ಫೇಸ್ ಬುಕ್ ಲೈವ್ ಮೂಲಕ 'ಪದ್ಮಾವತ್' ಪುಕ್ಕಟೆ ಪ್ರಸಾರ.!
Recommended Video

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಯಾರು ಮಾಡಿರುವ ಸಿನಿಮಾ 'ಪದ್ಮಾವತ್'. ಹಾಕಿರುವ ಬಂಡವಾಳ ವಾಪಸ್ ಬರಬೇಕು ಅಂದ್ರೆ, 'ಪದ್ಮಾವತ್' ಸಿನಿಮಾ ಥಿಯೇಟರ್ ಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬೇಕು. ಆದ್ರೆ, 'ಪದ್ಮಾವತ್' ಚಿತ್ರ ಬಿಡುಗಡೆಗೆ ಹಲವೆಡೆ ಕಂಟಕ ಎದುರಾಗಿದೆ.
ವ್ಯಾಪಕ ವಿರೋಧ ಹಾಗೂ ಪ್ರತಿಭಟನೆಗಳ ನಡುವೆ 'ಪದ್ಮಾವತ್' ಸಿನಿಮಾ ತೆರೆಗೆ ಬಂದಿದೆ. ಈ ನಡುವೆ ಕಿಡಿಗೇಡಿಯೊಬ್ಬ ಫೇಸ್ ಬುಕ್ ಲೈವ್ ಮಾಡುವ ಮೂಲಕ 'ಪದ್ಮಾವತ್' ಚಿತ್ರವನ್ನ ಪುಕ್ಕಟೆಯಾಗಿ ಪ್ರಸಾರ ಮಾಡಿದ್ದಾನೆ.
ಒಂದೋ ಎರಡೋ ದೃಶ್ಯ ಮಾತ್ರ ಅಲ್ಲ, ಇಡೀ 'ಪದ್ಮಾವತ್' ಸಿನಿಮಾ ಫೇಸ್ ಬುಕ್ ಲೈವ್ ಮೂಲಕ ಲೀಕ್ ಆಗಿದೆ. ಚಿತ್ರಮಂದಿರದಲ್ಲಿ ಕೂತು 'ಪದ್ಮಾವತ್' ವೀಕ್ಷಿಸುತ್ತಿದ್ದ ಕಿಡಿಗೇಡಿಯೊಬ್ಬ ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ಮಾಡಿ ಸಾವಿರಾರು ಜನರಿಗೆ 'ಪದ್ಮಾವತ್' ಫುಲ್ ಸಿನಿಮಾ ಬಿಟ್ಟಿಯಾಗಿ ತೋರಿಸಿದ್ದಾನೆ.
ಮೊದಲೇ ಪ್ರತಿಭಟನೆಗಳಿಂದಾಗಿ ಬೇಸರದಲ್ಲಿ ಇರುವ 'ಪದ್ಮಾವತ್' ಚಿತ್ರತಂಡಕ್ಕೆ ಫೇಸ್ ಬುಕ್ ಲೈವ್ ದೊಡ್ಡ ಶಾಕ್ ನೀಡಿದೆ. ಮುಂದೆ ಓದಿರಿ....

ಲೀಕ್ ಆದ ಪದ್ಮಾವತ್ ಸಿನಿಮಾ
ರಾಷ್ಟ್ರಾದ್ಯಂತ ಬಿಡುಗಡೆ ಆಗಿರುವ 'ಪದ್ಮಾವತ್' ಸಿನಿಮಾ ಇದೀಗ ಫೇಸ್ ಬುಕ್ ಲೈವ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

ಲೈವ್ ಮಾಡಿದ್ದು ಯಾರು.?
'ಜಾತೋಂ ಕಾ ಅಡ್ಡ' ಎಂಬ ಫೇಸ್ ಬುಕ್ ಪೇಜ್ ಮೂಲಕ ಲೈವ್ ಮಾಡಿ 'ಪದ್ಮಾವತ್' ಚಿತ್ರವನ್ನ ಬಿಟ್ಟಿಯಾಗಿ ಲೀಕ್ ಮಾಡಲಾಗಿದೆ.

ಎಷ್ಟು ಜನ ನೋಡಿದ್ದಾರೆ.?
ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನ 'ಪದ್ಮಾವತ್' ಫೇಸ್ ಬುಕ್ ಲೈವ್ ವಿಡಿಯೋನ ಶೇರ್ ಮಾಡಿದ್ದು, ಸುಮಾರು 3.5 ಲಕ್ಷಕ್ಕೂ ಅಧಿಕ ಮಂದಿ 'ಪದ್ಮಾವತ್' ಚಿತ್ರವನ್ನ ಫ್ರೀಯಾಗಿ ಕಣ್ತುಂಬಿಕೊಂಡಿದ್ದಾರೆ.

'ಪದ್ಮಾವತ್' ಚಿತ್ರದ ಕುರಿತು....
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಹಾಗೂ ಶಾಹೀದ್ ಕಪೂರ್ ಅಭಿನಯದ ಸಿನಿಮಾ 'ಪದ್ಮಾವತ್'. ಸಿನಿಮಾದಲ್ಲಿ ರಜಪೂತ ಸಮುದಾಯವನ್ನ ಕೀಳಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ 'ಪದ್ಮಾವತ್' ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಸದ್ಯ ಬಿಡುಗಡೆ ಆಗಿರುವ 'ಪದ್ಮಾವತ್' ಚಿತ್ರಕ್ಕೆ ಬಹುತೇಕ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.


Click it and Unblock the Notifications











