕಂಡು ಬಂದಿತ್ತು. ಆಗ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶಾರುಖ್ ಸಿಗರೇಟ್ ಸೇದಿದ್ದರು. ಈ ಸಂಬಂಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಇನ್ನೂ 2011ರಲ್ಲಿ ತಾನು ಸಿಗರೇಟ್ ಸೇದುವ ವಿಚಾರವನ್ನ ಶಾರುಖ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು ಕೂಡ. ಅವತ್ತು ಅಂದರೆ 2011 ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್ ಖಾನ್, ಸಿಗರೇಟ್ ಸೇದದೆ ಇದ್ರೆ ನನಗೆ ನಿದ್ದೆ ಬರುವುದಿಲ್ಲ ಎಂದಿದ್ದರು. ನಾನು ದಿನಕ್ಕೆ ಸುಮಾರು 100 ಸಿಗರೇಟ್ ಸೇದುತ್ತೇನೆ.
ಎಷ್ಟೋ ಬಾರಿ ನಾನು ಊಟ ಮಾಡೋದನ್ನು ಹಾಗೂ ನೀರು ಕುಡಿಯುವುದನ್ನು ಕೂಡ ಮರೆತುಬಿಡುತ್ತೇನೆ. ನಾನು ದಿನಕ್ಕೆ 30 ಕಪ್ ಬ್ಲ್ಯಾಕ್ ಕಾಫಿ ಕುಡಿಯುತ್ತೇನೆ. ಸಿಕ್ಸ್ ಪ್ಯಾಕ್ಸ್ಗಳನ್ನು ಹೊಂದಿರುವ ನಾನು, ನನ್ನ ಬಗ್ಗೆಯೇ ಕಡಿಮೆ ಕಾಳಜಿ ವಹಿಸುತ್ತೇನೆ ಎಂದು ಶಾರುಖ್ ಹೇಳಿದ್ದರು.
ಒಟ್ಟಿನಲ್ಲಿ ಸದ್ಯಕ್ಕೆ ಶಾರುಖ್ ಖಾನ್ ಸುತ್ತ ಮುತ್ತ ಸಿಗರೇಟ್ ಮೂಲಕ ಇನ್ನೊಮ್ಮೆ ವಿವಾದದ ಹೊಗೆಯಾಡುತ್ತಿದೆ. ಪರ ವಿರೋಧದ ಚರ್ಚೆ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ಶಾರುಖ್ ಖಾನ್ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಗಳಿಗೆ ಉತ್ತರವನ್ನೂ ಕೊಟ್ಟಿಲ್ಲ. ಬದಲಿಗೆ ತಮ್ಮ ಪಾಡಿಗೆ ತಾವು ಐಪಿಎಲ್ ನ ಎಂಜಾಯ್ ಮಾಡ್ತಿದ್ದಾರೆ ಕಿಂಗ್ ಖಾನ್.


Click it and Unblock the Notifications











