ಪ್ರೀತಿಯಲ್ಲಿ ಒಂದಲ್ಲ ಎರಡು ಬಾರಿ ಮೋಸ ಹೋಗಿದ್ದೇನೆ ಎಂದ ಶಾಹಿದ್ ಕಪೂರ್..!

ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಎಂಬ ಮಾತು ಬಣ್ಣದ ಪ್ರಪಂಚದಲ್ಲಿ ಕಾಲ..ಕಾಲಕ್ಕೆ.. ಸಾಬೀತಾಗ್ತಾನೇ ಬಂದಿದೆ. ಇವತ್ತು ಒಬ್ಬರ ಜೊತೆ ಕೈ ಹಿಡಿದು ನಡೆದವರು, ನಾಳೆ ಇನ್ಯಾರದ್ದೋ ಜೊತೆಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡ್ತಿರ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಬಾಲಿವುಡ್‌ನಲ್ಲಿವೆ. ಆ ಪೈಕಿ ಶಾಹಿದ್ ಕಪೂರ್ ಜೀವನಾನುಭವ ಕೂಡ ಒಂದು.

ಹೌದು, ಶಾಹಿದ್ ಕಪೂರ್ ಸದ್ಯಕ್ಕೆ ಮೀರಾ ರಜಪೂತ್ ಜೊತೆ ದಾಂಪತ್ಯ ಗೀತೆಯನ್ನ ಹಾಡುತ್ತಿದ್ದಾರೆ. ನೆಮ್ಮದಿಯಾಗಿದ್ದಾರೆ. ಆದರೆ ಇದೇ ಶಾಹಿದ್ ಕಪೂರ್ ಹಿಂದೊಮ್ಮೆ ಬೇರೆಯವರ ಜೊತೆ ಪ್ರೇಮ ಗೀತೆಯನ್ನ ಹಾಡುತ್ತಿದ್ದರು. ಅದು ಒಬ್ಬರ ಜೊತೆ ಅಲ್ಲ ಇಬ್ಬರ ಜೊತೆ. ಆದರೆ.. ಈ ಎರಡು ಸಂದರ್ಭದಲ್ಲಿ ಚಿಗುರೊಡೆದ ಪ್ರೀತಿಯನ್ನ ಚಿವುಟಿ ಹಾಕಿದ್ದು ಯಾರು..? ಅನ್ನುವ ಪ್ರಶ್ನೆ ಶಾಹಿದ್ ಕಪೂರ್ ಅವರ ಅಭಿಮಾನಿಗಳಲ್ಲಿದೆ. ಇಷ್ಟೇ ಅಲ್ಲ ಈ ಪ್ರಶ್ನೆ ಬಾಲಿವುಡ್‌ನ ನಟಿ ನೇಹಾ ಧೂಪಿಯಾ ಅವರಲ್ಲಿಯೂ ಇದೆ. ಈ ಕಾರಣಕ್ಕೆ.. ಮೊನ್ನೆ, ಶಾಹಿದ್ ಕಪೂರ್ ಅವರಿಗೆ ನೇರವಾಗಿಯೇ ಈ ಪ್ರಶ್ನೆಯನ್ನ ಕೇಳಿದ್ದಾರೆ ನೇಹಾ ಧೂಪಿಯಾ

Bollywood Star Shahid Kapoor Claims He Was Cheated On -By Two Of His Ex Girlfriends

ಹೌದು.. ನೇಹಾ ಧೂಪಿಯಾ, ನೋ ಫಿಲ್ಟರ್ ವಿಥ್ ನೇಹಾ ಎಂಬ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊನ್ನೆ ಶಾಹಿದ್ ಕಪೂರ್ ಬಂದಿದ್ದರು. ವಿಶೇಷ ಅಂದರೆ ಶಾಹಿದ್ ಪಕ್ಕದಲ್ಲಿ ಅವರ ಪತ್ನಿ ಮೀರಾ ಕೂಡ ಇದ್ದರು. ಆದರೂ.. ನೇಹಾ ಧೂಪಿಯಾ ಪುರಾತನ ಪ್ರೇಮದ ಬಗ್ಗೆ ಶಾಹಿದ್ ಕಪೂರ್ ಅವರಿಗೆ ಪ್ರಶ್ನೆಯನ್ನ ಕೇಳಿದ್ದಾರೆ. ನೇಹಾ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗದ ಶಾಹಿದ್ ಕಪೂರ್ ತಾವು ಪ್ರೀತಿಯಲ್ಲಿ ಮೋಸ ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ.

ಒಂದು ಹುಡುಗಿ ನನಗೆ ಮೋಸ ಮಾಡಿರುವುದು ನೂರಕ್ಕೆ ನೂರು ಸತ್ಯ ಆದರೆ ಇನ್ನೊಂದು ಹುಡುಗಿಯ ಬಗ್ಗೆ ನನಗೆ ಅನುಮಾನ ಇದೆ ಎಂಬರ್ಥದಲ್ಲಿ ನೇಹಾ ಪ್ರಶ್ನೆಗೆ ಶಾಹಿದ್ ಕಪೂರ್ ಉತ್ತರವನ್ನ ನೀಡಿದ್ದಾರೆ. ಆದರೆ, ಅಪ್ಪಿ ತಪ್ಪಿಯೂ ಆ ಇಬ್ಬರು ಯಾರೆಂದು ಶಾಹಿದ್ ಕಪೂರ್ ಹೇಳಿಲ್ಲ. ನೇಹಾ ಧೂಪಿಯಾ ಹೇಳುವಂತೆ ಒತ್ತಾಯ ಮಾಡಿದರು ಕೂಡ ಶಾಹಿದ್ ಕಪೂರ್
ತುಟಿ ಎರಡು ಮಾಡಿಲ್ಲ.

ಆದರೆ.. ಶಾಹಿದ್ ಕಪೂರ್ ಹೇಳದೇ ಇದ್ದರೂ, ಸಾಮಾಜಿಕ ಜಾಲತಾಣದಲ್ಲಿ ಆ ಇಬ್ಬರು ಹುಡುಗಿಯರ ಪೈಕಿ ಒಬ್ಬರು ಕರೀನಾ ಕಪೂರ್ ಆದರೆ, ಮತ್ತೊಬ್ಬರು ಪ್ರಿಯಾಂಕ ಚೋಪ್ರ ಎಂಬ ಚರ್ಚೆ ನಡೆಯುತ್ತಿದೆ. ಯಾಕೆಂದರೆ.. ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ನಡುವೆ ಇದ್ದ ಸಂಬಂಧ ಆ ಕಾಲಕ್ಕೆ ಜಗಜ್ಜಾಹೀರಾಗಿತ್ತು. ಖುದ್ದು ಕರೀನಾ ಕಪೂರ್ ಈ ಮಾತನ್ನ ಒಪ್ಪಿಕೊಂಡಿದ್ದರು ಕೂಡ. ಇಷ್ಟೇ ಅಲ್ಲ ಶಾಹೀದ್ ಕಪೂರ್ ಮೇಲಿನ ಪ್ರೀತಿಗೆ ಮಾಂಸಾಹಾರವನ್ನ ತ್ಯಜಿಸಿರುವುದಾಗಿ ಕೂಡ ಹೇಳಿದ್ದರು.

Bollywood Star Shahid Kapoor Claims He Was Cheated On -By Two Of His Ex Girlfriends

ಇನ್ನೂ ಪ್ರಿಯಾಂಕ ಚೋಪ್ರಾ ವಿಚಾರಕ್ಕೆ ಬಂದರೆ, ಶಾಹಿದ್ ಕಪೂರ್ ಮತ್ತು ಪ್ರಿಯಾಂಕ ನಡುವೆ ಪ್ರೇಮಾಂಕುರವಾಗಿದ್ದರ ಕುರಿತು ಅನೇಕರಲ್ಲಿ ಅನುಮಾನ ಇದೆ. ಈ ಕಾರಣಕ್ಕೆ ಶಾಹಿದ್ ಕಪೂರ್ ಗೆ ಕೈ ಕೊಟ್ಟಿರುವ ಎರಡು ಹುಡುಗಿಯರಲ್ಲಿ ಪ್ರಿಯಾಂಕ ಚೋಪ್ರಾ ಇರಲು ಸಾಧ್ಯ ಇಲ್ಲ ಅನ್ನುವ ವಾದವನ್ನ ಅನೇಕರು ಮಾಡ್ತಿದ್ದಾರೆ

ಒಟ್ನಲ್ಲಿ ಸದ್ಯಕ್ಕೆ ಶಾಹಿದ್ ಕಪೂರ್ ಅವರ ಈ ಸಂದರ್ಶನದ ತುಣುಕು ವೈರಲ್ ಆಗಿದೆ. ಆ ಇಬ್ಬರು ಹುಡುಗಿಯರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದ್ಹಾಗೇ ಶಾಹಿದ್ ಕಪೂರ್ ಮೀರಾ ರಜಪೂತ್ ಅವರನ್ನ 2015ರಲ್ಲಿ ಮದುವೆ ಆದರು. ಇಬ್ಬರ ಪ್ರೀತಿಯ ಸಂಕೇತವಾಗಿ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನೂ ಚಿತ್ರದ ವಿಚಾರಕ್ಕೆ ಬಂದರೆ ಶಾಹಿದ್ ಕಪೂರ್ ಅಭಿನಯದ ದೇವ ಈ ಅಕ್ಟೋಬರ್‌ ನಲ್ಲಿ ತೆರೆಗೆ ಬರಲಿದೆ

More from Filmibeat

English summary
In a candid conversation on Neha Dhupia's talk show, Shahid Kapoor revealed that he had been cheated on in several of his previous relationships.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X