ಹಿಂದಿ ಚಲನಚಿತ್ರ ಸಾಹಿತಿ ಅನ್ವರ್ ಸಾಗರ್ ನಿಧನ
ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಅನ್ವರ್ ಸಾಗರ್ ಬುಧವಾರದಂದು ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
80-90 ರ ದಶಕದಲ್ಲಿ ಅನ್ವರ್ ಸಾಗರ್ ಅವರು ಹಲವು ನೆನಪುಳಿಯುವ ಹಾಡುಗಳನ್ನು ಬರೆದಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಖಿಲಾಡಿ ಸಿನಿಮಾದ 'ವಾದಾ ರಹಾ ಸನಮ್' ಅವರು ರಚಿಸಿದ ಹಿಟ್ ಗೀತೆಗಳಲ್ಲಿ ಒಂದು.
ಯಾರಾನಾ, ಸಲಾಮಿ, ಆ ಗಲೆ ಲಗಜಾ, ವಿಜಯಪಥ ಇನ್ನೂ ಹಲವು ಸಿನಿಮಾಗಳಿಗೆ ಅನ್ವರ್ ಸಾಗರ್ ಅವರು ಹಾಡುಗಳನ್ನು ಬರೆದಿದ್ದರು. ಅನ್ವರ್ ಸಾಗರ್ ಅವರು ಅನು ಮಲಿಕ್, ರಾಜೇಶ್ ರೋಶನ್, ನದೀಮ್ ಶ್ರವಣ್, ರಾಜೇಶ್ ರೋಶನ್ ಅಂಥಹಾ ಹಲವು ಸಂಗೀತ ನಿರ್ದೇಶಕರುಗಳೊಂದಿಗೆ ಕೆಲಸ ಮಾಡಿದ್ದರು.

ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅನ್ವರ್ ಸಾಗರ್ ಅವರನ್ನು ಮುಂಬೈನ ಕೋಕಿಲಾಬೇನ್ ಧಿರೂಬಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
English summary
Bollywood well known lyricist Anwar Sagar passed away today in Mumbai's Kokilaben hospital. He was aged 70.


Click it and Unblock the Notifications