For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ

  |

  ಸಿನಿ ಜಗತ್ತಿನಲ್ಲಿ ಬಯೋಪಿಕ್ ಚಿತ್ರಗಳ ಆಕರ್ಷಣೆ ಹೆಚ್ಚುತ್ತಿದೆ. ಅದರಲ್ಲೂ ರಾಜಕಾರಣಿಗಳ ಜೀವನವನ್ನ ತೆರೆಮೇಲೆ ತರುವ ಆಸಕ್ತಿ ಇಂಡಸ್ಟ್ರಿಯಲ್ಲಿ ಹೆಚ್ಚಾಗುತ್ತಿದೆ. ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ಆರ್ ಕುರಿತು ಸಿನಿಮಾಗಳು ಬಂದಿವೆ.

  ಈಗ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕುರಿತು ಮೂರ್ನಾಲ್ಕು ಬಯೋಪಿಕ್ ಸಿದ್ಧವಾಗುತ್ತಿದೆ. ಇದೀಗ, ಮತ್ತೊಬ್ಬ ಮುಖ್ಯಮಂತ್ರಿಯ ಜೀವನ ಕಥೆ ತೆರೆಗೆ ತರಲು ಬಾಲಿವುಡ್ ಮಂದಿ ಆಸಕ್ತಿ ತೋರುತ್ತಿದ್ದಾರೆ.

  ಹೌದು, ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಕುರಿತು ಸಿನಿಮಾ ಮಾಡಲು ಗೋ ಗೋವಾ ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಜಯಲಲಿತಾ ಕುರಿತಾದ 'ತಲೈವಿ' ಚಿತ್ರದ 'ವಿವಾದಾತ್ಮಕ' ಪಾತ್ರದಲ್ಲಿ ವಿಜಯ್ ದೇವರಕೊಂಡ.!ಜಯಲಲಿತಾ ಕುರಿತಾದ 'ತಲೈವಿ' ಚಿತ್ರದ 'ವಿವಾದಾತ್ಮಕ' ಪಾತ್ರದಲ್ಲಿ ವಿಜಯ್ ದೇವರಕೊಂಡ.!

  ಈ ಕುರಿತು ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ ಪರಿಕ್ಕರ್ ಜೊತೆ ಈಗಾಗಲೇ ಮಾತುಕತೆ ಮಾಡಿದ್ದಾರಂತೆ. ಕುಟುಂಬದ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

  ಹಿಂದಿ ಮತ್ತು ಕೊಂಕಣಿಯಲ್ಲಿ ಈ ಸಿನಿಮಾ ತಯಾರಿಸಲು ಚಿಂತನೆ ನಡೆಸಲಾಗಿದ್ದು, ಮುಂದಿನ ವರ್ಷದ ಡಿಸೆಂಬರ್ 13, 2020 ರಂದು ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆಯಂತೆ.

  ಕಂಗನಾ, ನಿತ್ಯಾ ಮೆನನ್ ಆಯ್ತು....ಈಗ ಮೂರನೇ ಜಯಲಲಿತಾ ಎಂಟ್ರಿಕಂಗನಾ, ನಿತ್ಯಾ ಮೆನನ್ ಆಯ್ತು....ಈಗ ಮೂರನೇ ಜಯಲಲಿತಾ ಎಂಟ್ರಿ

  ಈ ಬಗ್ಗೆ ನಿರ್ಮಾಪಕ ಸ್ವಪ್ನಿಲ್ ಶೆಟ್ಕರ್ ಮಾತನಾಡಿದ್ದು, ''ಮನೋಹರ್ ಪರಿಕ್ಕರ್ ಅವರು ಜೀವನದಲ್ಲಿ ಎದುರಿಸಿದ ಎಲ್ಲ ಸವಾಲು, ವಿವಾದ, ಮೆಚ್ಚುಗೆ ಎಲ್ಲವೂ ಈ ಸಿನಿಮಾದಲ್ಲಿರಲಿದೆ. ಅವರು ಸಿಎಂ ಆಗುವುದಕ್ಕೆ ಮುಂಚೆ ಹಾಗೂ ಆದ್ಮೇಲೆ ನಡೆದ ಘಟನೆಗಳು ಇಲ್ಲಿ ತರಲಾಗುತ್ತೆ'' ಎಂದಿದ್ದಾರೆ.

  ಮನೋಹರ್ ಪರಿಕ್ಕರ್ ಅವರು ಗೋವಾದ ಮಾಜಿಮುಖ್ಯಮಂತ್ರಿ ಆಗಿದ್ದರು. ಕೇಂದ್ರ ರಕ್ಷಣಾ ಸಚಿವರಾಗಿದ್ದರು. ಇವರು ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ ಉರಿ ಅಟ್ಯಾಕ್ ಆಗಿತ್ತು, ಮತ್ತು ಅದರ ವಿರುದ್ಧ ಭಾರತೀಯ ಸೈನ್ಯ ಪ್ರತೀಕಾರ ಕೂಡ ತೋರಿಸಿಕೊಂಡಿತ್ತು.

  English summary
  Bollywood Film makers planning to do Goa Ex Chief Minister Manohar Parrikar biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X