2013 : 100 ಕೋಟಿ ರು ಕೊಳ್ಳೆ ಹೊಡೆದ ಚಿತ್ರಗಳು

By ಜೇಮ್ಸ್ ಮಾರ್ಟಿನ್

2008ರಲ್ಲಿ ತೆರೆಕಂಡ ಘಜನಿ ಚಿತ್ರ ನಿರ್ಮಾಪಕರಿಗೆ ಮ್ಯಾಜಿಕ್ ನಂಬರ್ ದಾಟುವ ಕನಸು ನನಸು ಮಾಡಿತ್ತು. ಕಳೆದ ಒಂದು ದಶಕದಲ್ಲಿ ಹಿಂದಿ ಚಿತ್ರರಂಗ ಸಾಕಷ್ಟು ಬೆಳೆದಿದೆ. ಅಂತಾರಾಷ್ತ್ರೀಯ ಮಾರುಕಟ್ಟೆಯಲ್ಲಿ ಈಗ ಹಿಂದಿ ಚಿತ್ರಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಇದು ಪರೋಕ್ಷವಾಗಿ ಪ್ರಾದೇಶಿಕ ಭಾಷೆ ಚಿತ್ರಗಳಿಗೂ ಲಾಭ ತರುತ್ತದೆ ಎನ್ನಬಹುದು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ ಹೊರತು ಪಡಿಸಿ ಚಿತ್ರದ ತೆರಿಗೆ ಪಾವತಿ ನಂತರ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿ ಒಟ್ಟಾರೆ 100 ಕೋಟಿ ರು ಕ್ಲಬ್ ಸೇರಿದ ಹಿಂದಿ ಚಿತ್ರಗಳ ಪಟ್ಟಿ ಇಲ್ಲಿದೆ.

2011ರಲ್ಲಿ ಐದು, 2012ರಲ್ಲಿ ಒಂಭತ್ತು ಚಿತ್ರಗಳು 100 ಕೋಟಿ ಕ್ಲಬ್ ಸೇರಿದ್ದು, 2013ರಲ್ಲಿ 2 ಹಿಂದಿ ಚಿತ್ರಗಳು ಈ ಪಟ್ಟಿಯಲ್ಲಿವೆ. ಇನ್ನಷ್ಟು ಕ್ಯೂನಲ್ಲಿವೆ. ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು. 2013ರಲ್ಲಿ ಈ ದಾಖಲೆಯನ್ನು ಧೂಮ್ 3, ಕ್ರಿಶ್ 3 ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಮುರಿಯಿತು. ಕೇವಲ 100 ಕೋಟಿ ರು ಅಷ್ಟೇ ಅಲ್ಲ ಹಿಂದಿ ಚಿತ್ರಗಳು 200-400 ಕೋಟಿ ರು ಗಳಿಕೆ ಕ್ಲಬ್ ಕೂಡಾ ಓಪನ್ ಆಗಿವೆ. ಟಾಪ್ ಚಿತ್ರಗಳ ಪಟ್ಟಿ ಮುಂದಿದೆ ನೋಡಿ

ಚೆನ್ನೈ ಏಕ್ಸ್ ಪ್ರೆಸ್

ಚೆನ್ನೈ ಏಕ್ಸ್ ಪ್ರೆಸ್

ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿದ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಈ ಚಿತ್ರ ಒಟ್ಟಾರೆ 227.93 ಕೋಟಿ ರು ಗಳಿಸಿದೆ ಎನ್ನಲಾಗಿದೆ.

ಆದರೆ, ವಿದೇಶಿ ಮಾರುಕಟ್ಟೆ ಗಳಿಕೆಯೂ ಸೇರಿ 422 ಕೋಟಿ ರು ಗಳಿಸಿದೆ ಎಂದು ಕೊಯಿಮೊಯಿ. ಬಾಲಿವುಡ್ ಹಂಗಾಮ ವರದಿ ಹೇಳುತ್ತದೆ. ಆದರೆ, ವಿಶ್ವದೆಲ್ಲೆಡೆ ಗಳಿಕೆ ಒಟ್ಟು ಮಾಡಿದರೆ 395 ಕೋಟಿ ರು ಗಳಿಕೆ ಖಾತ್ರಿ ಪಡಿಸಬಹುದು (US$60 million)

ರೇಸ್ 2

ರೇಸ್ 2

ಜ.25, 2013ರಂದು ಬಿಡುಗಡೆಗೊಂಡ ರೇಸ್ 2 ಚಿತ್ರ ಸೈಫ್ ಅಲಿ ಖಾನ್ ಅವರ ಮೊದಲ 100 ಕೋಟಿ ಬಾಚಿದ ಚಿತ್ರ. 100 ಕೋಟಿ ಗಳಿಕೆ ಕ್ಲಬ್ ಸೇರಲು 14 ದಿನ ಬೇಕಾಯಿತು. ಮೊದಲ ಮೂರು ದಿನದ ಗಳಿಕೆ ಶುಕ್ರವಾರ 15.12 ಕೋಟಿ ರು, ಶನಿವಾರ 20.72 ಕೋಟಿ, ಭಾನುವಾರ 15.51ಕೋಟಿ ಗಳಿಸಿತ್ತು.

ದಬ್ಬಾಂಗ್ 2

ದಬ್ಬಾಂಗ್ 2

ಡಿ.21, 2012ರಲ್ಲಿ 3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡ ದಬ್ಬಾಂಗ್ 2 ಚಿತ್ರ ಒಟ್ಟಾರೆ 6 ದಿನಗಳಲ್ಲೇ 108.37 ಕೋಟಿ ಗಳಿಸಿ ಸಲ್ಮಾನ್ ಖಾನ್ ಪವರ್ ತೋರಿಸಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ಗಳಿಕೆ 155 ಕೋಟಿ ರು ದಾಟುತ್ತದೆ.

ಯೇ ಜವಾನಿ ಹೇ ದಿವಾನಿ

ಯೇ ಜವಾನಿ ಹೇ ದಿವಾನಿ

ಮೇ 31, 2013ರಂದು 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆ.
* 8 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆ ಒಟ್ಟಾರೆ 191.83 ಕೋಟಿ (29 ಮಿಲಿಯನ್ ಯುಎಸ್ ಡಿ) ಗಳಿಕೆ

* ಮೊದಲ ವಾರ 107.61 ಕೋಟಿ ರು ನಿವ್ವಳ ಲಾಭ
* ಮೂರು ವಾರಗಳಲ್ಲಿ 177.09 ಕೋಟಿ ರು ಗಳಿಕೆ
ಗಲಿಯೋಂ ಕಿ ರಾಸ್ ಲೀಲ ರಾಮ್ ಲೀಲ

ಗಲಿಯೋಂ ಕಿ ರಾಸ್ ಲೀಲ ರಾಮ್ ಲೀಲ

22 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆ ಒಟ್ಟಾರೆ 160 ಕೋಟಿ ರು (24 ಮಿಲಿಯನ್

ಭಾಗ್ ಮಿಲ್ಕಾ ಭಾಗ್

ಭಾಗ್ ಮಿಲ್ಕಾ ಭಾಗ್

24 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆ ಒಟ್ಟಾರೆ 108 ಕೋಟಿ ರು (17 ಮಿಲಿಯನ್ ಯುಎಸ್ ಡಿ)

ಗ್ರಾಂಡ್ ಮಸ್ತಿ

ಗ್ರಾಂಡ್ ಮಸ್ತಿ

23 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆ ಒಟ್ಟಾರೆ 102 ಕೋಟಿ ರು (16 ಮಿಲಿಯನ್ ಯುಎಸ್ ಡಿ)

ಕ್ರಿಶ್ 3

ಕ್ರಿಶ್ 3

ಎಲ್ಲಾ ಭಾಷೆಗಳ ವರ್ಷನ್ ಮೊತ್ತ ಸೇರಿಸಿ 4 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆ ಒಟ್ಟಾರೆ 244.31 ಕೋಟಿ ರು (37 ಮಿಲಿಯನ್ ಯುಎಸ್ ಡಾಲರ್)

ಧೂಮ್ 3

ಧೂಮ್ 3

ಹಿಂದಿ ವರ್ಷನ್ ಬಿಡುಗಡೆಗೊಂಡು 3 ದಿನಗಳಲ್ಲಿ 100 ಕೋಟಿ ರು ಕ್ಲಬ್ ಗೆ ಸೇರ್ಪಡೆಗೊಂಡಿದ್ದು, ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಒಟ್ಟಾರೆ 160 ಕೋಟಿ ರು (24 ಮಿಲಿಯನ್ ಯುಎಸ್ ಡಾಲರ್)

ಆಶಿಕಿ 2

ಆಶಿಕಿ 2

ಏಪ್ರಿಲ್ 26, 2013ರಂದು ತೆರೆ ಕಂಡ ಈ ಚಿತ್ರ ಒಟ್ಟಾರೆ 109 ಕೋಟಿ ರು ( 19 ಮಿಲಿಯನ್ ಯುಎಸ್ ಡಿ) ಗಳಿಸಿದೆ.

ಸ್ಪೆಷಲ್ 26

ಸ್ಪೆಷಲ್ 26

ಫೆಬ್ರವರಿ 8, 2013ರಂದು ತೆರೆ ಕಂಡ ಈ ಚಿತ್ರ ಒಟ್ಟಾರೆ 103 ಕೋಟಿ ರು ( 16 ಮಿಲಿಯನ್ ಯುಎಸ್ ಡಿ) ಗಳಿಸಿದೆ.

More from Filmibeat

English summary
Ghajani started Rs 100 crore movie club in 2008. Here is the list of hit movies in 2013. This elite group includes Hindi films that have earned Rs 100 crore at the Indian Box Office after paying entertainment tax. This amount does not include their collection in international market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X