For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿದ ಬಾಲಿವುಡ್ ನಿರ್ಮಾಪಕಿ ನಿಧಿ

  |

  ಮಕ್ಕಳ ಪಾಲಿನ ಸಂಜೀವಿನಿ ತಾಯಿಯ ಎದೆಹಾಲು. ಮಗುವಿನ ಬೇಕಾದ ಪೌಷ್ಠಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ತಾಯಿಯ ಎದೆಹಾಲಿನಲ್ಲಿ ಇರುತ್ತೆ. ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವ ಅಮೃತವಿದು. ಬಾಲಿವುಡ್ ನಿರ್ಮಾಪಕಿಯೊಬ್ಬರು ಲಾಕ್ ಡೌನ್ ಸಮಯದಲ್ಲಿ ಎದೆಹಾಲು ದಾನ ಮಾಡುವ ಮೂಲಕ ಮಹಾನ್ ಕಾರ್ಯ ಮಾಡಿದ್ದಾರೆ.

  ನಟಿ ತಾಪ್ಸಿ ಪನ್ನು ಮತ್ತು ಭೂಮಿ ಪಡ್ನೆಕರ್ ಅಭಿನಯದ ಸಾಂದ್ ಕೀ ಆಂಖ್ ಸಿನಿಮಾದ ನಿರ್ಮಾಪಕಿ ನಿಧಿ ಪಾರ್ಮಾರ್ ಹೀರಾನಂದನಿ ಈ ಮಹಾನ್ ಕಾರ್ಯ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್ ಆದ ಬಳಿಕ ಕಳೆದ ಮಾರ್ಚ್ ತಿಂಗಳಿಂದ ಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ. ಈ ಮೂಲಕ ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಅಮ್ಮಂದಿರ ಮಕ್ಕಳಿಗೆ ಆಪದ್ಬಾಂಧವರಾಗಿದ್ದಾರೆ. ಮುಂದೆ ಓದಿ...

  ಫೆಬ್ರವರಿಯಲ್ಲಿ ಮಗುವಿನ ಜನ್ಮ ನೀಡಿರುವ ನಿಧಿ

  ಫೆಬ್ರವರಿಯಲ್ಲಿ ಮಗುವಿನ ಜನ್ಮ ನೀಡಿರುವ ನಿಧಿ

  ಈ ವರ್ಷದ ಪ್ರಾರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ನಿರ್ಮಾಪಕಿ ನಿಧಿ ಗಂಡು ಮಗುವಿಗೆ ಜನ ನೀಡಿದ್ದಾರೆ. ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಈ ಮಹಾನ್ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ನಿಧಿ ಇತ್ತೀಚಿಗಿನ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

  ಫ್ರಿಜ್ ನಲ್ಲಿ ಎದೆಹಾಲು ಶೇಖರಿಸಿ ಇಡುತ್ತಿದ್ದ ನಿಧಿ

  ಫ್ರಿಜ್ ನಲ್ಲಿ ಎದೆಹಾಲು ಶೇಖರಿಸಿ ಇಡುತ್ತಿದ್ದ ನಿಧಿ

  ತನ್ನ ಮಗುವಿಗೆ ಹಾಲು ಉಣಿಸಿದ ಬಳಿಕ ನಿಧಿ ಇತರ ಮಕ್ಕಳ ಸಹಾಯಕ್ಕೂ ಧಾವಿಸಿದ್ದಾರೆ. ಎದೆಹಾಲನ್ನು ಹಾಲನ್ನು ಮುಂಬೈನ ಸೂರ್ಯ ಆಸ್ಪತ್ರೆಗೆ ದಾನ ಮಾಡುತ್ತಿದ್ದರಂತೆ. ಅಲ್ಲದೆ ತನ್ನ ಮಗುವಿಗೆ ಹಾಲುಣಿಸಿದ ನಂತರವೂ ಉಳಿದ ಹೆಚ್ಚಿನ ಹಾಲನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಡುತ್ತಿದ್ದರಂತೆ.

  ಎದೆ ಹಾಲನ್ನು ಅನೇಕರು ವೇಸ್ಟ್ ಮಾಡುತ್ತಾರೆ

  ಎದೆ ಹಾಲನ್ನು ಅನೇಕರು ವೇಸ್ಟ್ ಮಾಡುತ್ತಾರೆ

  'ಎದೆಹಾಲನ್ನು ಮೂರರಿಂದ ನಾಲ್ಕು ತಿಂಗಳು ರೆಫ್ರಿಜರೇಟರ್ ನಲ್ಲಿ ಸರಿಯಾಗಿ ಸಂಗ್ರಹಿಸಿ ಇಡಬಹುದು ಎಂದು ನಾನು ಓದಿದ್ದೆ. ನನ್ನ ಕೆಲವು ಸ್ನೇಹಿತರು ಎದೆ ಹಾಲಿನಿಂದ ಮಕ್ಕಳಿಗೆ ಸ್ನಾನ ಮಾಡಿಸುತ್ತಾರೆ, ಸ್ಕ್ರಬ್ ಮಾಡಲು ಬಳಸುತ್ತಾರೆ. ಇದು ಹಾಲಿನ ಕ್ರೂರ ಹಾಳು ಎಂದು ನಾನು ಭಾವಿಸಿದ್ದೇನೆ' ಎಂದಿದ್ದಾರೆ.

  ತೊಂದರೆ ಹೋಗಿ ಭರವಸೆ ಕಾಣ್ತಾ ಇದೆ ಎಂದ Vijay Raghavendra | Filmibeat Kannada
  ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಂಡ ನಿಧಿ

  ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಂಡ ನಿಧಿ

  'ನಾನು ಬಾಂದ್ರಾ ಮಹಿಳಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿದೆ. ಅವರು ಸೂರ್ಯ ಆಸ್ಪತ್ರೆಗೆ ಹಾಲನ್ನು ದಾನ ಮಾಡಲು ಸೂಚಿಸಿದರು. ಅಲ್ಲಿಯವರೆಗೆ ನಾನು ಫ್ರಿಜ್ ನಲ್ಲಿ ಶೇಖರಿಸಿ ಇಡುತ್ತಿದ್ದೆ' ಎಂದಿದ್ದಾರೆ. ಎದೆ ಹಾಲು ಪಡೆದ ಮಕ್ಕಳ ದುರ್ಬಲ ಆರೋಗ್ಯ ಸ್ಥಿತಿ ಕಂಡು ಮುಂದಿನ ಒಂದು ವರ್ಷದ ವರೆಗೂ ಎದೆಹಾಲು ದಾನ ಮಾಡುತ್ತಾರಂತೆ ನಿರ್ಮಾಪಕಿ ನಿಧಿ.

  English summary
  Bollywood Producer Nidhi Parmar Hiranandani donates 42 litres of breast milk during lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X