ನಟಿ ಶ್ರೀದೇವಿಯ ದೊಡ್ಡ ಕನಸನ್ನು ನನಸು ಮಾಡಿದ ಪತಿ ಬೋನಿ ಕಪೂರ್
Recommended Video
ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿಯ ಕೊನೆ ಆಸೆಯನ್ನು ಪತಿ ಬೋನಿ ಕಪೂರ್ ಈಡೇರಿಸಿದ್ದಾರೆ. ಕಳೆದ ವರ್ಷ ದುರಂತ ಸಾವನಪ್ಪಿದ್ದ ನಟಿ ಶ್ರೀದೇವಿ ಅದೆಷ್ಟೊ ಕನಸುಗಳು ಹಾಗೆ ಉಳಿದಿಯೊ ಗೊತ್ತಿಲ್ಲ. ಆದ್ರೆ ಪತಿಯ ಬಳಿ ಹೇಳಿಕೊಂಡಿದ್ದ ಒಂದು ಆಸೆಯನ್ನು ಈಗ ನೆರವೇರಿಸಿದ್ದಾರೆ ಬೋನಿ ಕಪೂರ್.
ಅಂದ್ಹಾಗೆ ಶ್ರೀದೇವಿಯ ಆಸೆ ಏನಾಗಿತ್ತು ಅಂತ ಅಂದುಕೊಳ್ಳುತ್ತಿದ್ದೀರಾ, ಶ್ರೀದೇವಿ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಮಿಂಚಿದವರು. ದಕ್ಷಿಣ ಭಾರತೀಯ ಚಿತ್ರದ ಮೇಲು ಅಪಾರವಾದ ಪ್ರೀತಿ ಇತ್ತು. ಇಂಗ್ಲೀಷ್ ವಿಂಗ್ಲೀಷ್ ತಮಿಳು ವರ್ಷನ್ ಶೂಟಿಂಗ್ ಮಾಡುವಾಗ ಶ್ರೀದೇವಿ ತಮಿಳು ಸ್ಟಾರ್ ನಟ ಅಜಿತ್ ಸಿನಿಮಾವನ್ನು ನಿರ್ಮಾಣ ಮಾಡಬೇಕೆಂದು ಪತಿಯ ಬಳಿ ಹೇಳಿದ್ದರಂತೆ.

ಶ್ರೀದೇವಿಯ ಈ ಕನಸು ನನಸಾಗುವ ಮೊದಲೆ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದರು. ಆದ್ರೆ ಪತ್ನಿಯ ಕನಸನ್ನು ಕನಸಾಗೆ ಬಿಡದೆ ಈಗ ನನಸುಮಾಡಿದ್ದಾರೆ. ಬೋನಿ ಕಪೂರ್ ನಿರ್ಮಾಣದ ಅಜಿತ್ ಅಭಿನಯದ 'ನೆರ್ಕೊಂಡ ಪಾರ್ವೈ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಇದೆ ತಿಂಗಳು 8ಕ್ಕೆ 'ನೆರ್ಕೊಂಡ ಪಾರ್ವೈ' ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದ ಮೊದಲ ಪ್ರದರ್ಶನ ಸಿಂಗಾಪುರದಲ್ಲಿ ಆಗಲಿದೆ ಎನ್ನುವುದೆ ವಿಶೇಷ. ಈ ಮಾಹಿತಿ ನೀಡುತ್ತ ಬೋನಿ ಕಪೂರ್ ಪತ್ನಿಯನ್ನು ನೆನೆದು ಭಾವುಕರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲೂ ಬರೆದುಕೊಂಡಿದ್ದಾರೆ.

ಅಂದ್ಹಾಗೆ 'ನೆರ್ಕೊಂಡ ಪಾರ್ವೈ' ಬಾಲಿವುಡ್ ನ 'ಪಿಂಕ್' ಚಿತ್ರದ ರಿಮೇಕ್. ಬಿಗ್ ಬಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು, ಕೃತಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿರುವ ಸಿನಿಮಾ. ತಮಿಳಿನ 'ನೆರ್ಕೊಂಡ ಪಾರ್ವೈ' ಚಿತ್ರದಲ್ಲಿ ಅಜಿತ್ ಜೊತೆಗೆ ವಿದ್ಯಾ ಬಾಲನ್, ಕನ್ನಡತಿ ಶ್ರದ್ಧಾ ಶ್ರೀನಾಥ್ ಸೇರಿದಂತೆ ಅನೇಕರು ಬಣ್ಣಹಚ್ಚಿದ್ದಾರೆ. ಬಾಲಿವುಡ್ ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದ್ದ ಪಿಂಕ್ ತಮಿಳು ಚಿತ್ರಪ್ರಿಯರ ಮನ ಗೆಲ್ಲುತ್ತ ಕಾದು ನೋಡಬೇಕು.


Click it and Unblock the Notifications