ಗುಜರಾತ್ ಫಲಿತಾಂಶ ಮುಗಿತು, 'ಪದ್ಮಾವತಿ' ರಿಲೀಸ್ ಯಾವಾಗ?

By Pavithra

ಗುಜರಾತ್ ನಲ್ಲಿ ಎಲೆಕ್ಷನ್ ಮುಗಿಯುತ್ತಿದ್ದ ಹಾಗೆಯೇ ಅನೇಕ ಜನರ ಪ್ರಶ್ನೆ 'ಪದ್ಮಾವತಿ' ಸಿನಿಮಾ ಬಿಡುಗಡೆ ಯಾವಾಗ ಅಂತ. ಡಿಸೆಂಬರ್ 1 ರಂದೇ ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಡಿಸೆಂಬರ್ ಅಂತ್ಯಕ್ಕೆ ಬಂದ್ರು ರಿಲೀಸ್ ವಿಚಾರದ ಬಗ್ಗೆ ಸುಳಿವೇ ಇಲ್ಲ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯಾಗಲಿ ನಟಿ ದೀಪಿಕಾ ಪಡುಕೋಣೆ ಆಗಲಿ ಸಿನಿಮಾದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಆದರೆ ಜನರಿಗೆ ಸಿನಿಮಾ ಬಗೆಗಿನ ನಿರೀಕ್ಷೆ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ.

ಒಂದೆಡೆ ರಾಜಕೀಯ ವ್ಯಕ್ತಿಗಳು ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಖುಷಿಯಿಂದ ಸಂಭ್ರಮಾಚರಣೆ ಮಾಡಿದ್ರೆ, ಇತ್ತ ಸಿನಿಮಾ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪದ್ಮಾವತಿ ಸಿನಿಮಾ ರಿಲೀಸ್ ಯಾವಾಗ ಅಂತ ಟ್ವೀಟ್ ಮಾಡಲು ಶುರು ಮಾಡಿದ್ದಾರೆ. ಚುನಾವಣೆ ಮುಗಿದಿದೆ ಇನ್ನಾದರೂ ಸಿನಿಮಾ ಬಿಡುಗಡೆ ಮಾಡಿ ಎಂದು ಚಿತ್ರತಂಡಕ್ಕೆ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

Bollywood movie Padmavathi might get cbfc certificate

ಮೂಲಗಳ ಪ್ರಕಾರ ಇಂದು (ಡಿಸೆಂಬರ್ 19) 'ಪದ್ಮಾವತಿ' ಸಿನಿಮಾದ ಸೆನ್ಸಾರ್ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇಂದು ಸೆನ್ಸಾರ್ ಮಂಡಳಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರೆ, ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಲಿದ್ಯಂತೆ.

Bollywood movie Padmavathi might get cbfc certificate

ಸಾಕಷ್ಟು ವಿವಾದದ ಸುಳಿವಿನಲ್ಲಿ ಸಿಲುಕಿ ಹೊರ ಬಂದಿರುವ 'ಪದ್ಮಾವತಿ' ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಚಿಂತನೆ ನಡೆಸಿದ್ದು ಜನವರಿ ಮೊದಲವಾರ ಅಥವಾ ಎರಡನೇ ವಾರಕ್ಕೆ ಸಿನಿಮಾವನ್ನ ರಿಲೀಸ್ ಮಾಡಲು ಸಿದ್ದತೆ ನಡೆಸಿದ್ದಾರಂತೆ. ಒಟ್ಟಾರೆ ಸೆನ್ಸಾರ್ ಮಂಡಳಿಯ ಪತ್ರ ಕೈ ಸೇರದೆ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಲು ಸಾಧ್ಯವಿಲ್ಲ ಅದೇ ಕಾರಣದಿಂದ ಇಂದು ಸೆನ್ಸಾರ್ ಆಗಬಹುದೆಂದು ಸಿನಿಮಾ ತಂಡ ಕಾದು ಕುಳಿತಿದೆ.

More from Filmibeat

English summary
Deepika Padukone's bollywood movie 'Padmavati' might get cbfc certificate today (December 19). Once the certificate comes, The cinema ready for release in first are second week in January 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X