ಫೋಟೋ ವೈರಲ್: ಮುದ್ದುಮುದ್ದಾಗಿರೊ ಈ ಪುಟಾಣಿ ಈಗ ಸ್ಟಾರ್ ನಟಿ
ಮುದ್ದುಮುದ್ದಾಗಿರೊ ಈ ಸುಂದರಿ ಈಗ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಈಕೆ ಬಾಲಿವುಡ್ ಸ್ಟಾರ್ ನಟನ ಮಗಳು. ಎರಡು ಜಡೆ ಹಾಕಿ, ಬಾಯಲ್ಲಿ ಬೆರಳುಕಚ್ಚುತ್ತ ಕ್ಯಾಮರಾಗೆ ಪೋಸ್ ನೀಡಿರುವ ಈ ಪುಟಾಣಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಅಷ್ಟಕ್ಕೂ ಈ ಪುಟ್ಟ ಪೋರಿ ಯಾರು ಗೊತ್ತಾ? ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್. ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಸಾರಾ ತನ್ನ ಬಾಲ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾರಾ ಅವರ ಈ ಮುದ್ದಾದ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಗಳು ಹರಿದು ಬರುತ್ತಿವೆ. ಇತ್ತೀಚಿಗೆ ಸಾರಾ ಸಾಕಷ್ಟು ಹಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ತೆಳ್ಳಗೆ ಬಳಕುವ ಬಳ್ಳಿಯಂತೆ ಆಗಿರುವ ಗ್ಲಾಮರ್ ಬೊಂಬೆ ಸಾರಾ ನಾಲ್ಕು ವರ್ಷಗಳ ಹಿಂದೆ ಹೇಗಿದ್ದರು ಎನ್ನುವ ಫೋಟೋಗಳು ಅಭಿಮಾನಿಗಳನ್ನು ಅಚ್ಚರಿ ಮೂಡಿಸುವಂತಿದೆ.

ದಪ್ಪಗೆ, ಗುಂಡಗೆ ಇರುವ ಸಾರಾ ವಿಡಿಯೋ ನೋಡಿ ಇದು ನಿಜಕ್ಕು ಸಾರಾ ಅಲಿ ಖಾನ್ ಅವರೇನಾ ಎನ್ನುವ ಅನುಮಾನ ಪಡುವಂತಿವೆ. ಸುಮಾರು 90 ಕೆಜಿ ಇದ್ದ ಸಾರಾ ಜಿಮ್ ನಲ್ಲಿ ಬೆವರಿಳಿಸಿ, ವರ್ಕೌಟ್ ಮಾಡಿ ಈಗ ಸ್ಲಿಮ್ ಆಗಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

2018ರಲ್ಲಿ ಕೇದಾರನಾಥ ಸಿನಿಮಾ ಮೂಲಕ ಸಾರಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಿಂಬಾ ಸಿನಿಮಾದ ಸಕ್ಸಸ್ ನ ನಂತರ ಮತ್ತಷ್ಟು ಖ್ಯಾತಿ ಹೆಚ್ಚಿಸಿಕೊಂಡಿರುವ ಸಾರಾ ಸದ್ಯ ಕೂಲಿ ನಂ.1 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











