For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಸಲ್ಮಾನ್ ಖಾನ್ ಸಂತಾಪ

  |

  ಹಿಂದಿ ಚಿತ್ರರಂಗದ ಹಿರಿಯ ಸಿನಿಮಾ ನಿರ್ದೇಶಕ ಸಾವನ್ ಕುಮಾರ್ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

  ಮುಂಬೈನಲ್ಲಿ ವಾಸವಾಗಿದ್ದ ಅವರು ತಮ್ಮ ನಿವಾಸದಲ್ಲಿ ಇಂದು ಸಂಜೆ 4 ಗಂಟೆ ವೇಳೆಗೆ ನಿಧನ ಹೊಂದಿದ್ದಾರೆ. ಕೆಲ ತಿಂಗಳಿನಿಂದಲೂ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಮುಂಬೈನ ಕೋಕಿಲಾಬೆನ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

  ಒಂದು ಕಾಲದ ಸೂಪರ್ ಹಿಟ್ ನಿರ್ದೇಶಕ, ಚಿತ್ರಕತೆ ಬರಹಗಾರ, ಹಾಡು ಬರಹಗಾರ ಹಾಗೂ ನಿರ್ಮಾಪಕರಾಗಿ ಜನಪ್ರಿಯರಾಗಿದ್ದರು ಸಾವನ್ ಕುಮಾರ್. 1972 ರಲ್ಲಿ 'ಗೋಮ್ತಿ ಕೆ ಕಿನಾರೆ' ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದರು ಸಾವನ್ ಕುಮಾರ್. ಇದು ಖ್ಯಾತ ನಟಿ ಮೀನಾ ಕುಮಾರಿಯ ಕೊನೆಯ ಸಿನಿಮಾ ಆಗಿತ್ತು.

  ಆ ಬಳಿಕ ಹಲವು ಬಾಲಿವುಡ್‌ನ ಸೂಪರ್ ಸ್ಟಾರ್‌ಗಳೊಟ್ಟಿಗೆ ಕೆಲಸ ಮಾಡಿದ ಸಾವನ್ ಕುಮಾರ್, ಸಂಜೀವ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರನ್ನು ಸಿನಿಮಾಕ್ಕೆ ಪರಿಚಯಿಸಿದರು. ಜೊತೆಗೆ ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ಕಪೂರ್‌ ದಿಗ್ಗಜರು ಹಾಗೂ ಸಲ್ಮಾನ್ ಖಾನ್ ಅವರಿಗೂ ಸಿನಿಮಾ ನಿರ್ದೇಶಿಸಿದ್ದಾರೆ ಸಾವನ್ ಕುಮಾರ್.

  ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ 'ಸನಮ್ ಬೇವಫಾ' ಸಿನಿಮಾ ನಿರ್ದೇಶನ ಮಾಡಿರುವ ಸಾವನ್ ಬಗ್ಗೆ ಸಲ್ಮಾನ್ ಖಾನ್‌ಗೆ ವಿಶೇಷ ಗೌರವ ಇತ್ತು. ಇದೀಗ ಸಾವನ್ ಕುಮಾರ್ ನಿಧನವಾದ ಸುದ್ದಿ ಕೇಳಿ ಟ್ವೀಟ್ ಮಾಡಿರುವ ''ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನನ್ನ ಪ್ರೀತಿಯ ಸಾವನ್ ಅವರೇ, ನಿಮ್ಮನ್ನು ಸದಾ ಪ್ರೀತಿಸಿದ್ದೆ ಮತ್ತು ಗೌರವಿಸಿದ್ದೆ'' ಎಂದಿದ್ದಾರೆ.

  ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಾವನ್ ಕುಮಾರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

  English summary
  Hindi movie industry senior director Saawan Kumar passed away. Salman Khan and many other pay respect through social media.
  Friday, August 26, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X