For Quick Alerts
  ALLOW NOTIFICATIONS  
  For Daily Alerts

  ನಟಿ ಜಿಯಾ ಖಾನ್ ಆತ್ಮಹತ್ಯೆ, ಬಾಲಿವುಡ್ ದಿಗ್ಭ್ರಮೆ

  By Mahesh
  |

  ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದ 25 ವರ್ಷದ ನಫೀಸಾ ಅಲಿಯಾಸ್ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಜಿಯಾ ಖಾನ್ ಸಾವಿಗೆ ಏನು ಕಾರಣ ಎಂದು ಇನ್ನೂ ತಿಳಿದಿಲ್ಲ.

  ಬ್ರಿಟನ್ ಮೂಲದ 25 ವರ್ಷ ವಯಸ್ಸಿನ ಜಿಯಾ ಖಾನ್ ತಮ್ಮ ಸಾಗರ್ ಸಂಗೀತ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

  ಜಿಯಾ ಖಾನ್ ಅವರ ಮನೆ ಕೆಲಸದವರು, ನೆರೆ ಮನೆಯವರು, ಸೆಕ್ಯುರಿಟಿಗಳನ್ನು ವಿಚಾರಣೆ ನಡೆಸಲಾಗಿದೆ ಅದರೆ, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ರಾತ್ರಿ ಸುಮಾರು 1.45 ರ ಸುಮಾರಿಗೆ ನಟಿ ದಿಯಾ ಮಿರ್ಜಾ ಅವರು ಜಿಯಾ ಖಾನ್ ಸಾವಿಗೆ ಬಗ್ಗೆ ತಿಳಿಸಿದರು.

  80ರ ದಶಕದಲ್ಲಿ ದುಲ್ಹಾ ಬಿಕ್ತಾ ಹೈ ಚಿತ್ರದಲ್ಲಿ ನಟಿಸಿದ್ದ ರಾಬಿಯಾ ಅಮಿನ್ ಎಂಬ ನಟಿಯ ಪುತ್ರಿಯಾದ ನಫೀಸಾ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಜಿಯಾ ಎಂದು ಜನಪ್ರಿಯತೆ ಗಳಿಸಿದ್ದರು. ಜಿಯಾ ಅಕಾಲಿಕ ಮರಣಕ್ಕೆ ಬಾಲಿವುಡ್ ಟ್ವೀಟ್ ಮಾಡಿ ಕಂಬನಿ ಹರಿಸಿದೆ. ಚಿತ್ರರಂಗದ ಗಣ್ಯರ ಟ್ವೀಟ್ ಗಳು ನಿಮಗಾಗಿ ಇಲ್ಲಿದೆ...

  ಜಿಯಾ ಖಾನ್

  ಜಿಯಾ ಖಾನ್

  2007ರಲ್ಲಿ ನಿಶ್ಯಬ್ದ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಗೆ ಸರಿ ಸಮಾನರಾಗಿ ನಟಿಸಿದ್ದ ಜಿಯಾ ಖಾನ್ ಎಲ್ಲರ ಗಮನ ಸೆಳೆದಿದ್ದರು.

  ರಾಮ್ ಗೋಪಾಲ್ ವರ್ಮಾ ಅವರ ಈ ಚಿತ್ರದಲ್ಲಿ ವೃದ್ಧ ಅಮಿತಾಬ್ ರನ್ನು ಇಷ್ಟಪಡುವ ಟೀನೇಜ್ ಹುಡುಗಿಯಾಗಿ ಜಿಯಾ ನಟಿಸಿದ್ದರು. ಮೊದಲ ಚಿತ್ರದಲ್ಲೇ ಫಿಲಂಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು

  2008ರಲ್ಲಿ ಅಮಿರ್ ಖಾನ್ ಹಾಗೂ ಆಸೀನ್ ಜೋಡಿಯ ಸೂಪರ್ ಹಿಟ್ ಚಿತ್ರ 'ಘಜನಿ'ಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರ ಸಾಜಿದ್ ಖಾನ್ ಅವರ ಹೌಸ್ ಫುಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  ಶಹೀದ್ ಕಪೂರ್

  ಅರ್ಷದ್ ವಾರ್ಸಿ ಕಂಬನಿ

  ಜಾಕ್ವಲಿನ್ ಫರ್ನಾಂಡೀಸ್

  ಅಮಿತಾಬ್ ಬಚ್ಚನ್

  ಬಿಪಾಶ ಬಸು

  ಸೋನಮ್ ಕಪೂರ್

  ನೇಹಾ ಧೂಪಿಯಾ

  ಫರ್ಹಾ ಖಾನ್

  ಚಿತ್ರಾಂಗದಾ ಸಿಂಗ್

  ಪ್ರೀತೀಶ್ ನಂದಿ

  ತರಣ್ ಆದರ್ಶ್

  ಮಿನಿ ಮಾಥುರ್

  ವೀರ್ ದಾಸ್

  ಅನುಪಮ್ ಖೇರ್

  ಅಮೃತಾ ಅರೋರಾ

  ತಾರಾ ಶರ್ಮ

  ಶೆರ್ಲಿನ್ ಛೋಪ್ರಾ

  ಶ್ರುತಿ ಹಾಸನ್

  English summary
  Bollywood is shocked by actress Jiah Khan's suicide. 25 year old Nafisa alias Jiah Khan committed suicide by hanging herself at her residence in Mumbai's Juhu area. The cause of death is still not confirmed, but initial reports suggest suicide. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X