Brahmastra Movie: 5 ವರ್ಷದ ನಂತರ ಶೂಟಿಂಗ್ ಮುಗಿಸಿದ 'ಬ್ರಹ್ಮಾಸ್ತ್ರ'!
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮೊದಲ ಕಾಂಬಿನೇಷನ್ ಚಿತ್ರ 'ಬ್ರಹ್ಮಾಸ್ತ್ರ'. ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಬಾಲಿವುಡ್‌ನ ನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡ ಒಂದು. ಆದರೆ ಈ ಚಿತ್ರ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಹಾಗಾಗಿ ಕನ್ನಡದಲ್ಲೂ ಕೂಡ ಚಿತ್ರ ರಿಲೀಸ್ ಆಗುತ್ತಿದೆ.
'ಬ್ರಹ್ಮಾಸ್ತ್ರ' ಚಿತ್ರದ ಬಗ್ಗೆ ಹಲವು ದಿನಗಳಿಂದ ಸುದ್ದಿ ಇದೆ. ಅದಾಗಲೇ ಚಿತ್ರತಂಡ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ. ಆದರೆ ಚಿತ್ರದ ಶೂಟಿಂಗ್ ಮಾತ್ರ ಇನ್ನು ಬಾಕಿ ಇದೆಯಲ್ಲಾ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗಬಹುದು ಎನ್ನಲಾಗಿತ್ತು. ಆದರೆ ಈಗ ಚಿತ್ರದ ಶೂಟಿಂಗ್ ಮುಗಿದೆ. ಬರೊಬ್ಬರಿ 5 ವರ್ಷದ ಬಳಿಕ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. 5 ವರ್ಷದ ಹಿಂದೆ ಈ ಚಿತ್ರದ ಮೊದಲ ಶಾರ್ಟ್ ತೆಗೆದಿದ್ದರಂತೆ ನಿರ್ದೇಶಕ ಅಯಾನ್ ಮುಖರ್ಜಿ.
ಚಿತ್ರದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಸದ್ಯ ಟೀಸರ್ ಮೂಲಕ ಶೂಟಿಂಗ್ ಮುಕ್ತಾಯ ಆಗಿರುವ ಬಗ್ಗೆ ಹೇಳಿಕೊಂಡಿದೆ. ವಾರಣಾಸಿಯಲ್ಲಿ ಕೊನೆಯದಾಗಿ ಚಿತ್ರೀರಣ ಮಾಡಲಾಗಿದೆ. ಅಲ್ಲಿನ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು ನಟಿ ಆಲಿಯಾ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಚಿತ್ರೀಕರಣ ಮುಗಿಸಿದ ವಿಚಾರ ಹಂಚಿಕೊಂಡಿದ್ದಾರೆ.

ಅಯಾನ್ ಮುಖರ್ಜಿ, ನಟ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಚಿತ್ರತಂಡ ವಿಶೇಷವಾದ ಪೂಜೆ ಮಾಡಿದೆ. ಪೂಜೆ ಮಾಡಿದ ಫೋಟೊಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಇನ್ನು ಪ್ರೇಮಿಗಳಾದ ಆಲಿಯಾ ಮತ್ತು ರಣಬೀರ್ ದೋಣಿಯಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ನಾಗಾರ್ಜುನ್ ಮತ್ತು ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಬಿಡುಗಡೆಯನ್ನು ಇದೇ ವರ್ಷ ಸೆಪ್ಟೆಂಬರ್ 9ಕ್ಕೆ ನಿಗದಿ ಮಾಡಿಕೊಂಡಿದೆ. ಈ ಚಿತ್ರವನ್ನು ಬಿಟ್ಟರೆ ನಟ ರಣ್ಬೀರ್ ಕಪೂರ್ 'ಅನಿಮಲ್' ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಆಲಿಯಾ ಭಟ್ ಅಭಿನಯದ 'RRR' ಮತ್ತು 'ಗಂಗೂಬಾಯಿ' ಚಿತ್ರಗಳು ರಿಲೀಸ್ ಆಗಿದ್ದು, ಆಲಿಯಾ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲು ತಯಾರಿ ನಡೆಸಿದ್ದಾರೆ.


Click it and Unblock the Notifications