ಸುಶಾಂತ್ ಸಿಂಗ್ ಹುಟ್ಟುಹಬ್ಬ; ನಟನನ್ನು ನೆನೆದು ಭಾವುಕರಾದ ಆಪ್ತರು
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ 7 ತಿಂಗಳಾಗಿದೆ. ಇಂದಿಗೂ ಸುಶಾಂತ್ ಸಾವಿನ ಹಿಂದಿನ ಕಾರಣವೇನು ಎನ್ನುವುದು ಬಯಲಾಗಿಲ್ಲ. ಸುಶಾಂತ್ ಸಿಂಗ್ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.
ಇಂದು (ಜನವರಿ 21) ಸುಶಾಂತ್ ಸಿಂಗ್ ಹುಟ್ಟಿದ ದಿನ. 35ನೇ ವರ್ಷದ ಜನ್ಮದಿನದ ಸವಿ ನೆನಪಿನ ದಿನ ಅಭಿಮಾನಿಗಳು ಮತ್ತು ಆಪ್ತರು ಸುಶಾಂತ್ ನೆನೆದು ಭಾವುಕ ಸಂದೇಶ ರವಾನಿಸುತ್ತಿದ್ದಾರೆ. ಪ್ರತಿವರ್ಷ ಸ್ನೇಹಿತರ ಜೊತೆ, ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸುಶಾಂತ್ ಇನ್ಮುಂದೆ ನೆನಪು ಮಾತ್ರ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸುಶಾಂತ್ ಹುಟ್ಟುಹಬ್ಬದ ಸವಿನೆನಪಿನ ದಿನವನ್ನು 'ಸುಶಾಂತ್ ಸಿಂಗ್ ದಿನ', 'ಎಸ್ ಎಸ್ ಆರ್' ದಿನ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಮುಂದೆ ಓದಿ..

ಮಾಜಿ ಪ್ರೇಯಸಿ ಅಂಕಿತಾ ಭಾವುಕ ಸಂದೇಶ
ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಸುಶಾಂತ್ ಸಿಂಗ್ ಹಾಡಿಗೆ ಹೆಜ್ಜೆ ಹಾಕಿ ಭಾವುಕರಾಗಿದ್ದಾರೆ. 'ಇದು ತುಂಬಾ ಕಷ್ಟದ ಸಮಯ. ತುಂಬಾ ನೋವಾಗುತ್ತೆ' ಎಂದು ಡ್ಯಾನ್ಸ್ ವಿಡಿಯೋ ಶೇರ್ ಮಾಡಿ ಮಾಜಿ ಪ್ರಿಯತಮನನ್ನು ನೆನಪಿಸಿಕೊಂಡಿದ್ದಾರೆ.

ಸುಶಾಂತ್ ನೆನೆದ ಸಹೋದರಿ ಶ್ವೇತಾ ಸಿಂಗ್
ಇನ್ನು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್, ಸಹೋದರನ ಜೊತೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲವ್ ಯೂ ಸಹೋದರ. ನೀನು ಯಾವಾಗಲು ನಮ್ಮ ಜೊತೆ ಇರುತ್ತೀಯ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಟ್ವೀಟ್
ಇನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿ, 'ಆತ್ಮೀಯ ಸುಶಾಂತ್, ಮೂವಿ ಮಾಫಿಯಾ ನಿಮ್ಮನ್ನು ಬ್ಯಾನ್ ಮಾಡಿತ್ತು ಮತ್ತು ತುಂಬಾ ಕಿರುಕುಳ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ನೀವು ಅನೇಕ ಬಾರಿ ಸಹಾಯ ಕೇಳಿದ್ದೀರಿ. ನಿಮಗಾಗಿ ಇಲ್ಲದಿರುವುದಕ್ಕೆ ವಿಷಾದಿಸುತ್ತೇನೆ. ಮಾಫಿಯಾ ನೀಡಿದ ಹಿಂಸೆಯನ್ನು ನಿಭಾಯಿಸಲು ನೀವು ಸಾಕಷ್ಟು ಕಷ್ಟಪಟ್ಟಿದ್ದೀರಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ.
Recommended Video

ಜೂನ್ 14ರಂದು ನಿಧನಹೊಂದಿದ ನಟ
ನಟ ಸುಶಾಂತ್ ಸಿಂಗ್ 2020 ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವು ಇಡೀ ಬಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿದೆ. ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ಹಸ್ತಾಂತರಿಸಿದ ಬಳಿಕ ವಿವಿಧ ಆಂಗಲ್ ಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಡ್ರಗ್ಸ್ ಜಾಲದ ನಂಟಿನ ಸಂಬಂಧ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಎನ್ ಸಿ ಬಿ ಬಂಧಿಸಿ ವಿಚಾರಣೆ ನಡೆಸಿದೆ. ರಿಯಾ ಜೊತೆಗೆ ಸಾಕಷ್ಟು ಮಂದಿ ಜೈಲು ಪಾಲಾಗಿದ್ದರು. ಸುಶಾಂತ್ ಸಾವಿನ ಪ್ರಕರಣದ ಅಂತಿಮ ವರದಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











