ವೈರಲ್ ಆದ ಬಾಲಿವುಡ್ ಜೋಡಿ ಹಕ್ಕಿಗಳ ರಹಸ್ಯ ಪ್ರವಾಸ ಫೋಟೋಗಳಿವು

ಬಾಲಿವುಡ್ ನಲ್ಲಿ ಜೋಡಿಗಹಕ್ಕಿಗಳೇನು ಕಮ್ಮಿ ಇಲ್ಲ. ಅಧಿಕೃತವಾಗಿ ಎಂಗೇಜ್ ಆಗಿದ್ದೀವಿ ಅಂತ ಹೇಳದಿದ್ದರು, ಆಗಾಗ ಸಾರ್ವಜನಿಕ ಸಮಾರಂಭ, ಟ್ರಿಪ್, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನ ರೋಮ್ಯಾಂಟಿಕ್ ರೂಮರ್ಸ್ ಕಪಲ್ಸ್ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್, ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ, ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಸಲ್ ಹೀಗೆ ಸಾಕಷ್ಟು ಜೋಡಿಗಳಿದ್ದಾರೆ.

ಈ ಜೋಡಿಗಳು ರಜಾ ದಿನಗಳನ್ನು ಎಂಜಾಯ್ ಮಾಡಲು ಆಗಾಗ ರಹಸ್ಯ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಕ್ಯಾಮರಾ ಕಣ್ಣು, ಅಭಿಮಾನಿಗಳ ಕಣ್ಣು ತಪ್ಪಿಸಿ ದೂರದ ರಹಸ್ಯ ಊರಿಗೆ ಹಾರಿದರು, ಜೋಡಿ ಹಕ್ಕಿಗಳ ಎಂಜಾಯಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಡುತ್ತವೆ. ಅನೇಕ ರೂಮರ್ಸ್ ಕಪಲ್ ಗಳ ಸೀಕ್ರೆಟ್ ಡೇಟಿಂಗ್ ವಿಚಾರ ಬಹಿರಂಗವಾಗಿವೆ. ಬಾಲಿವುಡ್ ರೋಮ್ಯಾಂಟಿಕ್ ಕಪಲ್ಸ್ ರಹಸ್ಯ ಡೇಟಿಂಗ್ ಫೋಟೋಗಳು ವೈರಲ್ ಆದ ವಿವರ ಇಲ್ಲಿದೆ.

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್

ಬಾಲಿವುಡ್ ನ ಖ್ಯಾತ ಜೋಡಿಹಕ್ಕಿಳಲ್ಲಿ ರಣಬೀರ್ ಮತ್ತು ಅಲಿಯಾ ಭಟ್ ಜೋಡಿ ಚಿತ್ರಪ್ರಿಯರ ಗಮನ ಸೆಳೆಯುತ್ತಿದೆ. ಸದಾ ಜೊತೆಯಲ್ಲೆ ಇರುವ ಈ ಜೋಡಿ ಮುಂದಿನ ವರ್ಷ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಆಗಾಗ ವಿದೇಶ ಪ್ರವಾಸಕ್ಕೆ ತೆರಳುವ ಈ ಜೋಡಿ ಹೆಚ್ಚಾಗಿ ನ್ಯೂಯಾರ್ಕ್ ಕಡೆ ಪಯಣ ಬೆಳೆಸುತ್ತಿರುತ್ತಾರೆ. ಆದರೆ ಇತ್ತೀಚಿಗೆ ಈ ಜೋಡಿ ಆಫ್ರಿಕಾದ ಕೀನ್ಯಾ ಕಡೆ ಹೊರಟಿದ್ದರು. ಯಾರಿಗೂ ತಿಳಿಯದ ಹಾಗೆ ರಹಸ್ಯ ಸ್ಥಳ ಅಂತ ಹೋಗಿದ್ದ ಅಲಿಯಾ ಮತ್ತು ರಣಬೀರ್ ಇಬ್ಬರ ಸಫಾರಿ ಫೋಟೋ, ಇಬ್ಬರ ಖಾಸಗಿ ಕ್ಷಣಗಳನ್ನು ರಿವೀಲ್ ಮಾಡಿತ್ತು. ಸಫಾರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ

ನಟ ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಇಬ್ಬರು ಡೇಟಿಂಗ್ ಮಾಡುತ್ತಿರುವುದು ಬಾಲಿವುಡ್ ನಲ್ಲಿ ಗುಲ್ಲಾಗಿದೆ. ಆದರೆ ಈ ಜೋಡಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಪ್ರವಾಸದ ಫೋಟೋಗಳು ಇಬ್ಬರ ರಹಸ್ಯ ಡೇಟಿಂಗ್ ವಿಚಾರವನ್ನು ಬಹಿರಂಗ ಪಡಿಸಿತ್ತು. ಇಬ್ಬರ ಫೇವರಿಟ್ ಸ್ಥಳವಾದ ಲೇ ಲಡಾಕ್ ಮತ್ತು ಪ್ಯಾರಿಸ್ ನ ಟ್ರಿಪ್ ಫೋಟೋಗಳು ಲೀಕ್ ಆಗಿತ್ತು. ಇತ್ತೀಚಿಗೆ ಪ್ಯಾರಿಸ್ ಹೋಗಿದ್ದ ಈ ಜೋಡಿ ಒಂದೇ ಸ್ಥಳದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್

ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್

ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಜೋಡಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್. ಈ ಜೋಡಿ ಆಗಾಗ ರಜಾದಿನಗಳನ್ನು ಎಂಜಾಯ್ ಮಾಡಲು ರಹಸ್ಯ ಸ್ಥಳಗಳಿಗೆ ಪ್ರವಾಸ ಕೈಗೊಳುತ್ತಾರೆ. ಆದರೆ ಕೆಲವು ಫೋಟೋಗಳು ಇವರ ಸೀಕ್ರೆಟ್ ಪ್ರವಾಸದ ಗುಟ್ಟನ್ನು ರಟ್ಟು ಮಾಡಿವೆ. ಇತ್ತೀಚಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ಈ ಜೋಡಿ ಪ್ರತ್ಯೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇಬ್ಬರು ಒಟ್ಟಿಗೆ ಹೋಗಿದ್ದಾರೆ ಎನ್ನುವ ರಹಸ್ಯ ಅಭಿಮಾನಿಗಳಿಗೆ ಗೊತ್ತಾಗಿತ್ತು. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಲು ಶುರು ಮಾಡಿದ್ದರು.

ವಿಕ್ಕಿ ಕೌಸಲ್ ಮತ್ತು ಕತ್ರೀನಾ ಕೈಫ್

ವಿಕ್ಕಿ ಕೌಸಲ್ ಮತ್ತು ಕತ್ರೀನಾ ಕೈಫ್

ಬಾಲಿವುಡ್ ಹೊಸ ಜೋಡಿ ಹಕ್ಕಿ ಅಂದರೆ ತಪ್ಪಾಗಲ್ಲ. ಇತ್ತೀಚಿಗೆ ಇಬ್ಬರ ಡೇಟಿಂಗ್ ವಿಚಾರ ಸದ್ದು ಮಾಡುತ್ತಿದೆ. ವಿಕ್ಕಿ ಕೌಸಲ್ ಮತ್ತು ಕತ್ರೀನಾ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ಇನ್ನೂ ವಿಶೇಷ ಅಂದರೆ ಈ ಜೋಡಿ ಹೊಸ ವರ್ಷ ಆಚರಣೆ ಮಾಡಲು ವಿಶೇಷ ಪ್ಲಾನ್ ಹಾಕಿಕೊಂಡಿದ್ದಾರಂತೆ. ಆದರೆ ಇಬ್ಬರು ಎಲ್ಲಿ ಟ್ರಿಪ್ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನುವುದು ಹಿರಂಗವಾಗಿಲ್ಲ.

More from Filmibeat

English summary
Bollywood rumoured couples secret Vacations photos viral in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X