ಚಿತ್ರಗಳು: ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು
ನೇಪಾಳದಲ್ಲಿ ಹುಟ್ಟಿ ಬೆಳೆದು ಬಾಲಿವುಡ್ ನಲ್ಲಿ ಖ್ಯಾತಿ ಪಡೆದ ನಟಿ ಮನಿಶಾ ಕೊಯಿರಾಲಾ. 1991 ರಲ್ಲಿ ತೆರೆಕಂಡ 'ಸೌಧಾಗರ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ಮನಿಶಾ ಕೊಯಿರಾಲಾ, '1942: A Love Story', 'ಕ್ರಿಮಿನಲ್', 'ಖಾಮೋಶಿ', 'ದಿಲ್ ಸೇ' ಅಂತಹ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ.
ಬರೀ ಬಾಲಿವುಡ್ ನಲ್ಲಿ ಮಾತ್ರ ಅಲ್ಲ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ಮನಿಶಾ ಕೊಯಿರಾಲಾ ಹೆಸರುವಾಸಿ. 'ಬಾಂಬೆ', 'ಬಾಬಾ' ಸೇರಿದಂತೆ ಅನೇಕ ತಮಿಳು ಸಿನಿಮಾಗಳಲ್ಲಿ ಮನಿಶಾ ನಟಿಸಿದ್ದಾರೆ.
ಎರಡು ವರ್ಷಗಳ ಹಿಂದೆ ತೆರೆಕಂಡ ಎ.ಎಮ್.ಆರ್.ರಮೇಶ್ ನಿರ್ದೇಶನದ ಕನ್ನಡ ಚಿತ್ರ 'ಗೇಮ್'ನಲ್ಲೂ ಮನಿಶಾ ಕೊಯಿರಾಲಾ ಕಾಣಿಸಿಕೊಂಡಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ನಟಿ ಮನಿಶಾ ಕೊಯಿರಾಲಾ, ಇದೀಗ ಬಾಲಿವುಡ್ ನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.
ಇತ್ತೀಚೆಗಷ್ಟೇ ತೆರೆಕಂಡ 'ಸಂಜು' ಸಿನಿಮಾದಲ್ಲಿ ಹಿರಿಯ ನಟಿ ನರ್ಗಿಸ್ ಪಾತ್ರದಲ್ಲಿ ಮನಿಶಾ ಮಿಂಚಿದ್ದರು. ಇಂತಿಪ್ಪ ಮನಿಶಾಗೆ ಈಗ 48ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ಮುಂದೆ ಓದಿರಿ...

ಜನ್ಮದಿನ ಆಚರಿಸಿಕೊಂಡ ಮನಿಶಾ
ನಿನ್ನೆ (ಆಗಸ್ಟ್ 16) ಮನಿಶಾ ಕೊಯಿರಾಲಾ ಜನ್ಮದಿನ. ತಮ್ಮ ಹುಟ್ಟುಹಬ್ಬವನ್ನ ಬಾಲಿವುಡ್ ತಾರೆಯರ ಜೊತೆಗೆ ಮನಿಶಾ ಸೆಲೆಬ್ರೇಟ್ ಮಾಡಿಕೊಂಡರು.

ಮನಿಶಾ ಬರ್ತಡೇ ಪಾರ್ಟಿಯಲ್ಲಿ ಶಾರುಖ್
ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಶಾರುಖ್ ಖಾನ್ ಕೂಡ ಪಾಲ್ಗೊಂಡಿದ್ದರು. ತಮ್ಮ ಒಂದ್ಕಾಲದ ನಾಯಕಿಗೆ ಕೇಕ್ ತಿನ್ನಿಸಿ ಶುಭ ಹಾರೈಸಿದರು ನಟ ಶಾರುಖ್ ಖಾನ್.

ಆಶೀರ್ವಾದ ಮಾಡಿದ ನಟಿ ರೇಖಾ
ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಹಿರಿಯ ನಟಿ ರೇಖಾ ಕೂಡ ಪಾಲ್ಗೊಂಡಿದ್ದರು. ಮನಿಶಾಗೆ ಮನದಾಳದಿಂದ ರೇಖಾ ಆಶೀರ್ವಾದ ಮಾಡಿದರು.

ಬಾಲಿವುಡ್ ದಿಗ್ಗಜರು ಭಾಗಿ
ಮನಿಶಾ ಕೊಯಿರಾಲಾ ಹುಟ್ಟುಹಬ್ಬದಂದು ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಹಲವು ದಿಗ್ಗಜರು ಭಾಗವಹಿಸಿದ್ದರು.


Click it and Unblock the Notifications











