For Quick Alerts
  ALLOW NOTIFICATIONS  
  For Daily Alerts

  ತೀವ್ರ ಸಂಕಷ್ಟದಲ್ಲಿ ಪ್ರಖ್ಯಾತ ನಟಿಯ ಬದುಕು: ಆರ್ಥಿಕ ಸಹಾಯಕ್ಕೆ ಮೊರೆ

  |

  ಬಾಲಿವುಡ್‌ನ ಹಿರಿಯ ನಟಿ ಶಗುಫ್ತಾ ಅಲಿ ಜೀವನ ಬೀದಿಗೆ ಬಂದಿದೆ. ಸಿನಿಮಾಗಳಲ್ಲಿ ಅವಕಾಶವಿಲ್ಲದೆ ಪರದಾಡುತ್ತಿದ್ದ ಹಿರಿಯ ನಟಿ ಶಗುಫ್ತಾ, ಲಾಕ್ ಡೌನ್ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕ್ಕಿದ್ದು ಹಣಕಾಸಿನ ಸಹಾಯ ಕೋರಿದ್ದಾರೆ.

  ಅನಾರೋಗ್ಯದಿಂದ ಬಳಲುತ್ತಿರುವ ಶಗುಫ್ತಾ ಅಲಿ ಮೆಡಿಸಿನ್ ತೆಗೆದುಕೊಳ್ಳಲು ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಸುಮಾರು 35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಶಗುಫ್ತಾ ಅಲಿ ಟಿವಿ ಮತ್ತು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಬೆಪನ್ನಾ, ಸಾಥ್ ನಿಭಾನಾ ಸಾಥಿಯಾ, ಸಾಸುರಲ ಸಿಮಾರ್ ಕಾ ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳು ಸೇರಿದಂತೆ ಸಿನಿಮಾಗಳಲ್ಲೂ ನಟಿಸಿದ್ದಾರೆ.

  ಕಳೆದ ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದ ಹಿರಿಯ ನಟಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ ಹದಗೆಟ್ಟಿದ್ದು ಬಳಿಕ ಅವಕಾಶಗಳಿಲ್ಲ ಎಂದು ಆಂಗ್ಲ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇತ್ತೀಚಿಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅವಕಾಶಗಳು ಕಡಿಮೆಯಾದ ಪರಿಣಾಮ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿದ್ದಾರೆ.

  ಜೀವನ ನಡೆಸಲು ತನ್ನ ಬಳಿ ಇದ್ದ ಕಾರು, ಆಭರಣಗಳನ್ನು ಮಾರಿದ್ದು, ಉಳಿತಾಯವನ್ನು ಬಳಿಸಿಕೊಂಡಿದ್ದಾರಂತೆ. ತನ್ನ ಬಳಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಗುಫ್ತಾ ಅಲಿ, "ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಹಲವರಿಗೆ ತಿಳಿದಿಲ್ಲ. ಏಕೆಂದರೆ ಅಲ್ಲಿಯವರೆಗೆ ನಾನು ಬದುಕಲು ನನ್ನ ಬಳಿ ಇದ್ದ ಎಲ್ಲಾ ಆಸ್ತಿಗಳನ್ನು ಮಾರಿದೆ. ನನಗೆ ತಕ್ಷಣ ಆರ್ಥಿಕ ಸಹಾಯ ಬೇಕು. ಜೀವನ ನಡೆಸಲು ಕೆಲಸ ಮಾಡಬೇಕಿದೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಮಾರಾಟ ಮಾಡಲು ನನ್ನ ಬಳಿ ಈಗ ಏನು ಇಲ್ಲ" ಎಂದಿದ್ದಾರೆ.

  ತನ್ನ ಅನಾರೋಗ್ಯದ ಜೊತೆಗೆ ತಾಯಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಿಸಲು ಹಣದ ಅವಶ್ಯಕತೆ ಇದೆ ಎಂದಿದ್ದಾರೆ. "ನನ್ನ ತಾಯಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿದೆ. ತಾಯಿಯನ್ನು ವೈದ್ಯರ ಬಳಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಜನರು ಲಾಕ್ ಡೌನ್‌ನಿಂದ ಕಳೆದ ಒಂದೂವರೆ ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಆದರೆ ನಾನು ನಾಲ್ಕು ವರ್ಷಗಳಿಂದ ಈ ಪರಿಸ್ಥಿತಿಯಲ್ಲಿ ಇದ್ದೀನಿ" ಎಂದಿದ್ದಾರೆ.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat

  54 ವರ್ಷದ ನಟಿ ಶಗುಫ್ತಾ ಕಳೆದ ನಾಲ್ಕು ವರ್ಷಗಳಲ್ಲಿ ನಟ ಸುಶಾಂತ್ ಮತ್ತು ಖ್ಯಾತ ನಟಿ ನೀನಾ ಗುಪ್ತಾ ಅವರಿಂದ ಸಹಾಯ ಪಡೆದಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಶಗುಫ್ತಾ ಅಲಿ ಸಂಕಷ್ಟದ ಬಗ್ಗೆ ತಿಳಿದುಕೊಂಡ ಸಿನಿ ಮತ್ತು ಟಿವಿ ಕಲಾವಿದರ ಸಂಘ ಹಿರಿಯ ನಟಿಗೆ ಸಹಾಯ ಮಾಡುವುದಾಗಿ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  English summary
  Bollywood senior Actress Shagufta Ali faces major Financial crisis, she reveals no work fro the last four years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X