''ನೀಲಿ'' ಪ್ರಪಂಚದ ''ಜಾನಿ ಸಿನ್ಸ್'' ಈಗ ''ರಣ್‌ವೀರ್ ಸಿಂಗ್'' ಅವರ ''ಸಂತೃಪ್ತ'' ಗ್ರಾಹಕ..!

ರಣ್‌ವೀರ್ ಸಿಂಗ್ ಬಾಲಿವುಡ್ ನ ವಿಚಿತ್ರ ಹಾಗೂ ವಿಕ್ಷಿಪ್ತ ಹೀರೋ. ತನ್ನ ಸ್ಟೈಲ್ ಸ್ಟೇಟ್‌ಮೆಂಟ್ ಗಳಿಂದ ಟ್ರೋಲಿಗರಿಗೆ ಸದಾ ಆಹಾರವಾಗುವ ರಣ್‌ವೀರ್ ಸಿಂಗ್ ಗೆ ಜಗತ್ತು ಯಾವುದನ್ನ ಮಾಡಬೇಡ ಎಂದು ಹೇಳುತ್ತೋ ಅದನ್ನೇ ಮಾಡುವ ಖಯಾಲಿಯೂ ಇದೆ. ಇದಕ್ಕೆ ಪುರುಷರ ಲೈಂಗಿಕ ಸಮಸ್ಯೆ ಜಾಹೀರಾತು ಮತ್ತೊಂದು ಉದಾಹರಣೆ.

ಹೌದು, ನಿಮಗೆ ನೆನಪಿದ್ದರೆ.. ಕೆಲ ದಿನಗಳ ಹಿಂದೆ ರಣ್‌ವೀರ್ ಸಿಂಗ್, ಅಡಲ್ಟ್​ ಸಿನಿಮಾ ಸ್ಟಾರ್ ಜಾನಿ ಸಿನ್ಸ್​ ಜೊತೆ ತೆರೆ ಹಂಚಿಕೊಂಡಿದ್ದರು. 1.49 ನಿಮಿಷದ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಂತಹ ಜಾಹೀರಾತುಗಳಲ್ಲಿ ದಯವಿಟ್ಟು ಅಭಿನಯಿಸಬೇಡಿ ಎಂದು ರಣ್‌ವೀರ್ ಸಿಂಗ್ ಅಭಿಮಾನಿ ಬಳಗ ಆಗ ಕೈ ಮುಗಿದು ಮನವಿಯನ್ನೂ ಮಾಡಿತ್ತು. ಇನ್ನೂ ಟ್ರೋಲ್ ಗಳ ಸಂಖ್ಯೆ ಲೆಕ್ಕಕ್ಕೆ ಇಲ್ಲ.

Bollywood Star Ranveer Singh Reunites With Adult Star Johny Sins Again

ಆದರೂ ತಲೆ ಕೆಡಿಸಿಕೊಳ್ಳದ ರಣ್‌ವೀರ್ ಸಿಂಗ್ ಈಗ ಇನ್ನೊಮ್ಮೆ ಜಾನಿ ಸಿನ್ಸ್​ ಜೊತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಶೀಘ್ರ ಸ್ಖಲನಕ್ಕೆ ಪರಿಹಾರವನ್ನ ಹೇಳಿದ್ದಾರೆ. 1.46 ನಿಮಿಷದ ಜಾಹೀರಾತಿನಲ್ಲಿ ನೀಲಿ ಪ್ರಪಂಚದ ರಾಜ ಜಾನಿ ಸೀನ್ಸ್ ಅವರ ಸಮಸ್ಯೆಯನ್ನೂ ಪರಿಹರಿಸಿರುವ ರಣ್‌ವೀರ್ ಸಿಂಗ್, ನಮ್ಮ ಸಂತೃಪ್ತ ಗ್ರಾಹಕ ಎಂದು ಜಾನಿ ಸಿನ್ಸ್ ಅವರ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ.

ರಣ್‌ವೀರ್ ಸಿಂಗ್ ಹಾಗೂ ಜಾನಿ ಸಿನ್ಸ್ ಅವರ ಈ ಲೈಂಗಿಕತೆಯ ಎರಡನೇ ಪಾಠಕ್ಕೆ ಅನೇಕರು ಬಿದ್ದು ಬಿದ್ದು ನಗುತ್ತಿದ್ದಾರೆ. ಏನ್ ಕ್ರಿಯೇಟಿವಿಟಿ ಗುರು ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಇನ್ನೂ ಟ್ರೋಲ್ ಗುಂಪು ಈ ಬಾರಿಯೂ ರಣ್‌ವೀರ್ ಸಿಂಗ್ ಬೆನ್ನ ಹಿಂದೆ ಬಿದ್ದಿದೆ. ಇದೆಲ್ಲದರ ಪ್ರತಿಫಲ ಎನ್ನುವಂತೆ, ಕೆಲವೇ ಘಂಟೆಗಳಲ್ಲಿ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಿಂದೆ ಬೆತ್ತಲೆ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದ ರಣ್‌ವೀರ್ ಸಿಂಗ್..!

ಎರಡು ವರ್ಷಗಳ ಹಿಂದೆ ಕ್ಯಾಮರಾದಲ್ಲಿ ಬೆತ್ತಲೆಯಾಗಿ ಸೆರೆಯಾಗುವ ಮೂಲಕ, ರಣ್‌ವೀರ್ ಸಿಂಗ್ ಎಲ್ಲರನ್ನ ಅವಕ್ಕಾಗಿಸಿದ್ದರು. ಅವತ್ತು ಕೂಡ ವಾದ ವಿವಾದ ನಡೆದಿತ್ತು. ಪರ-ವಿರೋಧದ ಚರ್ಚೆ ನಡೆದಿತ್ತು. ಇದು ಸಾಲದಕ್ಕೆ ರಣವೀರ್‌ ಸಿಂಗ್‌ ಅವರ ಫೋಟೋಶೂಟ್‌ ನಿಂದ ಮಹಿಳೆಯರ ಭಾವನೆಗಳಿಗೆ ದಕ್ಕೆಯಾಗಿದೆ ಎಂಬ ಕಾರಣಕ್ಕಾಗಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ
ರಣವೀರ್‌ ಸಿಂಗ್ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ರಣ್ ವೀರ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದರು ಕೂಡ.

Bollywood Star Ranveer Singh Reunites With Adult Star Johny Sins Again

ಆ ಒಂದು ಫೋಟೋವನ್ನು ನಾನು ಶೂಟ್‌ ಮಾಡಿಸಿಲ್ಲ. ಗುಪ್ತಾಂಗ ಕಾಣುವಂತೆ ಇರುವ ಆ ಒಂದು ಫೋಟೋ ಮಾತ್ರ ನನ್ನದಲ್ಲ. ಯಾರೋ ನನ್ನ ಪೋಟೋವನ್ನು ಆ ರೀತಿ ತಿರುಚಿದ್ದಾರೆ ಎಂದು ಪೊಲೀಸರಿಗೆ ರಣವೀರ್‌ ಸಿಂಗ್‌ ಅವತ್ತು ಹೇಳಿದ್ದರು. ರಣ್ ವೀರ್ ಸಿಂಗ್ ಕೊಟ್ಟಿದ್ದ ಈ ಹೇಳಿಕೆ ಕೂಡ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು

ಡಾನ್ 03 ಚಿತ್ರದಲ್ಲಿ ರಣ್ ವೀರ್ ಸಿಂಗ್..!

ಸದ್ಯಕ್ಕೆ ರಣ್ ವೀರ್ ಸಿಂಗ್, ಡಾನ್ 03 ಚಿತ್ರದ ಗುಂಗಿನಲ್ಲಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಡಾನ್ 3 ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ರಣ್ ವೀರ್ ಸಿಂಗ್ ಮೇಲೆ ಬಹುದೊಡ್ಡ ಜವಾಬ್ಧಾರಿಯೂ ಇದೆ. ಯಾಕೆಂದರೆ.. ಡಾನ್ ಅವತಾರವನ್ನ ಈ ಹಿಂದೆ ಶಾರುಖ್ ಖಾನ್ ಎತ್ತಿದ್ದರು. ಅದಕ್ಕೂ ಮುನ್ನ ಅಮಿತಾಬ್ ಬಚ್ಚನ್ ಡಾನ್ ಆಗಿದ್ದರು. ಇನ್ನೂ ಡಾನ್ 03 ಯಲ್ಲಿ ಶಾರುಖ್ ಖಾನ್ ಅವರನ್ನ ಹೊರತು ಪಡಿಸಿ, ಬೇರೆ ಯಾರನ್ನೂ ಕಲ್ಪಿಸಿಕೊಳ್ಳುವ ಮನಸು ಬಹುತೇಕ ಸಿನಿ ಪ್ರೇಮಿಗಳಲ್ಲಿ ಇಲ್ಲ. ಹೀಗಾಗಿ ಮುಂಬೈ ಎಂಬ ಮಾಯಾನಗರಿಗೆ ರಣ್ ವೀರ್ ಸಿಂಗ್ ಎಂಬ ಹೊಸ ಡಾನ್ ಬರುತ್ತಿದ್ದಾರೆ ಎಂದು ಹೇಳಿದಾಗ ಚಕಾರ ಎತ್ತಿದವರೇ ಹೆಚ್ಚು

More from Filmibeat

English summary
Bollywood Super Star And Husband Of Deepika Padukone, Ranveer Singh is back with international adult film star Johnny Sins for another hilarious commercial promoting Bold Care, a men's sexual health and wellness brand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X