ಈ ಫೋಟೋದಲ್ಲಿರೋ ತಾರೆ ಯಾರೆಂದು ಹೇಳಿ?

By ರವಿಕಿಶೋರ್

ಸಿನೆಮಾ ತಾರೆಗಳ ಬಾಲ್ಯದ ಫೋಟೋಗಳು ಯೌವ್ವನ ಫೋಟೋಗಳಂತೆಯೇ ನೋಡಲು ಚೆಂದ. ನೋಡಿದರೆ ಅಯ್ಯೋ ಇವರಾ? ಈಗ ನೋಡಿದರೆ ಹಿಂಗಿದ್ದಾರೆ, ಆಗ ಮಾತ್ರ ಯಾಕೆ ಹಾಗಿದ್ರು ಎಂದು ಉದ್ಗಾರ ತೆಗೆಯುವವರೇ ಹೆಚ್ಚು. ಸಿನೆಮಾ ತಾರೆಗಳೇನು ದೇವಲೋಕದಿಂದ ಇಳಿದುಬಂದವರೇನು ಅಲ್ಲವಲ್ಲ. ಅವರೂ ನಮ್ಮ ನಿಮ್ಮಂತೆಯೇ ಅಲ್ಲವೆ.

ಇಲ್ಲಿವೆ ನೋಡಿ ಕೆಲವು ಸಿನೆಮಾ ತಾರೆಗಳ ಬಾಲ್ಯದ ಕಾಲದ ಚಿತ್ರಗಳು. ಈ ಫೋಟೋಗಳನ್ನು ನೋಡಿದರೆ ತಕ್ಷಣಕ್ಕೆ ಇವರು ಯಾರೆಂದು ಹೊಳೆಯುವುದಿಲ್ಲ. ಕೆಲವು ತಾರೆಗಳ ಮುಖಚರಹೆ ಥಟ್ಟನೆ ಗೊತ್ತಾಗುತ್ತದೆ. ಇನ್ನು ಕೆಲವರು ಊಹುಂ ಹೊಳೆಯುವುದೇ ಇಲ್ಲ.

ಇಲ್ಲಿ ಐಶ್ವರ್ಯಾ ರೈ, ಕತ್ರಿನಾ ಕೈಫ್, ಕಾಜೋಲ್, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಅವರ ಬಾಲ್ಯದ ಫೋಟೋಗಳಿವೆ. ಒಂದೊಂದುದಾಗಿ ಕ್ಲಿಕ್ಕಿಸುತ್ತಾ ಹೋದರೆ ನಿಮಗೆ ಅಚ್ಚರಿಯಾದರೂ ಅಚ್ಚರಿಯಿಲ್ಲ.

ತಾರೆ ಐಶ್ವರ್ಯಾ ರೈ ಬಾಲ್ಯದ ಚಿತ್ರಗಳು

ತಾರೆ ಐಶ್ವರ್ಯಾ ರೈ ಬಾಲ್ಯದ ಚಿತ್ರಗಳು

ಈಗೇನೋ ಅಭಿನಯದಲ್ಲಿ ಅಭಿನೇತ್ರಿ. ಆಗ ಓದಿನಲ್ಲೂ ಚೂಟಿಯಾಗಿದ್ದರು ಐಶ್ವರ್ಯಾ ರೈ. ಹೈಯರ್ ಸೆಂಕಂಡರಿ ಪರೀಕ್ಷೆಯಲ್ಲಿ ಶೇ.90 ಫಲಿತಾಂಶ ಪಡೆದಿದ್ದರು. ಚಿಕ್ಕಂದಿನಲ್ಲಿ ಆಟಪಾಠಗಳ ಜೊತೆಗೆ ಡಾನ್ಸ್ ಕೂಡ ಕಲಿಯುತ್ತಿದ್ದರು. ಪ್ರಾಣಿಶಾಸ್ತ್ರ ಎಂದರೆ ಪಂಚಪ್ರಾಣ.

ಕಾಜೋಲ್ ಬಾಲ್ಯದಲ್ಲಿ ಸಿಕ್ಕಾಪಟ್ಟೆ ತುಂಟಿ

ಕಾಜೋಲ್ ಬಾಲ್ಯದಲ್ಲಿ ಸಿಕ್ಕಾಪಟ್ಟೆ ತುಂಟಿ

ಬಾಲ್ಯದಲ್ಲಿ ನಾನು ಸಿಕ್ಕಾಪಟ್ಟೆ ತುಂಟಿಯಾಗಿದ್ದೆ ಎಂದು ಕಾಜೋಲ್ ಅವರೇ ಸ್ವತಃ ಒಮ್ಮೆ ಹೇಳಿಕೊಂಡಿದ್ದರು. ಚಿಕ್ಕಂದಿನಲ್ಲೇ ಇವರ ತಂದೆತಾಯಿ ಬೇರ್ಪಟ್ಟಿದ್ದರೂ ಅದರ ದುಷ್ಪರಿಣಾಮ ಕಾಜೋಲ್ ಎಳ್ಳಷ್ಟೂ ತಟ್ಟದಂತೆ ಬೆಳೆಸಿದರು ಅವರ ಮುತ್ತಜ್ಜಿ. ತನ್ನ ಕಾಲ ಮೇಲೆ ತಾನು ನಿಲ್ಲುವುದನ್ನು ಅವರ ತಾಯಿಯಿಂದ ಕಲಿತರಂತೆ.

ಬ್ಯಾಡ್ಮಿಟನ್ ತಾರೆಯಾಗಬೇಕಿದ್ದ ದೀಪಿಕಾ

ಬ್ಯಾಡ್ಮಿಟನ್ ತಾರೆಯಾಗಬೇಕಿದ್ದ ದೀಪಿಕಾ

ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲೇ ದೀಪಿಕಾ ಪಡುಕೋಣೆ ಬ್ಯಾಡ್‌ಮಿಟನ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರ್ತಿಯಾಗಿದ್ದರು. ಆದರೆ ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣ ಅವರು ತಂದೆಯಂತೆ ರಾಷ್ಟ್ರಮಟ್ಟದ ಬ್ಯಾಡ್ಮಿಟನ್ ತಾರೆಯಾಗಲು ಸಾಧ್ಯವಾಗಲಿಲ್ಲ. ಹುಟ್ಟುದ್ದು ಡೆನ್ಮಾರ್ಕ್ ನ ಕೋಪೆನ್ ಹೇಗನ್ ನಲ್ಲಾದರೂ ವಿದ್ಯಾಭ್ಯಾಸ ಪೂರೈಸಿದ್ದು ಬೆಂಗಳೂರಿನಲ್ಲಿ.

ಕಾಲೇಜು ಮೆಟ್ಟಿಲು ಹತ್ತಲೇ ಇಲ್ಲ ಕತ್ರಿನಾ

ಕಾಲೇಜು ಮೆಟ್ಟಿಲು ಹತ್ತಲೇ ಇಲ್ಲ ಕತ್ರಿನಾ

ಕತ್ರೀನಾ ಇನ್ನೂ ಚಿಕ್ಕವಳಿದ್ದಾಗಲೇ ತಂದೆ-ತಾಯಿ ಬೇರೆಯಾದರು. ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟರು. ಮನೆಯ ಅಸ್ಥಿರ-ಪರಿಸ್ಥಿತಿ ಮತ್ತು ಬಿಡುವಿಲ್ಲದ ವಾತಾವರಣದಿಂದಾಗಿ, ಸ್ಕೂಲ್ ನಂತರ ಕಾಲೇಜು ಮೆಟ್ಟಿಲು ಹತ್ತಲೇ ಇಲ್ಲ.

ವಾಲಿಬಾಲ್ ಕ್ರೀಡೆಯಲ್ಲಿ ಪಳಗಿದ್ದ ಶಿಲ್ಪಾ

ವಾಲಿಬಾಲ್ ಕ್ರೀಡೆಯಲ್ಲಿ ಪಳಗಿದ್ದ ಶಿಲ್ಪಾ

ಶಾಲಾ ದಿನಗಳಲ್ಲೇ ಶಿಲ್ಪಾ ಶೆಟ್ಟಿ ವಾಲಿಬಾಲ್ ಕ್ರೀಡೆಯಲ್ಲಿ ಪಳಗಿದ್ದರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ಆಗಿತ್ತು. ಇನ್ನು ಭರತನಾಟ್ಯದಲ್ಲೂ ತರಬೇತಿ ಪಡೆದಿದ್ದರು. ಬಾಲ್ಯದಲ್ಲೇ ಇಷ್ಟೆಲ್ಲಾ ಕಲೆಗಳಲ್ಲಿ ಪರಿಣಿತಳಾಗಿದ್ದ ಶಿಲ್ಪಾ ಚಿತ್ರರಂಗಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.


ಐಶ್ವರ್ಯಾ ರೈ ಅವರ ಬಾಲ್ಯದ ಫೋಟೋ ನೋಡಿದರೆ ನಂಬಿಕೇನೇ ಬರಲ್ಲ. ಕಾಜೋಲ್ ಅವರನ್ನು ಗುರುತುಹಿಡಿಯಬಹುದು. ದೀಪಿಕಾ ಪಡುಕೋಣೆ ಕೆನ್ನೆ ಮೇಲಿನ ಡಿಂಪಲ್ ನಿಂದ ಬಲುಬೇಗನೆ ಪತ್ತೆಯಾಗುತ್ತಾರೆ. ಶಿಲ್ಪಾಶೆಟ್ಟಿ ಫೋಟೋ ಅಂತೂ ಗುರುತು ಸಿಕ್ಕೂ ಸಿಗದಂತಿದೆ. ಒಂದೊಂದಾಗಿ ನೋಡುತ್ತಾ ಹೋಗಿ ನಿಮಗೇ ಗೊತ್ತಾಗುತ್ತದೆ.

ನಿಮಗೆ ಸಿನೆಮಾ ತಾರೆಗಳ ಮತ್ತಷ್ಟು ಬಾಲ್ಯದ ಚಿತ್ರಗಳು ಬೇಕೆಂದರೆ ಈ ಕೊಂಡಿಯನ್ನು ಬಳಸಿ ಸಾಗಬಹುದು. ಇಲ್ಲಿ ಮತ್ತಷ್ಟು ಬಾಲಿವುಡ್ ತಾರೆಗಳ ಬಾಲ್ಯಕಾಲದ ಚಿತ್ರಣ ನಿಮ್ಮ ಕಣ್ಮನ ತಣಿಸುತ್ತವೆ.

More from Filmibeat

English summary
Find out about 'Bollywood Stars Unseen childhood pics. Bollywood stars Aishwarya Rai, Katrina Kaif, Kajol, Shilpa Shetty and Deepika Padukone childhood photos are here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X