ನಟಿ ಬಟ್ಟೆ ಮೇಲೆ ಅಕ್ಷಯ್ ಕುಮಾರ್ ಕಾಲು ; ಮುಜುಗರಕ್ಕೀಡಾದ ಬಿಟೌನ್ ಬ್ಯೂಟಿ..!

ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೋದಾಗ, ಸೆಲೆಬ್ರೆಟಿಗಳ ಮೈಯೆಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಆಚೀಚೆ ಆದರೂ ಮುಗಿಯಿತು. ಸಭಾಂಗಣ ಪ್ರಹಸನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇರುತ್ತೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಗರಂ ಆಗುವವಂತಹ ವಾತಾವರಣ ನಿರ್ಮಾಣವಾಗುತ್ತೆ. ಅದರಲ್ಲೂ ಬಾಲಿವುಡ್ ನಲ್ಲಿ ದಿನಕ್ಕೊಂದರಂತೆ ಇಂತಹ ಘಟನೆಗಳು ನಡೆಯುತ್ತಾನೇ ಇರುತ್ತವೆ. ಉದಾಹರಣೆಗೆ ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ

ಹೌದು, ಬಡೇ ಮಿಯಾ ಚೋಟೆ ಮಿಯಾ, ಇನ್ನೇನು ಇದೇ ಏಪ್ರಿಲ್ ಹತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರವನ್ನೂ ಕೂಡ ಚಿತ್ರತಂಡ ಅದ್ಧೂರಿಯಾಗಿಯೇ ಮಾಡುತ್ತಿದೆ. ಪ್ರಚಾರದ ಒಂದು ಭಾಗವೆಂಬಂತೆ ನಿನ್ನೆ ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಟ್ರೇಲರ್ ನ್ನೂ ಬಿಡುಗಡೆ ಮಾಡಲಾಗಿದೆ. ಇದೇ ಸಮಯದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ಅಲಯಾ ಗಾಬರಿಯಾದರು. ಹಾಕಿಕೊಂಡಿದ್ದ ಡ್ರೆಸ್‌ನ್ನ ಬಿಗಿಯಾಗಿ ಹಿಡಿದುಕೊಂಡೇ ಇದ್ದರು.

Bollywood Star Akshay Kumar Stepped On Alaya F Dress

ಹೌದು, ಅಸಲಿಗೆ ಟ್ರೇಲರ್ ಬಿಡುಗಡೆ ಸಮಾರಂಭದ ನಂತರ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಮಾನುಶಿ ಚಿಲ್ಲರ್ ಹಾಗೂ ಅಲಯಾ ಕ್ಯಾಮರಾಗಳಿಗೆ ಫೋಸ್ ಕೊಡ್ತಿದ್ದರು. ಗ್ರೂಪ್ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ತಮಗೆ ಗೊತ್ತಿಲ್ಲದಂತೆ ಪಕ್ಕದಲ್ಲಿಯೇ ನಿಂತಿದ್ದ ಅಲಯಾ ಅವರ ಬಟ್ಟೆಯ ಮೇಲೆ ಅಕ್ಷಯ್ ಕುಮಾರ್ ಕಾಲಿಟ್ಟಿದ್ದರು. ಅದೃಷ್ಟ ಅಲಯಾ ಇದನ್ನ ಗಮನಿಸಿದರು.

ಅಕ್ಷಯ್ ಕಾಲ ಬುಡದಲ್ಲಿ ಸಿಲುಕಿದ ತಮ್ಮ ಡ್ರೆಸ್ ಬಿಡಿಸಿಕೊಳ್ಳಲು ಹರಸಾಹಸವನ್ನೂ ಪಟ್ಟರು. ಆದರೆ ಸಾಹಸದಲ್ಲಿ ಅಲಯಾ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಫೋಟೋ ಸೆಷನ್ ಮುಗಿಯುವರೆಗೂ ಅಲಯಾ ಬಟ್ಟೆಯನ್ನ ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದರು. ಹಾಗೂ ಹೀಗೂ ಕೊನೆಗೂ ಡ್ರೆಸ್ ನ ಬಿಡಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Bollywood Star Akshay Kumar Stepped On Alaya F Dress

ಸದ್ಯಕ್ಕೆ ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಅಲಯಾ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಇಷ್ಟುದ್ದ ಬಟ್ಟೆ ಹಾಕಿಕೊಳ್ಳದೇ ಇದ್ದರೆ ಈ ಸಮಸ್ಯೆನೇ ಇರ್ತಿರಲಿಲ್ಲ ಅಂದಿದ್ದಾರೆ. ಇನ್ನೂ ಕೆಲವರು ಇಂತಹ ಸ್ಥಿತಿ ಬರಬಾರದಿತ್ತು ಎಂದು ಅಲಯಾ ಕಾಲೆಳೆಯುತ್ತಿದ್ದಾರೆ

ಅಕ್ಷಯ್ ಕುಮಾರ್ ವರ್ಸಸ್ ಅಜಯ್ ದೇವಗನ್

ಅಂದ್ಹಾಗೇ ಏಪ್ರಿಲ್ ಹತ್ತರಂದು ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಆ ಕಡೆ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಬಡೇ ಮಿಯಾ ಚೋಟೆ ಮಿಯಾ ಚಿತ್ರ ತೆರೆಗೆ ಬಂದರೆ, ಇನ್ನೊಂದು ಕಡೆ ಅಜಯ್ ದೇವಗನ್ ಅಭಿನಯದ ಸತ್ಯಕಥೆಯನ್ನಾದರಿಸಿದ ಮೈದಾನ್ ಸಿನಿಮಾ ತೆರೆಗೆ ಬರುತ್ತಿದೆ.

ಬಡೇ ಮಿಯಾ ಚೋಟೆ ಮಿಯಾ ಚಿತ್ರವನ್ನ ಅಲಿ ಅಬ್ಬಾಸ್​ ಜಫರ್​ ನಿರ್ದೇಶಿಸಿದ್ದರೆ, ಮೈದಾನ್ ಚಿತ್ರವನ್ನ ಅಮಿತ್ ಶರ್ಮಾ ನಿರ್ದೇಶಿಸಿದ್ದಾರೆ. ಈ ಎರಡು ಸಿನಿಮಾಗಳ ಮೇಲೆ ಹಿಂದಿ ಚಿತ್ರರಂಗಕ್ಕೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈ ನಿರೀಕ್ಷೆಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದ ಜೊತೆ ಯಾರು ತೇರ್ಗಡೆಯಾಗುತ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ

More from Filmibeat

English summary
During The Trailer Launch Event Of Bade Miyan Chote Miyan Bollywood Star Akshay Kumar Stepped On Alaya F Dress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X