For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ, ಕುರುಕ್ಷೇತ್ರ ನಂತರ 'ಕರ್ಣ'ನ ಸಿನಿಮಾ: ಐದು ಭಾಷೆಯಲ್ಲಿ ರಿಲೀಸ್

  |

  ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಅದ್ಧೂರಿ ಸಿನಿಮಾ ಶುರುವಾಗಿದೆ. ಮಹಾಭಾರತ ಕಥೆಯಲ್ಲಿ ಬರುವ ದಾನವೀರ ಶೂರ ಕರ್ಣನ ಪಾತ್ರ ಆಧರಿಸಿ ಪೌರಾಣಿಕ ಚಿತ್ರವೊಂದು ತಯಾರಾಗುತ್ತಿದೆ. ಈಗ ತಾನೆ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ''ಸೂರ್ಯಪುತ್ರ ಮಹಾವೀರ ಕರ್ಣ'' ಹೆಸರಿನಲ್ಲಿ ಸಿದ್ದವಾಗಲಿರುವ ಈ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  ಬಾಹುಬಲಿ, ಕುರುಕ್ಷೇತ್ರ ಅಂತಹ ಚಿತ್ರಗಳ ನಂತರ ಮಹಾಭಾರತ ಹಾಗೂ ರಾಮಾಯಣ ಆಧರಿಸಿದ ಸಿನಿಮಾಗಳು ಹೆಚ್ಚಾಗುತ್ತಿದೆ. ಇದಕ್ಕೂ ಮುಂಚೆ ಈ ಚಿತ್ರದಲ್ಲಿ ಸ್ಟಾರ್ ನಟ ನಾಯಕನಾಗಿ ನಟಿಸುವುದಾಗಿ ಹೇಳಲಾಗಿತ್ತು. ಆಮೇಲೆ ಆ ನಟ ಮೆಗಾ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು. ಈಗ ಅದೇ ಪ್ರಾಜೆಕ್ಟ್ ಮತ್ತೆ ಜೀವ ಪಡೆದುಕೊಂಡಿದ್ದು, ಈ ಸಲ ನಾಯಕನ ಪಾತ್ರಕ್ಕೆ ಬಾಲಿವುಡ್ ಹೀರೋ ಎಂಟ್ರಿಯಾಗಲಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೂ, ಕರ್ಣನಾಗಿ ಅಬ್ಬರಿಸಲಿರುವ ಆ ನಟ ಯಾರು? ಮುಂದೆ ಓದಿ...

  ಚಿಯಾನ್ ವಿಕ್ರಮ್ ಔಟ್?

  ಚಿಯಾನ್ ವಿಕ್ರಮ್ ಔಟ್?

  ಸೂರ್ಯಪುತ್ರ ಮಹಾವೀರ ಕರ್ಣ ಸಿನಿಮಾದಲ್ಲಿ ತಮಿಳು ನಟ ವಿಕ್ರಮ್ ನಟಿಸಬೇಕಿತ್ತು. ಆದರೆ, ವಿಕ್ರಮ್ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಿದ್ದ ಕಾರಣ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಮ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಕಾರಣದಿಂದ ಕರ್ಣನ ಪಾತ್ರ ಕೈಬಿಟ್ಟರು ಎನ್ನಲಾಗಿದೆ.

  ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?

  ಬಾಲಿವುಡ್ ನಟನ ಎಂಟ್ರಿ!

  ಬಾಲಿವುಡ್ ನಟನ ಎಂಟ್ರಿ!

  ಚಿಯಾನ್ ವಿಕ್ರಮ್ ಬದಲು ಕರ್ಣನ ಪಾತ್ರಕ್ಕೆ ಬಾಲಿವುಡ್ ನಟರೊಬ್ಬರನ್ನು ಕರೆತರುವ ಯೋಜನೆ ನಡೆಯುತ್ತಿದೆಯಂತೆ. ಸದ್ಯಕ್ಕೆ ಆ ನಟ ಯಾರೆಂದು ಸುಳಿವು ಸಹ ಸಿಕ್ಕಿಲ್ಲ. ಆದರೆ, ಹಿಂದಿ ಚಿತ್ರರಂಗದ ಸ್ಟಾರ್ ನಟ ಕರ್ಣನ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

  ಆರ್‌ಎಸ್ ವಿಮಲ್ ನಿರ್ದೇಶನ

  ಆರ್‌ಎಸ್ ವಿಮಲ್ ನಿರ್ದೇಶನ

  ಅಂದ್ಹಾಗೆ, ಸೂರ್ಯಪುತ್ರ ಮಹಾವೀರ ಕರ್ಣ ಸಿನಿಮಾವನ್ನು ಆರ್‌ಎಸ್ ವಿಮಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಸಹ ಇವರೇ ಮಾಡುತ್ತಿದ್ದಾರೆ. ವಶು ಭಗ್ನಾನಿ, ದೀಪ್ಶಿಖಾ ದೇಶ್ಮುಖ್ ಮತ್ತು ಜಾಕಿ ಭಗ್ನಾನಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಲಿದೆ.

  ಬಾಲಿವುಡ್ ಬಾಕ್ಸ್ ಆಫೀಸ್ ಫೈಟ್: ಸ್ಟಾರ್ ಚಿತ್ರಗಳ ನಡುವೆ ಮೆಗಾವಾರ್ಬಾಲಿವುಡ್ ಬಾಕ್ಸ್ ಆಫೀಸ್ ಫೈಟ್: ಸ್ಟಾರ್ ಚಿತ್ರಗಳ ನಡುವೆ ಮೆಗಾವಾರ್

  ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು | Filmibeat Kannada
  ಪ್ಯಾನ್ ಇಂಡಿಯಾ ಸಿನಿಮಾ

  ಪ್ಯಾನ್ ಇಂಡಿಯಾ ಸಿನಿಮಾ

  ಫೆಬ್ರವರಿ 23 ರಂದು ಅಧಿಕೃತವಾಗಿ ಕರ್ಣನ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಮೋಷನ್ ಪೋಸ್ಟರ್ ಮೂಲಕ ಸಿನಿಮಾ ಅನೌನ್ಸ್ ಮಾಡಿರುವ ಚಿತ್ರತಂಡ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ತಿಳಿಸಿದೆ. ಡಾ ಕುಮಾರ್ ವಿಶ್ವಾಸ್ ಈ ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ ಹಾಗೂ ಹೆಚ್ಚವರಿ ಚಿತ್ರಕಥೆ ಬರಹಗಾರರನಾಗಿ ಕಾರ್ಯನಿರ್ವಹಿಸಲಿದ್ದಾರೆ.

  English summary
  Suryaputra Mahavir Karna motion poster released. Chiyaan Vikram out from this mega project. now, Bollywood star will be playing the lead role In Suryaputra Mahavir Karna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X