''ಚಿತ್ರರಂಗದಿಂದ ದೂರ ಸರಿಯುತ್ತೇನೆ'' ಎಂದು ಗಳಗಳನೆ ಅತ್ತ ಅಮೀರ್ ಖಾನ್...!
ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಅವರನ್ನು ಅವರ ಅಭಿಮಾನಿಗಳು ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಯುತ್ತಾರೆ.
ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಅಮೀರ್ ಖಾನ್‌ಗಷ್ಟೇ ಗೊತ್ತು. ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಅಮೀರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು. ಇಂಥಾ ಅಮೀರ್ ಖಾನ್ ಕಣ್ಣೀರು ಹಾಕಿದ್ದಾರೆ. ಮನದ ನೋವು ಹಂಚಿಕೊಂಡು ಬಿಕ್ಕಿದ್ದಾರೆ.

ಹೌದು, ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನಡೆಸಿಕೊಡುವ, ಚಾಪ್ಟರ್ 2 ಪಾಡ್ ಕಾಸ್ಟ್ ನಲ್ಲಿ ಭಾಗವಹಿಸಿದ್ದ ಅಮೀರ್ ಖಾನ್, ಹತ್ತು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಸಲ್ಮಾನ್ ಖಾನ್, ಹೃತಿಕ್ ರೋಷನ್, ಶಾರುಖ್ ಖಾನ್ ಇವರೆಲ್ಲ ಬಾಲಿವುಡ್‌ನ ಸುರಸುಂದರ ಹೀರೋಗಳು ನಾನು ಇವರಷ್ಟು ಸುಂದರವಾಗಿಲ್ಲ ಎಂದಿದ್ದಾರೆ. ನನ್ನನ್ನೂ ನಾನು ಯಾವತ್ತು ಹ್ಯಾಂಡ್ಸಮ್ ಎಂದುಕೊಂಡಿಲ್ಲ ಅಂದಿದ್ದಾರೆ. ಇನ್ನೂ ನನ್ನ ಫ್ಯಾಶನ್ ಸೆನ್ಸ್ ನ ಜನ ಗೇಲಿ ಮಾಡುತ್ತಾರೆ ಎಂದು ಅಮೀರ್ ಹೇಳಿದಾಗ ರಿಯಾ ವೀವು ಸ್ಟೈಲಿಶ್ ಎಂದು ನಾನು ಹೇಳಿಲ್ಲ ಎಂದಿದ್ದಾರೆ.
ಹೀಗೆ ನಗು ಜೊತೆ ಶುರುವಾಗುವ ಈ ಕಾರ್ಯಕ್ರಮದ ಒಂದು ಹಂತದಲ್ಲಿ ಅಮೀರ್ ಖಾನ್ ಮೌನವಾಗಿದ್ದಾರೆ. ಭಾವುಕರಾಗಿದ್ದಾರೆ. ಚಿತ್ರರಂಗದಿಂದ ನಾನು ದೂರವಾಗಬೇಕು ಎಂದು ಹೇಳಿದ್ದಾರೆ. ಅಮೀರ್ ಅವರ ಈ ಮಾತುಗಳಿಗೆ ರಿಯಾ ಸುಳ್ಳು ಎಂದು ಹೇಳಿದ್ದಾರೆ. ಇದಕ್ಕೆ ಅಮೀರ್ ಖಾನ್ ಇಲ್ಲ ನಿಜಾ ಎಂದು ಹೇಳಿದ್ದಾರೆ. ಆ ನಂತರ ಕಣ್ಣೀರು ಹಾಕಿದ್ದಾರೆ.

ಇನ್ನೂ ಇದೇ ಕಾರ್ಯಕ್ರಮದಲ್ಲಿ ರಿಹಾ ಚಕ್ರವರ್ತಿಯ ಧೈರ್ಯ ಮತ್ತು ಸಾಹಸವನ್ನು ಕೂಡ ಅಮೀರ್ ಖಾನ್ ಮೆಚ್ಚಿಕೊಂಡಿದ್ದಾರೆ. ಸದ್ಯ ತಮ್ಮ ಈ ಕಾರ್ಯಕ್ರಮದ ಚಿಕ್ಕ ತುಣುಕು ಮಾತ್ರ ಹಂಚಿಕೊಂಡಿರುವ ರಿಯಾ ಅಮೀರ್ ಖಾನ್ ಅವರನ್ನು ನಿಜವಾದ ಸ್ಟಾರ್ ಮತ್ತು ನಿಜವಾದ ಸ್ನೇಹಿತ ಎಂದಿದ್ದಾರೆ. ಆಗಸ್ಟ್ 23ರಂದು ಪೂರ್ತಿ ಸಂಚಿಕೆಯನ್ನು ನೋಡಲು ಮರೆಯದಿರಿ ಎಂದು ಹೇಳಿದ್ದಾರೆ.
ಅಂದ್ಹಾಗೇ ಅಮೀರ್ ಖಾನ್ ಚಿತ್ರರಂಗದಿಂದ ನಿವೃತ್ತಿ ಪಡೆಯುವ ಕುರಿತು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅಮೀರ್ ಖಾನ್ ತಮ್ಮ ಕನಸಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ಸೋತಾಗ ಕೂಡ ಚಿತ್ರರಂಗದಿಂದ ದೂರ ಸರಿಯುವ ಮಾತುಗಳನ್ನಾಡಿದ್ದರು. ಸಿನಿಮಾ ಹುಚ್ಚಿಂದ ನನ್ನ ಕುಟುಂಬಕ್ಕೆ ನಾನು ಸಮಯವನ್ನೇ ನೀಡಲಿಲ್ಲ ಎಂದು ಕಣ್ಣೀರು ಹಾಕಿದ್ದರು. ಈಗ ಅಮೀರ್ ಮತ್ತೊಮ್ಮೆ ನಿವೃತ್ತಿಯ ಕುರಿತು ಮಾತನಾಡಿದ್ದಾರೆ. ಹೀಗಾಗಿಯೇ ಚಿಂತಾಕ್ರಾಂತವಾಗಿರುವ ಅಮೀರ್ ಖಾನ್ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ರಿಯಾ ವಿಡಿಯೋ ಹಂಚಿಕೊಂಡ ಬೆನ್ನಲ್ಲಿಯೇ ಚರ್ಚೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ.


Click it and Unblock the Notifications











