twitter
    For Quick Alerts
    ALLOW NOTIFICATIONS  
    For Daily Alerts

    'ದೃಶ್ಯಂ 2' 2022ರಲ್ಲಿ 100 ಕೋಟಿ ಕ್ಲಬ್ ಸೇರಿದ 30ನೇ ಚಿತ್ರ! ಶತಕ ಬಾರಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ

    |

    2021ರಲ್ಲಿ ಮಲಯಾಳಂನಲ್ಲಿ ದೃಶ್ಯ ಚಿತ್ರದ ಮುಂದುವರಿದ ಭಾಗ ದೃಶ್ಯಂ 2 ಚಿತ್ರ ಬಿಡುಗಡೆಗೊಂಡಿತ್ತು. ಇನ್ನು ದೃಶ್ಯಂ ಚಿತ್ರದ ಮೊದಲ ಭಾಗವನ್ನು ರಿಮೇಕ್ ಮಾಡಿ ಗೆದ್ದಿದ್ದ ಬಾಲಿವುಡ್ ದೃಶ್ತಂ 2 ಚಿತ್ರವನ್ನೂ ಸಹ ರಿಮೇಕ್ ಮಾಡಿದೆ. ಇನ್ನು ಮೊದಲ ಭಾಗಕ್ಕೆ ನಿಶಿಕಾಂತ್ ಕಾಮತ್ ಆಕ್ಷನ್ ಕಟ್ ಹೇಳಿದ್ದರೆ, ಈ ಬಾರಿ ಅಭಿಷೇಕ್ ಪಠಾಕ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

    ಮೊದಲ ಭಾಗದ ರೀತಿಯೇ ದೃಶ್ಯಂ ಎರಡನೇ ಭಾಗವೂ ಸದ್ಯ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದು ಕಳೆಗುಂದಿದ್ದ ಬಾಲಿವುಡ್‌ಗೆ ಜೀವ ತುಂಬಿದೆ. ಹೌದು, ಕಲೆಕ್ಷನ್ ವಿಚಾರವಾಗಿ ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರಗಳು ಹೆಚ್ಚೇನೂ ಸದ್ದು ಮಾಡಿರಲಿಲ್ಲ. ಕೆಲವೊಂದಷ್ಟು ಚಿತ್ರಗಳು ಒಳ್ಳೆ ಕಲೆಕ್ಷನ್ ಮಾಡಿದ್ರೂ ಸಹ ಮಿಶ್ರ ಪ್ರತಿಕ್ರಿಯೆ ಪಡೆದ ಚಿತ್ರ ಎನಿಸಿಕೊಂಡಿದ್ದವು. ಆದರೆ ದೃಶಂ 2 ಬಿಡುಗಡೆಗೊಂಡ ಒಂದೇ ವಾರದಲ್ಲಿ ನೂರು ಕೋಟಿ ಕ್ಲಬ್ ಸೇರುವ ಮೂಲಕ ಸದ್ದು ಮಾಡಿದೆ.

    ಹೌದು, ಇಂದಿಗೆ ( ನವೆಂಬರ್ 25 ) ದೃಶ್ಯಂ 2 ಚಿತ್ರ ನೂರು ಕೋಟಿ ನೆಟ್ ಕಲೆಕ್ಷನ್ ಅನ್ನು ಪೂರೈಸಿದೆ. ಮೊದಲ ವಾರದ ಅಂತ್ಯಕ್ಕೆ 104.85 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ದೃಶ್ಯಂ 2 ಚಿತ್ರ 123.37 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಭಾರತದ 30ನೇ ಚಿತ್ರ ಎನ್ನುವ ಮೈಲಿಗಲ್ಲನ್ನು ಚಿತ್ರ ನೆಟ್ಟಿದೆ.

    ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳು

    ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳು

    1. ಕೆಜಿಎಫ್ ಚಾಪ್ಟರ್ 2 - 1250 ಕೋಟಿ

    2. ಆರ್ಆರ್ಆರ್ - 1200 ಕೋಟಿ

    3. ವಿಕ್ರಮ್ - 500 ಕೋಟಿ

    4. ಪೊನ್ನಿಯಿನ್ ಸೆಲ್ವನ್ 1 - 482 ಕೋಟಿ

    5. ಬ್ರಹ್ಮಾಸ್ತ್ರ - 431 ಕೋಟಿ

    6. ಕಾಂತಾರ - 401 ಕೋಟಿ ( ಇನ್ನೂ ಪ್ರದರ್ಶನಗೊಳ್ಳುತ್ತಿದೆ )

    7. ದಿ ಕಾಶ್ಮೀರ್ ಫೈಲ್ಸ್ - 340.1 ಕೋಟಿ

    8. ಭೂಲ್ ಬುಲಯ್ಯಾ 2 - 266 ಕೋಟಿ

    9. ಬೀಸ್ಟ್ - 243.5 ಕೋಟಿ

    10. ಗಂಗೂಬಾಯಿ ಖಾತಿಯಾವಾಡಿ - 209.2 ಕೋಟಿ

    11. ಸರ್ಕಾರು ವಾರಿ ಪಾಟ - 205 ಕೋಟಿ

    12. ವಾಲಿಮೈ - 194.5 ಕೋಟಿ

    13. ವಿಕ್ರಾಂತ್ ರೋಣ - 184.5 ಕೋಟಿ

    14. ಭೀಮ್ಲಾ ನಾಯಕ್ - 180.5 ಕೋಟಿ

    15. ರಾಧೆ ಶ್ಯಾಮ್ - 177.5 ಕೋಟಿ

    16. ಜೇಮ್ಸ್ - 150.7 ಕೋಟಿ

    17. ವಿಕ್ರಮ್ ವೇದಾ - 135.4 ಕೋಟಿ

    18. ಜುಗ್ ಜುಗ್ ಜೀಯೋ - 135.2 ಕೋಟಿ

    19. ಫನ್ ಅಂಡ್ ಫ್ರಸ್ರ್ಟೇಷನ್ 3 - 134 ಕೋಟಿ

    20. ಲಾಲ್ ಸಿಂಗ್ ಛಡ್ಡಾ - 133.5 ಕೋಟಿ

    21. ಕಾರ್ತಿಕೇಯ 2 - 118 ಕೋಟಿ

    22. ಡಾನ್ - 117.7 ಕೋಟಿ

    23. ತಿರುಚಿತ್ರಾಂಬಲಂ - 115 ಕೋಟಿ

    24. ಈಟಿ - 110 ಕೋಟಿ

    25. 777 ಚಾರ್ಲಿ - 105 ಕೋಟಿ

    26. ಸೀತಾ ರಾಮಮ್ - 105 ಕೋಟಿ

    27. ಗಾಡ್‌ಫಾದರ್ - 105 ಕೋಟಿ

    28. ಭೀಷ್ಮ ಪರ್ವಮ್ - 100 ಕೋಟಿ

    29. ಸರ್ದಾರ್ - 100 ಕೋಟಿ

    30. ದೃಶ್ಯಂ 2 - 124 ಕೋಟಿ

    300 ಕೋಟಿ ಖಚಿತ?

    300 ಕೋಟಿ ಖಚಿತ?

    ಇನ್ನು ದೃಶ್ಯಂ 2 ಹಿಂದಿ ಚಿತ್ರ ಮೊದಲ ವಾರವೇ ನೂರು ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸಿದ್ದು ಚಿತ್ರ ಅಂತಿಮವಾಗಿ 300 ಕೋಟಿ ಗಳಿಸಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಊಹಿಸಿದ್ದಾರೆ. ಈ ಮೈಲಿಗಲ್ಲನ್ನು ಚಿತ್ರ ಮುಟ್ಟಿದರೆ ಈ ವರ್ಷ 300 ಕೋಟಿ ಗಳಿಸಿದ ಎಂಟನೇ ಚಿತ್ರ ಎನಿಸಿಕೊಳ್ಳಲಿದೆ.

    ಒರಿಜಿನಲ್‌ಗೆ ನಿರಾಸೆ

    ಒರಿಜಿನಲ್‌ಗೆ ನಿರಾಸೆ

    ಇನ್ನು ದೃಶ್ಯಂ 2 ಮಲಯಾಳಂ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಈ ಚಿತ್ರವನ್ನು ಕೊರೊನಾ ಕಾರಣದಿಂದಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದೇ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಚಿತ್ರ ವೀಕ್ಷಿಸಿದ್ದ ಸಿನಿ ರಸಿಕರು ಇಂತಹ ಥ್ರಿಲ್ಲಿಂಗ್ ಕತೆ ಇರುವ ಚಿತ್ರವನ್ನು ಚಿತ್ರಮಂದಿರದ ಬದಲು ಓಟಿಟಿಯಲ್ಲಿ ಬಿಡುಗಡೆ ಮಾಡಿ ಚಿತ್ರತಂಡ ತಪ್ಪು ಮಾಡಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಇದು ಈಗ ನಿಜವಾಗಿದೆ. ಈ ಚಿತ್ರದ ರಿಮೇಕ್ ನೂರು ಕೋಟಿ ಕ್ಲಬ್ ಸೇರಿದ್ದು, ಒರಿಜಿನಲ್ ಅನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದು ದುಡುಕಿನ ನಿರ್ಧಾರವೇ ಸರಿ.

    English summary
    Bollywood's Drishyam 2 becomes the 30th Indian film to enter 100 crore club in 2022. Take a look
    Friday, November 25, 2022, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X