OMG! ನಟಿ ತುಂಡು ಬಟ್ಟೆ ತೊಟ್ಟರೆ ಕಪಾಳಮೋಕ್ಷ!

By ಜೇಮ್ಸ್ ಮಾರ್ಟಿನ್

ಇಂಡಿಯನ್ ರಾ ಸ್ಟಾರ್ ಎಂಬ ರಿಯಾಲಿಟಿ ಶೋ ನಿರೂಪಕಿ ನಟಿ ಗೌಹರ್ ಖಾನ್ ಕಪಾಳಮೋಕ್ಷ ಪ್ರಸಂಗದಿಂದ ಬಾಲಿವುಡ್ ಬೆಚ್ಚಿದೆ. ಮುಸ್ಲಿಮ್ ಜನಾಂಗಕ್ಕೆ ಸೇರಿರುವ ಗೌಹರ್ ಖಾನ್ ತುಂಡುಡುಗೆ ಉಟ್ಟು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಕಿಲ್ ಮಲ್ಲಿಕ್ ಎಂಬಾತ ನಟಿ ಕೆನ್ನೆಗೆ ಬಾರಿಸಿದ್ದ. ಈ ಘಟನೆ ಬಗ್ಗೆ ಬಾಲಿವುಡ್ ಗಣ್ಯರು ತಮ್ಮ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅದರೆ, ಬಾಲಿವುಡ್ ನ ಪ್ರಮುಖ ನಾಯಕರಾದ ಅಮೀರ್, ಶಾರುಖ್ ಹಾಗೂ ಸಲ್ಮಾನ್ ಅವರು ಈ ಘಟನೆ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ. ಜೊತೆಗೆ ಹಿರಿಯ ನಟ ಅಮಿತಾಬ್ ಕೂಡಾ ಸೊಲ್ಲೆತ್ತಿಲ್ಲ. ಏಕೆ ಹೀಗೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ನಟಿ ಕೆನ್ನೆ ಬಾರಿಸಿದ 24ವರ್ಷ ವಯಸ್ಸಿನ ಯುವಕನ ಮೇಲೆ ಕಿರುಕುಳ ಕೇಸ್ ಜಡಿಯಲಾಗಿದೆ. ಬೊರಿವಿಲಿ ಕೋರ್ಟಿಗೆ ಹಾಜರುಪಡಿಸಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇಂಡಿಯನ್ ರಾ ಸ್ಟಾರ್ ಫೈನಲ್ ವೇಳೆಯಲ್ಲಿ ಈ ಘಟನೆ ನಡೆದಾಗ ಸ್ಪರ್ಧಿ ಜೆಫ್ರಿ ಇಕ್ಬಾಲ್ ಎಂಬುವರು ಕೂಡಾ ಮಲ್ಲಿಕ್ ಜೊತೆ ಜಗಳವಾಡಿದ್ದಾರೆ. ಘಟನೆ ಕುರಿತ ವಿಡಿಯೋ ಇಲ್ಲಿದೆ

Bollywood Shocked Over Gauhar Khan Being Slapped For Choice Of Clothes!

ಅಷ್ಟೊಂದು ಭದ್ರತೆ ಇದ್ದರೂ ಈ ರೀತಿ ಘಟನೆ ನಡೆಯಲು ಹೇಗೆ ಸಾಧ್ಯ? ಎಂದು ಹಲವಾರು ಮಂದಿ ಹುಬ್ಬೇರಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಫೈನಲ್ ಸ್ಪರ್ಧೆಗೆ ಭಾರಿ ಭದ್ರತೆ ಒದಗಿಸಲಾಗಿತ್ತು. ಸುಮಾರು 250 ಬೌನ್ಸರ್ ಗಳು ಗಣ್ಯರ ಕಾವಲು ಕಾಯುತ್ತಿದ್ದರೆ 2500 ಮಂದಿ ಆಹ್ವಾನಿತ ಪ್ರೇಕ್ಷಕರು ಉಪಸ್ಥಿತರಿದ್ದರು.

ಭದ್ರತೆಯನ್ನು ಮೀರಿ ನಟಿಯ ಕೆನ್ನೆಗೆ ಬಾರಿಸಿದ್ದಾನೆ. ಗೌಹರ್ ಗೆ ಏನಾಯಿತು ಎಂಬುದು ಅರಿವಾಗುವಷ್ಟರಲ್ಲಿ ಕಣ್ಣಲ್ಲಿ ಧಾರಾಕಾರ ನೀರು ಸುರಿಯತೊಡಗಿದೆ. ಮುಸ್ಲಿಮ್ ಮಹಿಳೆಯಾಗಿ ಈ ರೀತಿ ಬಟ್ಟೆ ತೊಡುತ್ತೀಯಾ ಎಂದು ಮಲ್ಲಿಕ್ ಹೇಳಿದ ಮಾತು ಗೌಹರ್ ಗೆ ಶಾಕ್ ಆಗಿದೆ. [ಗೌಹರ್ ಖಾನ್ ಕಪಾಳ ಮೋಕ್ಷಕ್ಕೆ ತೀವ್ರ ಖಂಡನೆ]

Bollywood Shocked2

ಘಟನೆ ನಂತರ ಒಂದು ಗಂಟೆ ಕಾಲ ಸುಧಾರಿಸಿಕೊಂಡ ಗೌಹರ್ ನಂತರ ಮುಂಬೈನ ಫಿಲಂ ಸಿಟಿಯ ವೇದಿಕೆ ಏರಿ ಮಿಕ್ಕ ಕಾರ್ಯಕ್ರಮವನ್ನು ಮುಗಿಸಿಕೊಂಡಿದ್ದಾರೆ. ಬಿಗ್ ಬಾಸ್ 7 ರ ವಿಜೇತೆ, ಜನಪ್ರಿಯ ನಟಿ, ಡ್ಯಾನ್ಸರ್ ಗೌಹರ್ ಖಾನ್ ಘಟನೆ ನಂತರ ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಂತೂ ಆಗುತ್ತಿದೆ. ಪ್ರತಿಕ್ರಿಯೆಗಳು ನಿರೀಕ್ಷೆಯಂತೆ ಮಾತ್ರ ಹೊರಬರುತ್ತಿಲ್ಲ. ಗೌಹರ್ ಗೆ ಬೆಂಬಲ ವ್ಯಕ್ತಪಡಿಸಿ ಒಂದಿಬ್ಬರು ಟ್ವೀಟ್ ಮಾಡಿದ್ದು ಹೀಗಿದೆ.

ಮಧುರ್ ಬಂಡಾರ್ಕರ್


ಫರ್ಹಾನ್ ಅಖ್ತರ್

More from Filmibeat

English summary
Members of the film fraternity are shocked and speechless after hearing the news that actress-model-host Gauahar Khan was slapped by a man for reportedly wearing skimpy clothes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X