ಆಮೀರ್ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ; ಸಾಲು ಸಾಲು ಸೋಲನ್ನುಂಡು ಸಿನಿಮಾದಿಂದಲೇ ದೂರ ಸರಿದ್ರಾ?

ಬಾಲಿವುಡ್ ಚಿತ್ರರಂಗ ಕಂಡ ದಿಗ್ಗಜ ಸ್ಟಾರ್ ನಟರ ಪೈಕಿ ಆಮೀರ್ ಖಾನ್ ಸಹ ಒಬ್ಬರು. ಸಣ್ಣ ಪಾತ್ರ ನಿರ್ವಹಿಸಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಚಿತ್ರರಂಗಕ್ಕೆ ಬಂದ ಆಮೀರ್ ಖಾನ್ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ರೂಲ್ ಮಾಡುವ ಮಟ್ಟಕ್ಕೆ ಬೆಳೆದುನಿಂತರು. ಯಾದೋನ್ ಕಿ ಭಾರತ್ ಹಾಗೂ ಮಧೋಶ್ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಆಮೀರ್ ಖಾನ್ ಬಳಿಕ ಪರೊನಿಯಾ ಎಂಬ ಕಿರುಚಿತ್ರದಲ್ಲಿ ಹಾಗೂ ಮನ್ಝಿಲ್ ಮಜ್ಝಿಲ್ ಎಂಬ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದರು.

ಈ ನಾಲ್ಕು ಚಿತ್ರಗಳಲ್ಲಿ ನಟಿಸಿದ ಬಳಿಕ 1984ರಲ್ಲಿ ಬಿಡುಗಡೆಯಾದ ಹೋಲಿ ಎಂಬ ಚಿತ್ರದಲ್ಲಿ ಆಮೀರ್ ಖಾನ್ ಮೊದಲ ಬಾರಿಗೆ ಲೀಡ್ ನಟನಾಗಿ ಕಾಣಿಸಿಕೊಂಡರು. ಹೀಗೆ ನಾಯಕನಾಗಿ ಈ ಚಿತ್ರದಲ್ಲಿ ಬಣ್ಣ ಹಚ್ಚಿನ ಆಮೀರ್ ಖಾನ್ ನಂತರ ವರ್ಷ ಯಾವ ಚಿತ್ರದಲ್ಲಿಯೂ ನಟಿಸದೇ 1988ರಲ್ಲಿ ತೆರೆಕಂಡ ಖಾಯಾಮತ್ ಸೆ ಖಾಯಾಮತ್ ತಕ್ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದರು ಹಾಗೂ ಸಹ ನಿರ್ದೇಶಕನಾಗಿಯೂ ಸಹ ಕೆಲಸ ನಿರ್ವಹಿಸಿದ್ದರು.

Bollywood star Aamir Khan celebrating his 58th birthday

ಈ ಚಿತ್ರ ಗೆಲುವು ಕಂಡ ಬಳಿಕ ಆಮೀರ್ ಖಾನ್ ಬೇಡಿಕೆಯ ನಟನಾಗಿ ಬದಲಾದರು. ಸಾಲು ಸಾಲು ಚಿತ್ರಗಳ ಆಫರ್ ಪಡೆದುಕೊಂಡ ಆಮೀರ್ ಖಾನ್ ಹಿಟ್ ಮೇಲೆ ಹಿಟ್ ನೀಡುತ್ತಾ ಹೋದರು. 90ರ ದಶಕದಲ್ಲಿ ಇಂಡಸ್ಟ್ರಿಹ ಹಿಟ್ ಚಿತ್ರಗಳನ್ನು ನೀಡಿದ್ದ ಆಮೀರ್ ಖಾನ್ 2000ದ ನಂತರವೂ ಸಹ ಇಂಡಸ್ಟ್ರಿ ಹಿಟ್‌ಗಳನ್ನು ನೀಡಿದರು. ತೊಂಬತ್ತರ ದಶಕದ ನಟರಿಗೆ ಟಫ್ ಕಾಂಪಿಟಿಷನ್ ನೀಡಿದ್ದ ಆಮೀರ್ ಖಾನ್ ಈಗಿನ ಯುವ ನಟರನ್ನೂ ಸಹ ಹಿಂದಿಕ್ಕಿ ಹಿಡಿತ ಹೊಂದಿರುವ ನಟನಾಗಿದ್ದರು.

ಇತ್ತೀಚೆಗೆ ಧೂಮ್ 3, ಪಿಕೆ, ದಂಗಲ್, ಸೀಕ್ರೆಟ್ ಸೂಪರ್‌ಸ್ಟಾರ್ ಹಾಗೂ ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರಗಳ ಮೂಲಕ ಬಿಗ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆದಿದ್ದ ಆಮೀರ್ ಖಾನ್ ಅವರಿಗೆ ಇಂದು ( ಮಾರ್ಚ್ 14 ) 58ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನದಂದು ಆಮೀರ್ ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದು, ಮುಂದಿನ ಚಿತ್ರ ಯಾವಾಗ ಎಂಬ ಪ್ರಶ್ನೆಯನ್ನು ಹಾಕುತ್ತಿದ್ದಾರೆ. ಹೌದು, ಕಳೆದ ವರ್ಷ ಬಿಡುಗಡೆಯಾಗಿದ್ದ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಮೂಲಕ ಹೀನಾಯವಾಗಿ ಸೋಲುಂಡ ಆಮೀರ್ ಖಾನ್ ಸೈಲೆಂಟ್ ಆಗಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Bollywood star Aamir Khan celebrating his 58th birthday

ದಂಗಲ್ ಮೂಲಕ 2000 ಕೋಟಿ ಕ್ಲಬ್ ಕಲೆಕ್ಷನ್ ಮಾಡಿ ದಾಖಲೆ ಬರೆದಿರುವ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ‍ಛಡ್ಡಾ ಕಳೆದ ವರ್ಷ ಬಿಡುಗಡೆಗೊಂಡಿತ್ತು. ಈ ಚಿತ್ರ ಕಳಪೆ ಗಳಿಕೆ ಮಾಡಿ ಹೀನಾಯ ಸೋಲು ಕಂಡಿತ್ತು. ಕಳೆದ ವರ್ಷ ಬಿಡುಗಡೆಗೊಂಡು ಬಾಯ್‌ಕಟ್ ಟ್ರೆಂಡ್‌ಗೆ ಸಿಲುಕಿ ಮಕಾಡೆ ಮಲಗಿದ ಬಾಲಿವುಡ್ ಚಿತ್ರಗಳ ಪೈಕಿ ಈ ಚಿತ್ರವೂ ಸಹ ಒಂದಾಗಿತ್ತು. ಹೀಗೆ ಸೋಲುಂಡಿರುವ ತಮ್ಮ ನಟನ ಯಾವ ಚಿತ್ರಗಳಾದರೂ ಹುಟ್ಟುಹಬ್ಬದ ದಿನದಂದು ಘೋಷಣೆಯಾಗಲಿವೆಯಾ ಎಂದು ಕಾದಿದ್ದರು. ಆದರೆ ಹುಟ್ಟುಹಬ್ಬದ ಪ್ರಯುಕ್ತ ಯಾವ ಚಿತ್ರಗಳೂ ಸಹ ಅನೌನ್ಸ್ ಆಗದೇ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ ಹಾಗೂ ಆಮೀರ್ ಖಾನ್ ನಿವೃತ್ತಿ ಪಡೆದು ಸಿನಿಮಾದಿಂದ ದೂರಾಗ್ತಾರಾ ಎಂಬ ಅನುಮಾನವೂ ಕಾಡಿದೆ.

More from Filmibeat

English summary
Bollywood star Aamir Khan celebrating his 58th birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X