twitter
    For Quick Alerts
    ALLOW NOTIFICATIONS  
    For Daily Alerts

    ಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ಬಾಲಿವುಡ್ ಮಂದಿ

    |

    ಪೌರತ್ವ ನಿಷೇಧ ಕಾಯ್ದೆ (CAA) ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆ ಖಂಡಿಸಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ.

    ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಜಾಮಿಯಾ ಪ್ರತಿಭಟನೆ ಕುರಿತು ಬಾಲಿವುಡ್ ಸೆಲೆಬ್ರಿಟಿಗಳು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಹಲವು ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ಮುಂದೆ ಓದಿರಿ...

    ಪರಿಣಿತಿ ಛೋಪ್ರಾ ಏನಂತಾರೆ.?

    ಪರಿಣಿತಿ ಛೋಪ್ರಾ ಏನಂತಾರೆ.?

    ''ನಾಗರೀಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಹೀಗೆ ಆಗುವುದಾದರೆ, CAA ಮರೆತುಬಿಡಿ, ಒಂದು ಬಿಲ್ ಪಾಸ್ ಮಾಡಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಅಂತ ಹೇಳಿಬಿಡಿ. ಮನಸ್ಸಿಗೆ ಅನಿಸಿದ್ದನ್ನ ಹೇಳಿದವರನ್ನ ಹೊಡೆಯುವುದು ಅನಾಗರಿಕತೆ'' ಎಂದಿದ್ದಾರೆ ಪರಿಣಿತಿ ಛೋಪ್ರಾ.

    ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ದೆಹಲಿಯಲ್ಲಿ ನಿಲ್ಲದ ಹಿಂಸಾಚಾರ

    ಪ್ರಜಾಪ್ರಭುತ್ವದ ನಂಬಿಕೆಗೆ ಧಕ್ಕೆ ಉಂಟಾಗಬಾರದು.!

    ಪ್ರಜಾಪ್ರಭುತ್ವದ ನಂಬಿಕೆಗೆ ಧಕ್ಕೆ ಉಂಟಾಗಬಾರದು.!

    ''ಏನು ನಡೆಯುತ್ತಿದೆಯೋ, ಅದು ಸರಿ ಅಲ್ಲ. ಯಾವ ರೀತಿ ನಡೆಯುತ್ತಿದೆಯೋ, ಅದು ಸರಿ ಇಲ್ಲ. ಶಾಂತವಾಗಿ ನಮ್ಮ ಅಭಿಪ್ರಾಯಗಳನ್ನು ಹೊರ ಹಾಕುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನಾಗರೀಕನಾಗಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾವುದೇ ಸಂದರ್ಭದಲ್ಲೂ ಪ್ರಜಾಪ್ರಭುತ್ವದ ನಂಬಿಕೆಗೆ ಧಕ್ಕೆ ಉಂಟಾಗಬಾರದು'' ಎಂದು ವಿಕ್ಕಿ ಕೌಶಲ್ ಟ್ವೀಟ್ ಮಾಡಿದ್ದಾರೆ.

    ಪೊಲೀಸರು ನಡೆಸಿರುವ ದೌರ್ಜನ್ಯ ಭಯಾನಕ

    ಪೊಲೀಸರು ನಡೆಸಿರುವ ದೌರ್ಜನ್ಯ ಭಯಾನಕ

    ''ಇದು ಅವಾಸ್ತವ. ನಮ್ಮದು ಜಾತ್ಯಾತೀತ ಪ್ರಜಾಪ್ರಭುತ್ವ. ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಭಯಾನಕ. ಶಾಂತವಾಗಿ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ'' - ಹುಮಾ ಖುರೇಶಿ

    ವಿದ್ಯಾರ್ಥಿಗಳ ಪರ ದನಿ ಎತ್ತಿದ ದಿಯಾ ಮಿರ್ಜಾ

    ವಿದ್ಯಾರ್ಥಿಗಳ ಪರ ದನಿ ಎತ್ತಿದ ದಿಯಾ ಮಿರ್ಜಾ

    ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ''ಭಾರತೀಯ ವಿದ್ಯಾರ್ಥಿಗಳ ಒಗ್ಗಟ್ಟಿಗೆ ನಾನು ಕೈಜೋಡಿಸುತ್ತೇನೆ'' ಎಂದಿದ್ದಾರೆ ದಿಯಾ ಮಿರ್ಜಾ.

    ಇದನ್ನ ಯಾವತ್ತೂ ಮರೆಯಬಾರದು.!

    ಇದನ್ನ ಯಾವತ್ತೂ ಮರೆಯಬಾರದು.!

    ಭಾರತ ಸಂವಿಧಾನದ ಪೀಠಿಕೆಯ ಪ್ರಕಾರ ಭಾರತ ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಪ್ರಭುತ್ವ ಗಣತಂತ್ರ ರಾಷ್ಟ್ರ. ಇದನ್ನ ನಾವು ಯಾವತ್ತೂ ಮರೆಯಬಾರದು ಎಂದು ಸೋನಾಕ್ಷಿ ಸಿನ್ಹ ಟ್ವೀಟ್ ಮಾಡಿದ್ದಾರೆ.

    ಘಟನೆಯನ್ನು ಖಂಡಿಸುವೆ

    ಘಟನೆಯನ್ನು ಖಂಡಿಸುವೆ

    ''ನಮ್ಮಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾಗರೀಕರ ಮೇಲೆ ನಡೆದಿರುವ ಹಿಂಸಾಚಾರ ವಿಷಾದನೀಯ. ಈ ಘಟನೆಯನ್ನು ನಾನು ಖಂಡಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರ.

    ಫ್ಯಾಸಿಸ್ಟ್ ಸರ್ಕಾರ.!

    ಫ್ಯಾಸಿಸ್ಟ್ ಸರ್ಕಾರ.!

    ''ನಾನು ವಿದ್ಯಾರ್ಥಿಗಳ ಜೊತೆಗಿದ್ದೇನೆ. ದೆಹಲಿ ಪೊಲೀಸರಿಗೆ ನಾಚಿಕೆ ಆಗಬೇಕು'' ಎಂದು ಕೊಂಕಣ್ ಸೇನ್ ಶರ್ಮಾ ಟ್ವೀಟ್ ಮಾಡಿದ್ದರೆ, ''ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಇದು ಫ್ಯಾಸಿಸ್ಟ್ ಸರ್ಕಾರ'' ಎಂದು ಅನುರಾಗ್ ಕಶ್ಯಪ್ ಟ್ವೀಟಿಸಿದ್ದಾರೆ.

    ನಾಚಿಕೆಗೇಡು

    ನಾಚಿಕೆಗೇಡು

    ''ಭಾರತದಾದ್ಯಂತ ಇಂದು ನಡೆಯುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ'' ಎಂದು ಲೀಸಾ ರೇ ಟ್ವೀಟ್ ಮಾಡಿದ್ದಾರೆ. ''ವಿದ್ಯಾರ್ಥಿಗಳನ್ನು ಕ್ರಿಮಿನಲ್ ರೀತಿ ನೋಡುತ್ತಿರುವುದು ಯಾಕೆ.? ಇದು ಶಾಕಿಂಗ್ ಮತ್ತು ನಾಚಿಕೆಗೇಡು'' ಎಂದು ಸ್ವರಾ ಭಾಸ್ಕರ್ ಟ್ವೀಟಿಸಿದ್ದಾರೆ.

    English summary
    Bollywood stands in solidarity with Jamia Millia University protest.
    Wednesday, December 18, 2019, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X